ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸಿಎಂ, ಎಚ್ ಡಿ ರೇವಣ್ಣ ಡಿಸಿಎಂ : ದೇವೇಗೌಡರ ಅಸ್ತ್ರ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಕೊನೆ ಅಸ್ತ್ರ ಇದು | ಸಿದ್ದರಾಮಯ್ಯ ಸಿಎಂ, ಎಚ್ ಡಿ ರೇವಣ್ಣ ಡಿಸಿಎಂ | Oneindia Kannada

ಬೆಂಗಳೂರು, ಜುಲೈ 08: ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯ ನಡುವೆಯೂ ಸರ್ಕಾರವನ್ನು ಉಳಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಚಿಂತನೆ ನಡೆಸಿದ್ದಾರೆ.

'ಆಪರೇಷನ್ ಕಮಲಕ್ಕೆ ತುತ್ತಾಗಬೇಡಿ' ಎಂದು ಜೆಡಿಎಸ್ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಇತ್ತೀಚೆಗೆ ಉಪಾಧ್ಯಕ್ಷ ಸ್ಥಾನ ಪಡೆದಿದ್ದ ಶಾಸಕ ಗೋಪಾಲಯ್ಯ ಸೇರಿದಂತೆ ಮೂವರು ಜೆಡಿಎಸ್ ಶಾಸಕರು ಕೂಡಾ ಬಂಡಾಯವೆದ್ದಿರುವುದು ದೇವೇಗೌಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

13 ಶಾಸಕರ ರಾಜೀನಾಮೆ ಹಾಗೂ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ.

ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?

ಆದರೆ, ಸರ್ಕಾರ ಇನ್ನು ಬಿದ್ದಿಲ್ಲ, ಅತೃಪ್ತರು ತಮ್ಮ ಬೇಡಿಕೆಯೊಂದಿಗೆ ಮರಳಿ ಬಂದು ಭೇಟಿಯಾಗಲಿ, ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಚಿವರು ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ

ಸಚಿವರು ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ

ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಅವಕಾಶ ಸೃಷ್ಟಿಸಲಾಗಿದೆ. ಆದರೆ, ಈ ನಡುವೆ ಸಿಎಂ ಹಾಗೂ ಡಿಸಿಎಂ ಬದಲಾವಣೆಗೆ ಭಿನ್ನಮತೀಯರಿಂದ ಮನವಿ ಬಂದಿದೆ. ಹೀಗಾಗಿ, ಬಂಡಾಯಗಾರರನ್ನು ಶಮನಗೊಳಿಸಲು ಮತ್ತೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ದೇವೇಗೌಡರು ಸಮ್ಮತಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ, ಸಚಿವ ರೇವಣ್ಣಗೆ ಡಿಸಿಎಂ ಸ್ಥಾನ ನೀಡುವುದು ದೇವೇಗೌಡರ ಕಟ್ಟಕಡೆಯ ಅಸ್ತ್ರವಾಗಿದೆ. ಈ ಮೂಲಕ ಈಗ ಸಿಟ್ಟಾಗಿರುವ ಸಿದ್ದರಾಮಯ್ಯ ಅವರ ಶಿಷ್ಯಂದಿರು, ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಈ ತಂತ್ರಕ್ಕೆ ತಲೆಬಾಗುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡಿಗೂ ತಿಳಿಸಲಾಗಿದ್ದು, ಸರ್ಕಾರ ಉಳಿಸಲು ಯಾವುದೇ ತಂತ್ರವಾದರೂ ಸರಿ ಎಂಬ ಸೂಚನೆ ಸಿಕ್ಕಿದೆ ಎಂಬ ಸುದ್ದಿಯಿದೆ.

ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ

ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ

ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಎಲ್ಲಾ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.

ಜುಲೈ 08 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

ಜುಲೈ 08 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

ಜುಲೈ 08 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 106
ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)

English summary
Karnataka Crisis : Former PM, JDS supremo HD Deve Gowda finds solution to crisis. Suggests Siddaramaiah as CM and HD Revanna as DCM in order to pacify the dissidents and save coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X