ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುತ್ತಿಹಳ್ಳಿ ಗ್ರಾಮದಲ್ಲಿ 3 ಕಾಡಾನೆಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್.29: ಕಾಡಾನೆ ದಾಳಿಯಿಂದ ಬಾಳೆ, ಕಾಫಿ, ಮೆಣಸು, ಭತ್ತ ನಾಶವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗುತ್ತಿಹಳ್ಳಿ, ಮೂಲರಹಳ್ಳಿ, ಬೈರಾಪುರ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಮೂಲರಹಳ್ಳಿ ರಘು ಹಾಗೂ ನಾಲ್ಕೈದು ಜನರ ತೋಟದ ಬೆಳೆ ನಾಶವಾಗಿದೆ. ಇದೀಗ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಗಳ ವಿರುದ್ಧ ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದಾರೆ.

 ಆನೆ ಬಂತೊಂದಾನೆ: ಹಳಿಯಾಳಕ್ಕೆ ದಾರಿ ತಪ್ಪಿ ಬಂದ ಕಾಡಾನೆ ಆನೆ ಬಂತೊಂದಾನೆ: ಹಳಿಯಾಳಕ್ಕೆ ದಾರಿ ತಪ್ಪಿ ಬಂದ ಕಾಡಾನೆ

ಕಳೆದೊಂದು ತಿಂಗಳಿನಿಂದ ಮೂರು ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಾನೆ ಕಾಟಕ್ಕೆ ಗ್ರಾಮಸ್ಥರು ಬೇಸತ್ತಿ ಹೋಗಿದ್ದಾರೆ.

Crops destroyed by wild elephant attacks in Guttihalli

ಕಳೆದೆರೆಡು ತಿಂಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ರೈತರ ಬೆಳೆಗಳನ್ನು ನಾಶ ಮಾಡಿದ್ದವು. ಒಂದು ವಾರಗಳ ಕಾಲ ಕಾಡಾನೆಗಳು ಸತತವಾಗಿ ದಾಳಿ ನಡೆಸಿದ್ದು, ರೈತರ ಭತ್ತ, ರಾಗಿ, ಮಾವು ಬೆಳೆಗಳನ್ನು ನಾಶಪಡಿಸಿದ್ದವು.

ಚಿಕ್ಕಮಗಳೂರು‌: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..!ಚಿಕ್ಕಮಗಳೂರು‌: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..!

Crops destroyed by wild elephant attacks in Guttihalli

ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆನೆಗಳು ಬಂದಿರಬಹುದು ಎಂದು ಶಂಕಿಸಲಾಗಿದ್ದು, ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ರಾತ್ರಿ ವೇಳೆ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದರು.

English summary
Banana, coffee, pepper and rice are destroyed by wild elephant attacks. Incident took place at Guttihalli village in Moodigere Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X