ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 6021 ಗ್ರಾಮ ಪಂಚಾಯ್ತಿ ಆಡಳಿತ ದುರುಪಯೋಗ?

|
Google Oneindia Kannada News

ಬೆಂಗಳೂರು, ಮೇ 19: ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವುದನ್ನು ತಡೆಯಲು ಹಾಗೂ ಈಗಿನ ಆಡಳಿತ ಸಮಿತಿಗಳನ್ನೇ ಉಸ್ತುವಾರಿ ಸಮಿತಿಗಳಾಗಿ ಮುಂದುವರೆಸಲು ಇಲ್ಲವೇ ಆಡಳಿತಾಧಿಕಾರಿಗಳನ್ನು ನೇಮಿಸಲು ಭಾರತ ಕಮ್ಯುನಿಷ್ಠ ಪಕ್ಷ (ಮಾರ್ಕ್ಸ್ ವಾದಿ) ಮನವಿ ಮಾಡಿದೆ.

ರಾಜ್ಯದ 6021 ಗ್ರಾಮ ಪಂಚಾಯ್ತಿಗಳ ಅವಧಿ ಮುಂದಿನ ಜೂನ್ /ಜುಲೈ ತಿಂಗಳೊಳಗೆ ಮುಗಿಯಲಿದ್ದು ಸದರಿ ಪಂಚಾಯ್ತಗಳಿಗೆ ಈ ದಿನಗಳಲ್ಲಿ ನಡೆಯ ಬೇಕಿದ್ದ ಚುನಾವಣೆಗಳನ್ನು ಕೋವಿಡ್-19 ರ ವಿರುದ್ದದ ಸಂಘಟಿತ ಹೋರಾಟದ ಕಾರಣದಿಂದಾಗಿ ನಡೆಸಲಾಗುತ್ತಿಲ್ಲವೆಂದು ಚುನಾವಣೆಗಳನ್ನು ಮುಂದೂಡಲಾಗಿದೆ. ಇದನ್ನು ಭಾರತ ಕಮ್ಯುನಿಷ್ಠ ಪಕ್ಷ (ಮಾಕ್ರ್ಸವಾದಿ) ಒಪ್ಪುತ್ತದೆ.

ಇದೇ ತಿಂಗಳು ನಡೆಯಬೇಕಿದ್ದ ಗ್ರಾ.ಪಂ. ಚುನಾವಣೆ ಮುಂದೂಡಿಕೆಇದೇ ತಿಂಗಳು ನಡೆಯಬೇಕಿದ್ದ ಗ್ರಾ.ಪಂ. ಚುನಾವಣೆ ಮುಂದೂಡಿಕೆ

ಆದರೇ, ಅವಧಿ ಮುಗಿದ ನಂತರ ಮುಂದೆ ಚುನಾವಣೆ ನಡೆಯುವವರೆಗೆ ತಮ್ಮ ಸರಕಾರ ಆಡಳಿತ ಸಮಿತಿಗಳನ್ನು ನೇಮಿಸಲಿದೆಯೆಂಬುದನ್ನು ಕೇಳಿ ಆಶ್ಚರ್ಯವಾಗಿದೆ. ಇದು ಆಡಳಿತ ಪಕ್ಷದ ಸದಸ್ಯರನ್ನೇ ನೇಮಿಸಿಕೊಳ್ಳುವ ದುರುಪಯೋಗಕ್ಕೆ ಕಾರಣವಾಗುವುದಿಲ್ಲವೇ? ಆದ್ದರಿಂದ ರಾಜ್ಯ ಸರಕಾರದ ಈ ಕ್ರಮವನ್ನು ಸಿಪಿಐಎಂ ಒಪ್ಪುವುದಿಲ್ಲ. ತಕ್ಷಣವೇ ಅಂತಹ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.

CPI (M) oppose appointment of new administration to Gram Panchayats

ಮುಂದಿನ ಚುನಾವಣೆಯ ವರೆಗೆ, ಆಡಳಿತವನ್ನು ಮುನ್ನಡೆಸಲು ಎರಡು ದಾರಿಗಳಿವೆ.
1) ಈಗಿರುವ ಆಡಳಿತವನ್ನೇ ಉಸ್ತುವಾರಿ ಆಡಳಿತವಾಗಿ ಮುಂದುವರೆಸುವುದು.
2) ಆಡಳಿತಾಧಿಕಾರಿಯನ್ನು ನೇಮಿಸುವುದು.
ಈ ಕ್ರಮಗಳೇ ಆಡಳಿತ ಸಮಿತಿ ನೇಮಿಸುವುದಕ್ಕಿಂತ ಉತ್ತಮವಾದವು ಗಳಾಗಿವೆ. ಆದ್ದರಿಂದ, ಈ ಕುರಿತಂತೆ ಕ್ರಮವಹಿಸಲು ವಿನಂತಿಸುವೆವು.
ಹೇಗಿದ್ದರೂ, ಪಂಚಾಯ್ತಿಯ ಯಾವುದೇ ಅಭಿವೃದ್ಧಿ ಕಾರ್ಯಗಳು ಗ್ರಾಮ ಸಭೆಗಳು ಅದಕ್ಕೂ ಮುಂಚೆ ವಾರ್ಡ ಸಭೆಗಳ ಮೂಲಕ ನಿರ್ಧರಿಸಲ್ಪಡುತ್ತವೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ ಎಂದು ಸಿಪಿಐ (ಎಂ) ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.

English summary
CPI (M) opposed Karnataka government move to appoint new administration officers to all 6021 Gram Panchayats in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X