ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇತನ ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ; ಸಂಬಳ ಏರಿಕೆ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಕರ್ನಾಟಕ ರಾಜ್ಯ ನೌಕರರ ಪ್ರಮುಖ ಬೇಡಿಕೆ ಈಡೇರುವ ಕಾಲ ಒದಗಿ ಬಂದಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಅನುಗುಣವಾಗಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಸಿಗಲಿ ಎಂಬ ಬೇಡಿಕೆ ಕಾರ್ಯರೂಪಕ್ಕೆ ಇನ್ನೇನು ಬರಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾದರಿಯ ವೇತನ ನೀಡುವ ಭರವಸೆ ನೀಡಿದ್ದಾರೆ. ವೇತನ ಪರಿಷ್ಕರಣೆ ಕುರಿತಂತೆ ಆಯೋಗ ರಚನೆಗಾಗಿ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದರು. ಕಳೆದ ಹಲವು ವರ್ಷಗಳಿಂದ ರಾಜ್ಯ ನೌಕರರ ಸಂಘದ ವತಿಯಿಂದ ಸರ್ಕಾರ ಸಲ್ಲಿಸಿದ ಬೇಡಿಕೆಯಲ್ಲಿ ಈ ಅಂಶ ಪ್ರಮುಖವಾಗಿತ್ತು.

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ರದ್ದು ಮಾಡ್ತಾರಾ ಸಿಎಂ?ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ರದ್ದು ಮಾಡ್ತಾರಾ ಸಿಎಂ?

ಇಂದು ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 7ನೇ ವೇತನ ಆಯೋಗದಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಮಿತಿ ರಚನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು. ಸಿಎಂ ಅವರ ಘೋಷಣೆ ಬೆನ್ನಲ್ಲೇ ಸಂಜೆ ವೇಳೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಹೂಗುಚ್ಛ ನೀಡಿ ಧನ್ಯವಾದ ಅರ್ಪಿಸಿದರು.

ಯಾವಾಗ ವೇತನ ಆಯೋಗ ಅನುಷ್ಠಾನಕ್ಕೆ?

ಯಾವಾಗ ವೇತನ ಆಯೋಗ ಅನುಷ್ಠಾನಕ್ಕೆ?

ಕೊವಿಡ್ 19 ಸಾಂಕ್ರಾಮಿಕದ ಕಾಲದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕಳೆದ ವರ್ಷದಿಂದ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ತುಟ್ಟಿಭತ್ಯೆ ಪರಿಹಾರ (DA arrears) ಬಾಕಿ ಒದಗಿಸುವ ಸುದ್ದಿ ಬಂದಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಈ ವಾರದಲ್ಲೇ ನಿರ್ಧಾರ ಕೈಗೊಳ್ಳಲಿದ್ದು, ಡಿಆರ್ ಬಾಕಿ ಮೊತ್ತ ಪಾವತಿ ಬಗ್ಗೆ ಅಂತಿಮ ತೀರ್ಮಾನ ಹೊರಬರಲಿದೆ. ಅದೇಶ ಹೊರಬಂದರೆ ಸರಿ ಸುಮಾರು 2 ಲಕ್ಷ ರು ನಷ್ಟು ಬಾಕಿಮೊತ್ತ ಸಿಗಲಿದೆ.

ಇದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ ಮೂರು ಅವಧಿಯ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಈಗ ಹೊಸ ವೇತನ ಆಯೋಗ ರಚನೆ ಬಗ್ಗೆ ಘೋಷಣೆಯಾಗಿದ್ದು, ಬಹುತೇಕ ಜುಲೈ 2022ರ ವೇಳೆಗೆ ಹೊಸ ಆಯೋಗ ಅನುಷ್ಠಾನಕ್ಕೆ ಬರಲಿದ್ದು, ಆಯೋಗದ ಶಿಫಾರಸ್ಸಿನ ಅನ್ವಯ ಮೂಲ ವೇತನ, ಸಂಬಳ ಏರಿಕೆ, ತುಟ್ಟಿಭತ್ಯೆ ಹೆಚ್ಚಳವಾಗಲಿದೆ.

ಆಂಧ್ರಪ್ರದೇಶ ನಂತರ ಈ ರಾಜ್ಯದ ನೌಕರರಿಗೂ ಡಿಎ ಹೆಚ್ಚಳ ಗಿಫ್ಟ್ಆಂಧ್ರಪ್ರದೇಶ ನಂತರ ಈ ರಾಜ್ಯದ ನೌಕರರಿಗೂ ಡಿಎ ಹೆಚ್ಚಳ ಗಿಫ್ಟ್

ಮೂಲ ವೇತನದ 5ರಷ್ಟು ಹೆಚ್ಚಳಕ್ಕೆ ಮನವಿ

ಮೂಲ ವೇತನದ 5ರಷ್ಟು ಹೆಚ್ಚಳಕ್ಕೆ ಮನವಿ

ಕೇಂದ್ರ ಸರ್ಕಾರಿ ನೌಕರರಿಗೆ ನೀಡಿದಂತೆ ಮೂಲ ವೇತನದ 5ರಷ್ಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ 4.25ರಷ್ಟು ಹೆಚ್ಚಳಕ್ಕೆ ಮನವಿ ಬಂದಿತ್ತು. ಆದರೆ, ಈ ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವು ಜನವರಿ 01, 2018ರಿಂದ ಪೂರ್ವಾನ್ವಯವಾಗುವಂತೆ ಶೇ 1.75ರಷ್ಟು ಹೆಚ್ಚಳ ಮಾಡಲಾಗಿತ್ತು. ನಂತರ ಶೇ 2ರಷ್ಟು ಹೆಚ್ಚಳವಾಗಿತ್ತು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರವು ಕಳೆದ ದೀಪಾವಳಿ ಹಬ್ಬದ ವೇಳೆಗೆ ಶೇ2ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಿಸಿತ್ತು. ನಂತರ 2019ರ ದೀಪಾವಳಿ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸರ್ಕಾರಿ ನೌಕರರಿಗೆ ಶೇ.4.75 ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದರು. ಈ ಮೂರು ಅವಧಿಯದ್ದು ಸೇರಿಸಿ 11% ಡಿಎ ಹೆಚ್ಚಳವಾಗಿದೆ. ಸರ್ಕಾರಿ ನೌಕರರ ಮೂಲ ವೇತನ 17, 000ರು ನಿಂದ 67,550ರು ತನಕ ಇದೆ.

ಕೇಂದ್ರ- ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ

ಕೇಂದ್ರ- ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ

ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ, ಪಿಂಚಣಿ ಮೊತ್ತ ಹೆಚ್ಚಳ ಅನ್ವಯವಾಗಲಿದೆ.

ಒಬ್ಬ ವ್ಯಕ್ತಿಯ ಸಂಬಳದ ಭಾಗ

ಒಬ್ಬ ವ್ಯಕ್ತಿಯ ಸಂಬಳದ ಭಾಗ

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ತುಟ್ಟಿಭತ್ಯೆ ಪರಿಹಾರ ಶೇ 3ರಷ್ಟಿದೆ. ಈ ವರ್ಷ ಜುಲೈ ಮೊದಲು, ಇದು 17 ಪ್ರತಿಶತದಷ್ಟಿತ್ತು, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಡಿಎ ಶೇ 28ರಿಂದ ಶೇ 31ಕ್ಕೇರಿಕೆಯಾಗಲಿದೆ.

Recommended Video

ಸ್ಟೇಡಿಯಂ ಒಳನುಗ್ಗಿ ಕೊಹ್ಲಿ ಜೊತೆ ಸೆಲ್ಫೀ ತೆಗೆದುಕೊಂಡ ಫ್ಯಾನ್ಸ್ ಬಗ್ಗೆ ಬುಮ್ರಾ ಹೇಳಿದ್ದೇನು? | Oneindia Kannada

English summary
State Government Employees Association President C S Shadakshari today met CM Basavaraj Bommai and welcomed Government decision to form 7th Pay Commission in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X