ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯಡಿಯೂರಪ್ಪ ಭೋಜನಕೂಟಕ್ಕೆ ಗೈರು; ಶಾಸಕರು ಕೊಟ್ಟ ಕಾರಣ ಏನು?

|
Google Oneindia Kannada News

ಬೆಂಗಳೂರು, ಫೆ. 03: ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ (ಫೆ.02) ರಾತ್ರಿ ಭೋಜನ ಕೂಟ ಏರ್ಪಡಿಸಿದ್ದರು. ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಬಿಜೆಪಿಯ 25 ಶಾಸಕರು ಗೈರಾಗುವ ಮೂಲಕ ಯಡಿಯೂರಪ್ಪ ಅವರಿಗೆ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ನೇರವಾಗಿ ರವಾನಿಸಿದ್ದರು. ಹೀಗಾಗಿ ಯಾವ ಉದ್ದೇಶವನ್ನಿಟ್ಟುಕೊಂಡು ಸಿಎಂ ಭೋಜನಕೂಟ ಆಯೋಜಿಸಿದ್ದರೊ? ಅದು ಈಡೇರಿರಲಿಲ್ಲ. ಈ ಮಧ್ಯೆ ನಿನ್ನೆ ಭೋಜನ ಕೂಟಕ್ಕೆ ಗೈರಾಗಿರುವುದರ ಕುರಿತು ಕೆಲವು ಶಾಸಕರು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.

Recommended Video

ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada

ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದಿದ್ದಾರೆ. ಆದರೂ ಭೋಜನ ಕೂಟಕ್ಕೆ ಗೈರು ಹಾಜರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ವತಃ ಆಹ್ವಾನಿಸಿದರೂ ಗೈರಾಗಿದ್ದು ಯಾಕೆ ಎಂಬುದರ ಬಗ್ಗೆ ಶಾಸಕರು ಕೊಟ್ಟಿರುವ ಕಾರಣಗಳು ಹಾಗೂ ಸ್ಪಷ್ಟನೆ ಹೀಗಿವೆ.

ಸಿಎಂ ಯಡಿಯೂರಪ್ಪ ಕರೆದಿದ್ದ ಭೋಜನ ಕೂಟಕ್ಕೆ ಗೈರಾದ ಶಾಸಕರು ಯಾರು? ಯಾಕೆ?ಸಿಎಂ ಯಡಿಯೂರಪ್ಪ ಕರೆದಿದ್ದ ಭೋಜನ ಕೂಟಕ್ಕೆ ಗೈರಾದ ಶಾಸಕರು ಯಾರು? ಯಾಕೆ?

ಶಾಸಕ ಸೋಮಶೇಖರ್ ರೆಡ್ಡಿ

ಶಾಸಕ ಸೋಮಶೇಖರ್ ರೆಡ್ಡಿ

ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆದಿದ್ದ ಭೋಜನ ಕೂಟಕ್ಕೆ ಗೈರು ಹಾಜರಾಗಿರುವ ಕುರಿತು ಶಾಸಕ ಸೋಮಶೇಖರ್ ರೆಡ್ಡಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಮತಿ ಪಡೆದೇ ಹೋಗಿದ್ದೆ. ನನಗೆ ಅವರ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಆದರೆ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆ ವಿಭಜನೆ ಆಗಲ್ಲ ಎಂದು ಹೇಳುವ ಮೂಲಕ ತಾವು ಭೋಜನ ಕೂಟಕ್ಕೆ ಗೈರಾಗಿದ್ದು ಯಾಕೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯೆ

ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯೆ

ಭೋಜನ ಕೂಟಕ್ಕೂ ಮೊದಲೇ ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಚಿಕ್ಕಮಗಳೂರಿನ ನಿಯೋಗದ ಜೊತೆ ಹೋಗಿ ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಬೇರೆ ಕೆಲಸ ಇದೇ ಎಂದು ಹೇಳಿ ಹೋಗಿದ್ದೆ. ನನ್ನ ಹಾಗೂ ಸಿಎಂ ಯಡಿಯೂರಪ್ಪ ಅವರ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದು ಸಿ.ಟಿ. ರವಿ ಅವರು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ನಡೆದಿದ್ದ ಭೋಜ ಕೂಟ

ನಿನ್ನೆ ನಡೆದಿದ್ದ ಭೋಜ ಕೂಟ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ಕಾವೇರಿಯಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಆ ಮೂಲಕ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಸಿಎಂ ಮಾಡಿದ್ದರು ಎನ್ನಲಾಗಿದೆ. ಆದರೆ ಪ್ರಮುಖವಾಗಿ ಅವರ ಮೇಲೆ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಶಾಸಕರು ಗೈರು ಹಾಜರಾಗುವ ಮೂಲಕ ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.


ಜೊತೆಗೆ ವಿಧಾನಸೌಧದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಸಭೆ ಸೇರಿದ್ದ ಮೂಲ ಬಿಜೆಪಿಯ 14 ಶಾಸಕರು ಭೋಜನ ಕೂಟಕ್ಕೆ ಹೋಗಿಲ್ಲ. ಜೊತೆಗೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭೋಜನ ಕೂಟಕ್ಕೆ ಹೋಗಿರಲಿಲ್ಲ, ಅವರು ಯಾರೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಭೋಜನ ಕೂಟಕ್ಕೆ ಗೈರಾದವರು

ಭೋಜನ ಕೂಟಕ್ಕೆ ಗೈರಾದವರು

ಸಚಿವರಾದ ಆನಂದ್ ಸಿಂಗ್, ಎಸ್‌. ಸುರೇಶ್ ಕುಮಾರ್ ಹಾಗೂ ಜೆ.ಸಿ.‌ ಮಾಧುಸ್ವಾಮಿ ಅವರು ಸಿಎಂ ಭೋಜನ ಕೂಟಕ್ಕೆ ಗೈರು ಹಾಜರಾಗಿದ್ದಾರೆ. ಆ ಮೂಲಕ ಖಾತೆ ಹಂಚಿಕೆ ಕುರಿತು ತಮ್ಮ ಅಸಮಾಧಾವವನ್ನು ಮುಂದುವರೆಸಿದ್ದಾರೆ. ಜೊತೆಗೆ ಶಾಸಕರಾದ ಮಹಾಂತೇಶ ದೊಡ್ಡಗೌಡ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಕಳಕಪ್ಪ ಬಂಡಿ, ಅರವಿಂದ ಬೆಲ್ಲದ್, ದಿನಕರ ಶೆಟ್ಟಿ, ವಿ. ಸುನೀಲ್ ಕುಮಾರ್, ಅರುಣ್ ಕುಮಾರ್, ಸೋಮಶೇಖರ್ ರೆಡ್ಡಿ, ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಕರುಣಾಕರ ರೆಡ್ಡಿ, ಸತೀಶ್ ರೆಡ್ಡಿ, ಉದಯ ಗರುಡಾಚಾರ್, ಎಂ.ಪಿ. ಕುಮಾರಸ್ವಾಮಿ, ಸಿ.ಟಿ. ರವಿ, ಡಿ.ಎಸ್. ಸುರೇಶ್, ಎಚ್. ನಾಗೇಶ್ ಹಾಗೂ ಸುನೀಲ್ ನಾಯಕ್‌ ಅವರುಗಳು ಮುಖ್ಯಮಂತ್ರಿ ಯಡಿಯೂರಪ್ಪ ಆಯೋಜಿಸಿದ್ದ ಭೋಜನ ಕೂಟಕ್ಕೆ ಗೈರಾಗಿದ್ದರು.

English summary
C.T. Ravi and Somashekhar Reddy clarified on non-participation of dinner party hosted by CM Yediyurappa yesterday on Feb 02. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X