ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್? ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

|
Google Oneindia Kannada News

ಬೆಂಗಳೂರು, ಜೂ. 25: ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇವತ್ತು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಸಂಜೆ 4ಗಂಟೆಗೆ ಸಂಪುಟ ಸಭೆ ನಡೆಯಲಿದ್ದು, ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Recommended Video

Sushanth Singh Rajput : ಬಂತು ಸುಶಾಂತ್ ಸಿಂಗ್ 2ನೇ ಮರಣೋತ್ತರ ಪರೀಕ್ಷೆ ವರದಿ|Final Report | Oneindia Kannada

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಈಗಾಗಲೇ ಲಾಕ್‌ಡೌನ್ ಬದಲಿಗೆ ಸೀಲ್‌ಡೌನ್ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು, ಹಲವು ತಜ್ಞರು ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್‌ಗೆ ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಯುವ ಸಾಧ್ಯೆತೆಯಿದೆ.

ಬ್ರೇಕಿಂಗ್: ಭಾರತದಲ್ಲಿ ಒಂದೇ ದಿನ 16,922 ಮಂದಿಗೆ ಕೊರೊನಾವೈರಸ್!ಬ್ರೇಕಿಂಗ್: ಭಾರತದಲ್ಲಿ ಒಂದೇ ದಿನ 16,922 ಮಂದಿಗೆ ಕೊರೊನಾವೈರಸ್!

ಇನ್ನೂ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿಲ್ಲ, ಈ ಸಂದರ್ಭದಲ್ಲಿಯೇ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

Importaint State Cabinet Meeting Will Be Held In The Vidhanasoudha Today

ಹಲವು ಆಡಳಿತಾತ್ಮತ ನಿರ್ಧಾರಗಳನ್ನು ಇಂದಿನ ಸಂಪುಟ ಸಬೆಯಲ್ಲಿ ಕೈಗೊಳ್ಳಲಾಗುತ್ತಿದೆ. ಕೈಗಾರಿಕಾ ಸೌಕರ್ಯ (ತಿದ್ದುಪಡಿ) ವಿಧೇಯಕ 2020ಗೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಜೊತೆಗೆ 2021ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುವುದು, ಶಾಸಕರ ವೇತನ, ಪಿಂಚಣಿ, ಭತ್ಯೆ ಹೆಚ್ಚಳ, ಕಡಿತದ ಬಗ್ಗೆ ಸಂಪುಟದಲ್ಲಿ ನಿರ್ಣಯವಾಗಲಿದೆ.

ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟ ಎದುರಿಸಲು 32.04 ಕೋಟಿ ರೂ. ವೆಚ್ಚದಲ್ಲಿ ಜೀವ ರಕ್ಷಕ ಸಾಧನಗಳ (Advance life support)ನ್ನು ಒಳಗೊಂಡ 120 ಆ್ಯಂಬುಲೆನ್ಸ್‌ಗಳ ಖರೀದಿಗೆ ಅನುಮೋದನೆ, ತಿರುಪತಿ ತಿರುಮಲದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ, ಯಾತ್ರಿ ನಿವಾಸ, ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡುವುದು.

ಬೆಂಗಳೂರಿಗರಿಗೆ ಟ್ವೀಟ್ ಮೂಲಕ ಭಾಸ್ಕರಾವ್ ಮನವಿಬೆಂಗಳೂರಿಗರಿಗೆ ಟ್ವೀಟ್ ಮೂಲಕ ಭಾಸ್ಕರಾವ್ ಮನವಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2020ಕ್ಕೆ ಅನುಮೋದನೆ, 406.41 ಕೋಟಿ ರೂ. ವೆಚ್ಚದಲ್ಲಿ ಬೈಯಪ್ಪನಹಳ್ಳಿ-ಹೊಸೂರು ಮಧ್ಯದ 48 ಕಿ.ಮೀ ಹಾಗೂ ಯಶವಂತಪುರ-ಚನ್ನಸಂದ್ರ ಮಧ್ಯದ 21.7 ಕಿ.ಮೀ ಉದ್ದದ ರೈಲ್ವೆ ಲೈನ್ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ ನೀಡುವುದು ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ಕೊಡುವ ಸಾಧ್ಯತೆಯಿದೆ.

English summary
A imoprtaint state cabinet meeting will held today as the coronavirus virus is increasing day by day in state. Meeting will be held at the Cabinet Hall at 4 pm and it is expecting to make a major decision on the implementation of a statewide lockdown again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X