ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ಯೋಜನೆ ಕುರಿತ ಈ ಅಂಕಿ ಅಂಶ ಗಾಬರಿಗೊಳಿಸುತ್ತದೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 29: ಕುಟುಂಬ ಯೋಜನೆ ಬಗ್ಗೆ ಭಾರತದ ಬಹುತೇಕರಿಗೆ ಗೊತ್ತಿದೆ ಆದರೆ ಜನಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ತಾಯಂದಿರ ಹಾಗೂ ಮಕ್ಕಳ ಸಾವಿನ ಸಂಖ್ಯೆಯೂ ನಿಲ್ಲುತ್ತಿಲ್ಲ.

ವೈದ್ಯಕೀಯ ರಂಗ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆ, ಸಾವಿರಾರು ಎನ್‌ಜಿಓಗಳು, ವಿಶ್ವಸಂಸ್ಥೆ ಒಟ್ಟಾಗಿ ಹಲವು ವರ್ಷದಿಂದ ದುಡಿಯುತ್ತಿದ್ದರೂ ಸಹಿತ ಶಿಶು ಮರಣದಲ್ಲಿ ಭಾರತ ಮೊದಲಿನಲ್ಲಿದೆ ತಾಯಂದಿರ ಮರಣ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಆಘಾತಕಾರಿ.

ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!

ಕುಟುಂಬ ಯೋಜನೆ ಕೇವಲ ಹೆಣ್ಣು ಮಕ್ಕಳ ಮೇಲೆಯೇ ಹೇರಲ್ಪಡುತ್ತಿದೆ ಹಾಗಾಗಿಯೇ ದೇಶದಲ್ಲಿ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ತಾರಕದಲ್ಲಿದೆ ಎಂಬುದು ಪರಿಣಿತರ ವಾದ ಇದಕ್ಕೆ ಪುಷ್ಠಿ ನೀಡುತ್ತದೆ ಭಾರತದಲ್ಲಿ ಕುಟುಂಬ ಯೋಜನೆಯ ಈ ಅಂಕಿ ಅಂಶ.

ಗರ್ಭ ನಿರೋಧಕ್ಕೆ ಅಸುರಕ್ಷಿತ ಪದ್ಧತಿಗಳ ಬಳಕೆ

ಗರ್ಭ ನಿರೋಧಕ್ಕೆ ಅಸುರಕ್ಷಿತ ಪದ್ಧತಿಗಳ ಬಳಕೆ

ಭಾರತದಲ್ಲಿ ಗರ್ಭ ಪಾತ ಅಥವಾ ಗರ್ಭ ನಿರೋಧಕ್ಕೆ ಅತ್ಯಂತ ಅಮಾನವೀಯ, ಅಸುರಕ್ಷಿತ, ಗೊಡ್ಡು ಪದ್ಧತಿಗಳನ್ನು ಅನುರಿಸಲಾಗುತ್ತದೆ. ಪರಂಗಿ ಹಣ್ಣು ತಿನ್ನುವುದು, ಬೆನ್ನಿಗೆ ಬರೆ ಹಾಕಿಸಿಕೊಳ್ಳುವುದು, ಕಾದ ಸಲಾಕೆಗಳ ಬಳಕೆಯಂತ ಅಮಾನವೀಯ ಪದ್ಧತಿ ಹಿಂದುಳಿದ ಪ್ರದೇಶಗಳಲ್ಲಿ ಬಳಕೆಯಿದೆ. ಭಾರತದಲ್ಲಿ ಈಗಲೂ ಅಸುರಕ್ಷಿತ ಗರ್ಭ ನಿರೋಧಕ ಪದ್ಧತಿ ಬಳಸುವವರ ಸಂಖ್ಯೆ 12.9% ಇದ್ದಾರಂತೆ. ಈ ಎಲ್ಲಾ ಪದ್ಧತಿಗಳು ಬಳಕೆಯಾಗುವುದು ಹೆಣ್ಣಿನ ಮೇಲಷ್ಟೆ ಗಂಡಿಗಲ್ಲ.

ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ

ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ

ಮಹಿಳೆಯರ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರ ಪ್ರಮಾಣ 36% ಇದೆ. ಈ ಸಂಖ್ಯೆ ಅತ್ಯಂತ ಕಡಿಮೆಯೆಂದೇ ಹೇಳಬೇಕು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರಾದರೂ ಮಕ್ಕಳ ನಡುವಿನ ಅಂತರ ಅಥವಾ ಸ್ವ ಆರೋಗ್ಯದ ಬಗ್ಗೆ ಮಾಹಿತಿಯ ಕೊರತೆ ಈಗಲೂ ಮಹಿಳೆಯರಿಗಿದೆ ಎನ್ನುತ್ತಾರೆ ಪರಿಣಿತರು.

ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ

ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ

ಪುರುಷರ ಸಂತಾನಹರಣ ಶಸ್ತ್ರ ಚಿಕಿತ್ಸೆ ಕುಟುಂಬ ಯೋಜನೆಯ ಅತ್ಯುತ್ತಮ ವಿಧಾನ. ಇದು ಬಹಳ ಸುರಕ್ಷಿತವೂ ಹೌದು, ಹಾಗೂ ಮಹಿಳೆಯರ ಮೇಲೆ ಆಗುವ ಒತ್ತಡವನ್ನು ತಡೆಯುವ ಅತ್ಯುತ್ತಮ ವಿಧಾನವೂ ಹೌದು. ಆದರೆ ಭಾರತದಲ್ಲಿ ವ್ಯಾಸೆಕ್ಟಮಿ ಅಥವಾ ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸರಾಸರಿ 0.3% ಅಷ್ಟೆ. ಅಂದರೆ 10000 ಜನರಿಲ್ಲಿ ಕೇವಲ 3 ಜನ ಮಾತ್ರವೇ ಪುರುಷರಷ್ಟೇ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.

ಐಯುಡಿ ಅಳವಡಿಸಿಕೊಳ್ಳುವವರ ಸಂಖ್ಯೆ

ಐಯುಡಿ ಅಳವಡಿಸಿಕೊಳ್ಳುವವರ ಸಂಖ್ಯೆ

ಯುಡಿಐ ಅಳವಡಿಸಿಕೊಳ್ಳುವ ಮಹಿಳೆಯರ ಪ್ರಮಾಣ ಕೂಡ ಭಾರತದಲ್ಲಿ ಕಡಿಮೆ ಇದೆ. ಯುಡಿಐ ಹಾಗೂ ಪಿಪಿಐಯುಡಿಸಿ ಅಳವಡಿಸಿಕೊಳ್ಳುವ ಮಹಿಳೆಯರ ಪ್ರಮಾಣ ಕೇವಲ 1.5% ಇದೆ. ಇದು ಸುರಕ್ಷತವಾಗಿದ್ದು, ಗರ್ಭ ಧರಿಸಬೇಕು ಎನಿಸಿದಾಗ ಈ ಉಪಕರಣಗಳನ್ನು ತೆಗೆಸಿಕೊಂಡರೆ ಸಾಕು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಮತ್ತೆ ಮಗು ಪಡೆಯುವ ಅವಕಾಶ ಇರುವುದಿಲ್ಲ.

ಮಾತ್ರೆಗಳ ಬಳಕೆ

ಮಾತ್ರೆಗಳ ಬಳಕೆ

ಗರ್ಭ ನಿರೋಧಿಸಲು ಮಾತ್ರೆಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಆದರೆ ಮಾತ್ರೆಗಳ ಬಳಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಭಯ ಇರುವ ಕಾರಣ ಮಹಿಳೆಯರು ಇದರ ಬಗ್ಗೆ ಅಂಜುತ್ತಾರೆ ಎನ್ನುತ್ತಾರೆ ತಜ್ಞರು. ಗರ್ಭ ನಿರೋಧಕ್ಕೆ ಮಾತ್ರೆ ತೆಗೆದುಕೊಳ್ಳುವವರ ಸರಾಸರಿ 4.1 ಮಾತ್ರ. ಈ ಮಾತ್ರೆಗಳ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಕಾಂಡೋಮ್‌ಗಳ ಬಳಕೆ ಸಹ ಕಡಿಮೆ

ಕಾಂಡೋಮ್‌ಗಳ ಬಳಕೆ ಸಹ ಕಡಿಮೆ

ಕುಟುಂಬ ಯೋಜನೆ, ಗರ್ಭ ನಿರೋಧಕ್ಕೆ ಹಿಂದಿನಿಂದಲೂ ಹೆಚ್ಚು ಬಳಕೆಯಾಗುತ್ತಿರುವ ಕ್ರಮ ಕಾಂಡೋಮ್ ಬಳಕೆ ಆದರೆ ಕಾಂಡೋಮ್ ಬಳಸುವವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿಗೇನು ಇಲ್ಲ. ಅಷ್ಟೆಲ್ಲಾ ಸರ್ಕಾರಿ ಜಾಹೀರಾತುಗಳು, ಉಚಿತ ಕಾಂಡೋಮ್ ವಿತರಣೆ ಬಳಿಕವೂ ಭಾರತದಲ್ಲಿ ಕಾಂಡೋಮ್ ಬಳಸುವವರು 5.6% ಮಾತ್ರವೇ ಅಂತೆ.

English summary
There are so many family planing methods in India but very few people using that. Here are statistics about family planing methods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X