• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕ ಜಮೀರ್ ಅಹ್ಮದ್‌ಗೆ ವಾಚ್‌ ಮ್ಯಾನ್ ಕೆಲಸ ಖಾಲಿಯಿದೆ!

|

ಬೆಂಗಳೂರು, ಸೆ. 14: ಡ್ರಗ್ಸ್ ತನಿಖೆ ಸಂದರ್ಭದಲ್ಲಿ ಸಿಸಿಬಿ ತನಿಖೆಗಿಂತ ವೇಗವಾಗಿ ರಾಜಕೀಯ ನಾಯಕರು ಸಾಕ್ಷಿ ಬಿಡುಗಡೆ ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳು ಜೋರಾಗಿಯೆ ವಿನಿಮಯವಾಗುತ್ತಿವೆ. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಕೂಡ ಹಲವು ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಹಲವು ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ.

ಸಿಸಿಬಿ ಪೊಲೀಸರು ಹುಡುಕುತ್ತಿರುವ ಸೆಲೆಬ್ರಿಟಿಗಳಿಗೆ ಔತಣಕೂಟ ನಿಯೋಜನೆ ಮಾಡುತ್ತಿದ್ದ ಫಾಸಿಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಇರುವ ಫೋಟೊಗಳನ್ನು ಸುದ್ದಿಗೋಷ್ಠಿಯಲ್ಲಿ ಸಚಿವ ಸಿ.ಟಿ. ರವಿ ಪ್ರದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಈ ಫೋಟೋಗಳು ಜನ್ಮ ಜನ್ಮಾಂತರದ ಸಂಬಂಧ ಇದೆ ಎಂಬುದನ್ನು ಹೇಳುತ್ತಿವೆ ಎಂದು ಆರೋಪಿಸಿದರು. ಮತ್ತೊಂದೆಡೆ ಡ್ರಗ್ ಮಾಫಿಯಾದೊಂದಿಗೆ ನಂಟಿನ ಆರೋಪ ಹೊಂದಿರುವವರು ಜೈಲು ಸೇರಿದ್ದಾರೆ.

ಡ್ರಗ್ಸ್ ಪೆಡ್ಲರ್ ಅಂತ ಹೇಳುವುದಿಲ್ಲ

ಡ್ರಗ್ಸ್ ಪೆಡ್ಲರ್ ಅಂತ ಹೇಳುವುದಿಲ್ಲ

ಈ ಫೋಟೊಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್ ಅಹ್ಮದ್ ಎಲ್ಲರೂ ಇದ್ದಾರೆ. ಇದು ಬಹಳ ಆತ್ಮೀಯ ಸಂಬಂಧ ಅಂತ ಈ ಮುಖಭಾವ ಹೇಳುತ್ತಿದೆ. ಇದು ಯಾವುದೋ ಕುಟುಂಬದ ಕಾರ್ಯಕ್ರಮ. ಇದು ಅಪರಚಿತರ ಜೊತೆ ತೆಗೆಸಿಕೊಂಡು ಫೋಟೊವಂತೂ ಅಲ್ಲವೇ ಅಲ್ಲ. ಈಗ ತನಿಖೆ ನಡೆಯುತ್ತಿದೆ‌ . ನಾನು ಈಗಲೇ ಇವರನ್ನು ಡ್ರಗ್ಸ್ ಪೆಡ್ಲರ್ ಅಂತ ಹೇಳುವುದಿಲ್ಲ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ ದ್ವಿವೇದಿ

ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳೊದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯೋದೂ ಬೇಡ. ಕಳ್ಳನ ಹೆಂಡತಿ ಯಾವತ್ತಾದರೂ ಒಂದು ದಿನ ಡ್ಯಾಷ್ ಆಗಲೇಬೇಕು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರ ವಿರುದ್ದ ಸಚಿವ ಸಿ.ಟಿ. ರವಿ ಅವರು ವಾಗ್ದಾಳಿ ನಡೆಸಿದರು.

ವಾಚ್‌ಮ್ಯಾನ್ ಕೆಲಸ ಖಾಲಿ ಇದೆ

ವಾಚ್‌ಮ್ಯಾನ್ ಕೆಲಸ ಖಾಲಿ ಇದೆ

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಮಾತಿನಲ್ಲಿ ಎಷ್ಟು ಸತ್ಯ ಇರುತ್ತದೆ? ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ವಾಚ್ ಮ್ಯಾನ್ ಆಗಿರುತ್ತೇನೆ ಎಂದಿದ್ದರು. ಈಗ ವಾಚ್‌ಮ್ಯಾನ್ ಕೆಲಸ ಖಾಲಿ ಇದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರ್ಚೆ ಆಗುತ್ತಿದೆ. ಯಾವಾಗ ವಾಚ್‌ಮ್ಯಾನ್ ಆಗುತ್ತೀಯಾ? ಅಂತ ಕೇಳುತ್ತಿದ್ದಾರೆ.

ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತೆ ಅಂತ ಜಮೀರ್ ಹೇಳಿಕೆ ಕೊಟ್ಟಿದ್ದಾರೆ. ಯಾವ ರೀತಿ ನೆಮ್ಮದಿ ಅಲ್ಲಿ ಸಿಗುತ್ತದೆ ಎಂಬುದನ್ನೂ ಹೇಳಲಿ. ಈ ಬಗ್ಗೆ ಅವರು ಬೆಳಕು ಚೆಲ್ಲಲಿ. ಶಾಸಕ ಜಮೀರ್ ಅಹ್ಮದ್ ಅವರ ಪಾಸ್ ಪೋರ್ಟ್ ಪರಿಶೀಲನೆ ಮಾಡಿಸಬೇಕು. ಮುಚ್ಚಿಟ್ಟರೆ ಸಂಶಯದ ಸುಳಿಯೊಳಗೆ ಸಿಲುಕುತ್ತೀರಿ ಎಂದು ಸಿ.ಟಿ. ರವಿ ಅವರು ಆಗ್ರಹಿಸಿದ್ದಾರೆ.

ತನಿಖೆ ತೀವ್ರಗೊಳಿಸಿದ ಸಿಸಿಬಿ

ತನಿಖೆ ತೀವ್ರಗೊಳಿಸಿದ ಸಿಸಿಬಿ

ಒಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಮತ್ತೊಂದೆಡೆ ಸಿಸಿಬಿ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಾಹಿತಿ ಕಲೆ ಹಾಕುತ್ತಿರುವ ಅವರು ಪ್ರಭಾವಿಗಳಿಗೆ ಔತಣಕೂಟ ಏರ್ಪಡಿಸುತ್ತಿದ್ದ ಆರೋಪ ಎದುರಿಸುತ್ತಿರುವ ಫಾಸಿಲ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಫಾಸಿ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಜಮೀರ್ ಅಹ್ಮದ್ ಜತೆ ಕೊಲಂಬೋಗೆ ಹೋಗಿದ್ದು ಏಕೆ? ಕುಮಾರಸ್ವಾಮಿ ಹೇಳಿದ ಸಂಗತಿ

  ಗಡಿಯಲ್ಲಿ ಕೆಣಕಿದ್ದಕ್ಕೆ ತಕ್ಕ ಉತ್ತರಕೊಟ್ಟ ಭಾರತದ | Oneindia Kannada
  ಪರಪ್ಪನ ಅಗ್ರಹಾರ ಸೇರಿದ ಆರೋಪಿಗಳು

  ಪರಪ್ಪನ ಅಗ್ರಹಾರ ಸೇರಿದ ಆರೋಪಿಗಳು

  ಇನ್ನು ಡ್ರಗ್ಸ್ ಮಾಫಿಯಾದೊಂದಿಗೆ ನಂಟಿನ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಪರಪ್ಪನ ಅಗ್ರಹಾರ ಕಾರಾಗ್ರಹ ಸೇರಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಇತರ ಆರೋಪಿತರಾದ ಲೂಮ್ ಪೆಪ್ಪರ್, ಪ್ರಶಾಂತ ರಾಂಕಾ, ರಾಹುಲ್ ನಿಯಜ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

  ನಟಿ ಸಂಜನಾ ಗುಲ್ರಾನಿ, ವಿರೇನ್ ಖನ್ನಾ ಹಾಗೂ ರವಿಶಂಕರ್‌ ಅವರಿಗೆ ಸಿಸಿಬಿ ಕಸ್ಟಡಿ ಮುಂದುವರೆದಿದೆ. ನಟಿ ಸಂಜನಾ ಸೇರಿದಂತೆ ತಮ್ಮ ಕಸ್ಟಡಿಯಲ್ಲಿರುವವರಿಂದ ಮತ್ತಷ್ಟು ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.

  English summary
  Minister CT Ravi has released photos of Former CM Siddaramaiah and former minister Zameer Ahmed Khan along with Fazil accused of drug mafia, Know more
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X