ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ನಿರಾಕರಿಸಿದರೆ ಕ್ರಿಮಿನಲ್ ಕೇಸ್!

|
Google Oneindia Kannada News

ಬೆಂಗಳೂರು, ಜುಲೈ.05: ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಜಯನಗರ ಸಾವ೯ಜನಿಕ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಹೃದ್ರೋಗ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಯಾವುದೇ ಸೂಚನೆ ನೀಡದೆ ದಿಢೀರ್‌ ಭೇಟಿ ನೀಡಿ ರೋಗಿಗಳ ದಾಖಲು ವ್ಯವಸ್ಥೆ, ಟೆಸ್ಟ್‌ಗಳ ಪ್ರಮಾಣ, ಐಸಿಯು ಮತ್ತು ಇತರೆ ವಾಡು೯ಗಳಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಊಟ, ಪಿಪಿಇ ಕಿಟ್‌ ಹಾಗೂ ಇತರೆ ಉಪಕರಣಗಳ ಗುಣಮಟ್ಟ, ತಜ್ಷರು, ವೈದ್ಯರು ಮತ್ತು ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು.

ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!
ವಿಧಾನಸೌಧಕ್ಕೆ ಮರಳಿದ ಸಚಿವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳ ಜೊತೆ ಸಕಾ೯ರ ಮಾತುಕತೆ ನಡೆಸಿದೆ ಎಂದರು. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಅಧ೯ದಷ್ಟು ಹಾಸಿಗೆಗಳನ್ನು ಕೊವಿಡ್-19 ಚಿಕಿತ್ಸೆಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ತಕ್ಷಣದಿಂದಲೇ 2734 ಹಾಸಿಗೆ ನೀಡುವುದಾಗಿ ಮಾತುಕೊಟ್ಟಿದ್ದವರು, ಈವರೆಗೆ ಕೇವಲ 116 ಹಾಸಿಗೆಗಳನ್ನಷ್ಟೇ ನೀಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Criminal Case Against Private Hospitals Refusing To Treat Covid-19 Infected

ಖಾಸಗಿ ಆಸ್ಪತ್ರೆಗಳು ಆದಷ್ಟು ಬೇಗ ಬೆಡ್ ಗಳನ್ನು ನೀಡಬೇಕು

ಖಾಸಗಿ ಆಸ್ಪತ್ರೆಗಳು ಆದಷ್ಟು ಬೇಗ ಬೆಡ್ ಗಳನ್ನು ನೀಡಬೇಕು

ರಾಜ್ಯ ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ 898 ಕೊವಿಡ್-19 ಸೋಂಕಿತರು ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ. ಇದನ್ನು ಹೊರತುಪಡಿಸಿ ಕೊಟ್ಟ ಮಾತಿನಿಂತೆ ಸಕಾ೯ರಕ್ಕೆ ನೀಡಬೇಕಿರುವ ಹಾಸಿಗೆಗಳನ್ನು ಆದಷ್ಟು ಬೇಗ ಹಸ್ತಾಂತರಿಸಬೇಕು. ಇದರ ಉಸ್ತುವಾರಿಗೆ ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಮುಖ್ಯಮಂತ್ರಿ ರಾಜಕೀಯ ಕಾಯ೯ದಶಿ೯ ವಿಶ್ವನಾಥ್‌ ರನ್ನು ನೇಮಿಸಲಾಗಿದೆ. ಸೋಮವಾರದಿಂದಲೇ ಅವರು ಕಾಯೋ೯ನ್ಮುಖರಾಗಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯ ಸಂದೇಶ

ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯ ಸಂದೇಶ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವ ಕೊರೊನಾವೈರಸ್ ಸೋಂಕಿತರಿಗೆ ಯಾವುದೇ ಆಸ್ಪತ್ರೆಯವರು ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಒಂದು ವೇಳೆ ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಆರೋಗ್ಯ ತುತು೯ ಪರಿಸ್ಥಿತಿ ಹಿನ್ನೆಲೆ ಈ ವಿಷಯದಲ್ಲಿ ರಾಜಿ ಪ್ರಶ್ನೆಯಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಸಮಸ್ಯೆ ಇತ್ಯರ್ಥಕ್ಕೆ 24/7 ಸಹಾಯವಾಣಿ ಶುರು

ಸಮಸ್ಯೆ ಇತ್ಯರ್ಥಕ್ಕೆ 24/7 ಸಹಾಯವಾಣಿ ಶುರು

ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಮುಖ್ಯಮಂತ್ರಿಯವರು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಸೋಮವಾರದಿಂದ ಪರಿಸ್ಥಿತಿ ನಿಯಂತ್ರಿಸಲಿದ್ದು, ಚಿಕಿತ್ಸೆ, ದಾಖಲು ಮಾಡಿಕೊಳ್ಳುವಲ್ಲಿ, ಟೆಸ್ಟ್‌ ವರದಿಗಳಿಗೆ ಸಂಬಂಧಿಸಿದ ದೂರು ಇದ್ದಲ್ಲಿ, 1912ರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಚಿವರು ಮನವಿ ಮಾಡಿಕೊಂಡಿದ್ದಾರೆ. ದಿನದ 24 ಗಂಟೆಗಳ ಕಾಲ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.
ನಗರದಲ್ಲಿ ಅಗತ್ಯ ಸಂಖ್ಯೆಯ ಆಂಬ್ಯುಲೆನ್ಸ್ ನಿಯೋಜಿಸಲಾಗಿದ್ದು, ಪ್ರತ್ಯೇಕವಾಗಿ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಹಾಲಿ 108 ಸೇವೆಯಡಿ ಕಾಯ೯ ನಿವ೯ಹಿಸುತ್ತಿರುವ ಆಂಬ್ಯುಲೆನ್ಸ್ ಹೊರತಾಗಿ ನಗರದ ಪ್ರತಿ ವಾಡಿ೯ಗೆ ಎರಡರಂತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ 108 ಸಂಖ್ಯೆಗೆ ಕರೆ ಮಾಡಿ ಆಂಬುಲೆನ್ಸ್ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಉಚಿತ ಕೊವಿಡ್-19 ತಪಾಸಣೆ ನಡೆಸಿರುವ ಬಗ್ಗೆ ಉಲ್ಲೇಖ

ಉಚಿತ ಕೊವಿಡ್-19 ತಪಾಸಣೆ ನಡೆಸಿರುವ ಬಗ್ಗೆ ಉಲ್ಲೇಖ

ಕೊರೊನಾವೈರಸ್ ಪರೀಕ್ಷೆಗೆ ನಾಲ್ಕು ಅಥವಾ ನಾಲ್ಕೂವರೆ ಸಾವಿರ ರೂ. ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಸಕಾ೯ರ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಿದ್ದು, ನಯಾಪೈಸೆ ತೆಗೆದುಕೊಂಡಿಲ್ಲ. ಬದಲಿಗೆ ಸಕಾ೯ರದ ವತಿಯಿಂದ ಉಚಿತವಾಗಿ ತಪಾಸಣೆ ನಡೆಸಲಾಗುತ್ತಿದೆ. ಖಾಸಗಿಯವರಿಗೂ ನಮ್ಮಿಂದ ಕಳುಹಿಸದ ರೋಗಿಗಳಿಗೆ 2,200 ರೂ. ದರ ಪಡೆಯಬೇಕು ಎಂದು ನಿಗದಿಪಡಿಸಲಾಗಿದೆ. ಒಂದು ವೇಳೆ ಹೆಚ್ಚು ದರ ಪಡೆದರೆ ಕ್ರಮ ಜರುಗಿಸಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

English summary
Criminal Case Against Private Hospitals Refusing To Treat Covid-19 Infected: Minister Dr. K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X