ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 2: ಕರ್ನಾಟಕ ರಾಜ್ಯದ ಬಹುತೇಕ ಜನತೆ ಕೋವಿಡ್-19 ನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜೊತೆ ಕೈ ಜೋಡಿಸಿ ಲಾಕ್ ಡೌನ್ ಆಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್-19 ರ ಮುಂದುವರಿಕೆಯ ಸರಪಳಿಯನ್ನು ತುಂಡರಿಸುವಲ್ಲಿ ಮಗ್ನವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಿರುವಾಗಲೇ ಕೆಲವು ಆತಂಕಕಾರಿ ಅಂಶಗಳು ಕಂಡುಬಂದಿವೆ.

ರಾಜ್ಯದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಹೀನರಾಗಿ, ಅನಾರೊಗ್ಯದ ಭಯದಿಂದ ರಾಜ್ಯ ಬಿಟ್ಟು ತಮ್ಮ ರಾಜ್ಯಗಳಿಗೆ ಮತ್ತು ರಾಜ್ಯದೊಳಗಿನ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತೆರಳುವ ಆತುರದಲ್ಲಿದ್ದಾರೆ. ಅವರಿಗೀಗ ತಮ್ಮ ಗ್ರಾಮಗಳಿಗೆ ತೆರಳಲು ಸಾರಿಗೆ ಸೌಕರ್ಯಗಳಿಲ್ಲದೇ ತೊಂದರೆಯಾಗಿ ನೂರಾರು ಕಿ.ಮೀ ಪಾದಯಾತ್ರೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ

ಅದೇ ರೀತಿ, ಕೆಲವು ದೊಡ್ಡ ಕೈಗಾರಿಕೆಗಳು ದೇಶವೇ ಲಾಕ್ಡೌನ್ ಆದರೂ ಅವುಗಳು ಉತ್ಪಾದನೆಯನ್ನು ನಿಲ್ಲಿಸಿಲ್ಲ. ಸಾವಿರಾರು ಜನ, ಕೆಲವೆಡೆ ದಶ ಸಾವಿರ ಗಟ್ಟಲೇ ಕಾರ್ಮಿಕರು ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಈ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಮತ್ತು ಅವರು ವಾಸಿಸುವ ಪ್ರದೇಶಗಳು ಗಂಭೀರ ಆತಂಕಕ್ಕೊಳಗಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಠಿಣ ಕ್ರಮ ವಹಿಸಿ ಅವುಗಳನ್ನು ತಡೆಯಲು ಮುಂದಾಗದಿರುವ ದ್ವಂದ್ವ ನಿಲುವು ಕುರಿತು ಅನುಮಾನ ಪಡುವಂತಾಗಿದೆ.

"ಊರಿಗೆ ಹೋದ್ರೆ ಕೊರೊನಾ ಕೊಲ್ಲಬಹುದು, ಇಲ್ಲೇ ಇದ್ರೆ ಹಸಿವಿನಿಂದ ಸಾಯ್ತೀವಿ"

ಸಾರಿಗೆ ಮತ್ತಿತರೆ ಕಾರ್ಮಿಕರು, ಕ್ಷೌರಿಕರು, ಮಂಗಳ ವಾದ್ಯ ಕಲಾವಿದರು ಮುಂತಾಗಿ, ಲಾಕ್ ಡೌನ್ ನಿಂದಾಗಿ ಉದ್ಯೋಗ ಹೀನರಾಗಿದ್ದಾರೆ. ಇವರಾರಿಗೂ ನಿರುದ್ಯೋಗ ಭತ್ಯೆ, ಉಪ ಜೀವನದಯಾದಿಯು, ಆರೋಗ್ಯ ಸುರಕ್ಷೆಯು ಇನ್ನು ದೊರೆಯದಾಗಿದೆ. ಇದನ್ನೆಲ್ಲಾ ನಿವಾರಿಸಲು ಅಗತ್ಯ ಕ್ರಮಗಳಾಗಬೇಕು.

 ನಂಜನಗೂಡಿನ ಕಾರ್ಮಿಕರು

ನಂಜನಗೂಡಿನ ಕಾರ್ಮಿಕರು

1) ನಂಜನಗೂಡಿನ ಜ್ಯುಬಿಲಿಯೆಂಟ್ ಆರ್ಗನೈಜೇಸನ್ ಕೈಗಾರಿಕೆ ಕಾರ್ಮಿಕರಲ್ಲುಂಟಾದ ಸೋಂಕಿನಿಂದುಂಟಾದ ಪರಿಸ್ಥಿತಿಯಾಧಾರದಲ್ಲಿ ನಂಜನಗೂಡು ತಾಲೂಕನ್ನು ವಿಶೇಷ ಲಾಕ್ ಡೌನ್ ಪ್ರದೇಶವಾಗಿ ಪರಿಗಣಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸೋಂಕು ನಿಯಂತ್ರಣಕ್ಕೆ ಆ ಪ್ರದೇಶದ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಬಂಡವಾಳವನ್ನು ಒದಗಿಸಬೇಕು. ಈ ವಿಚಾರದಲ್ಲಿ ಜವಾಬ್ದಾರಿ ರಹಿತವಾಗಿ ವರ್ತಿಸಿದ ಕೈಗಾರಿಕಾ ಮಾಲೀಕನ ಮೇಲೆ ಕ್ರಿಮಿನಲ್ ಧಾವೆ ಹೂಡಬೇಕು.

 ಉಕ್ಕಿನ ಕಾರ್ಖಾನೆಗಳು ಬಂದ್ ಆಗಿಲ್ಲವೇಕೆ?

ಉಕ್ಕಿನ ಕಾರ್ಖಾನೆಗಳು ಬಂದ್ ಆಗಿಲ್ಲವೇಕೆ?

2) ಬಳ್ಳಾರಿ ಜಿಲ್ಲೆಯ ಸಂರಕ್ಷಣೆಗಾಗಿ, ತೋರಣಗಲ್ಲು ಪ್ರದೇಶದ ಜಿಂದಾಲ್ ಸ್ಟೀಲ್ಸ್ ಕೈಗಾರಿಕೆಯ ಉತ್ಪಾದನೆ ಸ್ಥಗಿತಗೊಳಿಸುವಂತೆ ತಕ್ಷಣ ಆದೇಶಿಸಿ, ನಿಲ್ಲಿಸಬೇಕು. ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ಘೋಷಿಸುವಂತೆ ಮತ್ತು ಅವರ ಆರೋಗ್ಯ ತಪಾಸಣೆಗೆ ಕ್ರಮವಹಿಸಿ ಅವರ ಸ್ವಗ್ರಾಮಗಳಿಗೆ ತೆರಳುವಂತೆ ಕ್ರಮ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಚಾರದಲ್ಲಿ ಜವಾಬ್ದಾರಿಯನ್ನು ಮೆರೆಯಬೇಕು ಬಳ್ಳಾರಿ ಜಿಲ್ಲೆಯ ಜನತೆಯ ಆತಂಕವನ್ನು ತಡೆಯಬೇಕು.

ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಆಪತ್ಬಾಂಧವವಾದ ಜಿಲ್ಲಾಡಳಿತ!ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಆಪತ್ಬಾಂಧವವಾದ ಜಿಲ್ಲಾಡಳಿತ!

 ವಲಸೆ ಕಾರ್ಮಿಕರ ಪರಿಸ್ಥಿತಿ ಗಮನಿಸಿ

ವಲಸೆ ಕಾರ್ಮಿಕರ ಪರಿಸ್ಥಿತಿ ಗಮನಿಸಿ

3) ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಹೊರ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಬಂದು ದುಡಿಯುತ್ತಿರುವ ಕಾರ್ಮಿಕರನ್ನು, ಅತಿಥಿ ಕಾರ್ಮಿಕರೆಂದು ಪರಿಗಣಿಸಿ, ಅವರ ವಾಸಕ್ಕೆ ಮತ್ತು ಅವರ ಆಹಾರ, ಆರೋಗ್ಯ ಮತ್ತಿತರೆ ಅಂಶಗಳಿಗೆ ಅಗತ್ಯ ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸಬೇಕು. ಅವರ ಆರೋಗ್ಯ ಪರಿಸ್ಥಿತಿಯ ಆಧಾರದಲ್ಲಿ, ಅವರು ಆರೋಗ್ಯವಾಗಿದ್ದು ಅವರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಇಚ್ಛಿಸಿದಲ್ಲಿ ಅಂತಹವರನ್ನು ವಿಶೇಷ ಬಸ್ ಹಾಗೂ ರೈಲುಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆ ಕೇಂದ್ರ ಸರಕಾರದ ನೆರವನ್ನು ಪಡೆಯಬೇಕು. ಅದೇ ರೀತಿ, ಆರೋಗ್ಯ ಸಮಸ್ಯೆ ಇರುವವರನ್ನು ಇಲ್ಲಿಯೇ ಉಳಿಸಿಕೊಂಡು ಶೂಶೃμÉ ನೀಡಬೇಕು. ಅವರ ಆರೋಗ್ಯ ಸುಧಾರಣೆಯ ನಂತರ ಅವರ ಸ್ವ ಗ್ರಾಮಗಳಿಗೆ ಕಳುಹಿಸಲು ಕ್ರಮ ವಹಿಸಬೇಕು.

 ಕಾರ್ಮಿಕರ ಆರೋಗ್ಯ ರಕ್ಷಣೆ

ಕಾರ್ಮಿಕರ ಆರೋಗ್ಯ ರಕ್ಷಣೆ

4) ರಾಜ್ಯದ ವಲಸೆ ಕಾರ್ಮಿಕರಿಗೂ ಮೇಲಿನಂತೆಯೇ ಕ್ರಮ ವಹಿಸಬೇಕು. ಅದಾಗಲೇ ಸಾವಿರಾರು ಕಾರ್ಮಿಕರು ಸುತ್ತ- ಮುತ್ತಲ ರಾಜ್ಯಗಳಿಂದ ನಮ್ಮದೇ ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳಿಂದ ಸ್ವಗ್ರಾಮಗಳಿಗೆ ಪಾದ ಯಾತ್ರೆಯಲ್ಲಿ ತೆರಳುತ್ತಿದ್ದಾರೆ. ಅವರುಗಳನ್ನು ಅಯಾ ತಾಲೂಕಾ ಕೇಂದ್ರಗಳಲ್ಲಿ ತಡೆದು ಅವರಿಗೆ ಅಗತ್ಯ ಉಟೋಪಚಾರ ಮತ್ತು ವಸತಿ ಸೌಲಭ್ಯವನ್ನು ಒದಗಿಸಬೇಕು ಅಲ್ಲದೇ ಅವರ ಆರೋಗ್ಯ ತಪಾಸಣೆ ಗೈದು, ಆರೋಗ್ಯವಂತರನ್ನು ವಿಶೇಷ ಬಸ್ ಹಾಗೂ ರೈಲು ವ್ಯವಸ್ಥೆ ಮಾಡಿ ಸ್ವಗ್ರಾಮಗಳಿಗೆ ತಲುಪಿಸಬೇಕು. ಉಳಿದವರಿಗೆ ಆರೈಕೆ ನೀಡಿ ಕಳುಹಿಸಬೇಕು. ಅಲ್ಲಿಯವರೆಗೆ ಎಲ್ಲ ರೀತಿಯ ನೆರವು ನೀಡಬೇಕು.

ಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲುಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲು

 ಪಡಿತರವನ್ನು ಮನೆ ಮನೆಗೆ ಒದಗಿಸಬೇಕು

ಪಡಿತರವನ್ನು ಮನೆ ಮನೆಗೆ ಒದಗಿಸಬೇಕು

5) ಗ್ರಾಮೀಣ ಹಾಗೂ ನಗರ ಪ್ರದೇಶದ ಕೃಷಿ ಕೂಲಿಕಾರರು ಮತ್ತು ಬಡರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ವೃತ್ತಿ ನಿರತರು (ಉದಾ : ಕ್ಷೌರಿಕ ವೃತ್ತಿ ನಿರತರು, ಮಂಗಳ ವಾದ್ಯ ಕಲಾವಿದರು, ಸಾರಿಗೆ ಸೇವೆಯ ವೃತ್ತಿ ನಿರತರು ಮುಂತಾಗಿ) ಲಾಕ್ ಡೌನ್ ಅವಧಿಯಲ್ಲಿ ನಿರುದ್ಯೋಗಿಗಳಾಗಿದ್ದು ಈ ಎಲ್ಲರನ್ನು ಗುರುತಿಸಿ ಪ್ರತಿ ದಿನ ತಲಾ 500 ರೂಗಳಂತೆ ನಿರುದ್ಯೋಗ ಭತ್ಯೆ ನೀಡಬೇಕು. ಈ ಎಲ್ಲಾ ಕುಟುಂಬಗಳಿಗೆ ಕೇರಳ ಸರಕಾರದ ಮಾದರಿಯಲ್ಲಿ ಕನಿಷ್ಟ ಮೂರು ತಿಂಗಳಿಗಾಗುವಷ್ಟು ಸಮಗ್ರ ಪಡಿತರವನ್ನು ಮನೆ ಮನೆಗೆ ಒದಗಿಸಬೇಕು. ಅದೇ ರೀತಿ, ಆರೋಗ್ಯ ಸುರಕ್ಷಾ ಕ್ರಮಗಳನ್ನು ಒದಗಿಸಬೇಕು. ಎಲ್ಲಾ ಬಿಪಿಎಲ್ ಕುಟುಂಬಗಳ ಜನಧನ ಖಾತೆಗೆ ತಕ್ಷಣ 5,000 ರೂಗಳು ಜಮಾ ಮಾಡಬೇಕು.

 ರೈತರುಗಳಿಗೆ ಅಗತ್ಯ ಸುರಕ್ಷತಾ ಕ್ರಮ

ರೈತರುಗಳಿಗೆ ಅಗತ್ಯ ಸುರಕ್ಷತಾ ಕ್ರಮ

6) ರೈತರ ಕೃಷಿ ಉತ್ಪನ್ನಗಳ ಮಾರಾಟವು ಲಾಕ್ ಡೌನ್ ಕಾರಣದಿಂದ ಸಂಕಷ್ಠಕ್ಕೊಳಗಾಗಿದೆ. ಚಿಕ್ಕ ಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ರಕ್ಷಣೆಗೆ ತುರ್ತುಕ್ರಮಗಳಾಗಬೇಕು. ಅದೇ ರೀತಿ ಇತರೇ ಕೃಷಿ ಉತ್ಪನ್ನಗಳ ಖರೀದಿಗೆ ರಾಜ್ಯ ಸರಕಾರದ ಖರೀದಿ ಏಜೆನ್ಸಿಗಳ ಮೂಲಕ ಖರೀದಿಗೆ ಮತ್ತು ಮಾರಾಟಕ್ಕೆ ಹಾಗೂ ಸಾಗಾಟದ ಸಾರಿಗೆಗೆ ತಕ್ಷಣ ಕ್ರಮವಹಿಸಬೇಕು. ಮಾರಾಟದ ಹಾಗೂ ಸುಗ್ಗಿ ಕೃಷಿ ಕೆಲಸದಲ್ಲಿ ತೊಡಗುವ, ಹಮಾಲರು, ಕೃಷಿಕೂಲಿಕಾರರು ,ಬಡ ರೈತರುಗಳಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು.

 ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ

ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ

7) ರಾಜ್ಯದ ಕೆಲವೆಡೆ ಆರೋಗ್ಯ ಕಾರ್ಯಕರ್ತರಿಗೆ ಭೀತಿಗೊಂಡ ಜನತೆ ಅವರು ವಾಸ ಸ್ಥಳಕ್ಕೆ ಬರದಂತೆ ಕಿರುಕುಳ ಹಾಗೂ ತೊಂದರೆ ನೀಡುತ್ತಿರುವರೆನ್ನಲಾಗಿದೆ. ಅಂತಹ ತೊಂದರೆ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕು ಮತ್ತು ಜನಗಳ ಆತಂಕದ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕು.
8) ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಥವಾ ಕೊನೆಯ ಪಕ್ಷ ರಾಷ್ಟ್ರೀಯ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಲು ಕನಿಷ್ಠ ತಾಲೂಕಿಗೊಬ್ಬ ಕಾರ್ಯಕರ್ತನಿಗೆ ಅನುಮತಿ ನೀಡಿ, ಪಾಸ್ ಒದಗಿಸಬೇಕು.
9) ಕೆಲವೆಡೆ ಪೊಲೀಸರ ಅತಿರೇಕದ ಕ್ರಮಗಳು ಕಂಡು ಬಂದಿದ್ದು ಅವುಗಳನ್ನು ತಡೆಯಬೇಕು ಎಂದು ಸಿಪಿ ಇಎಂ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.

English summary
CPIM Karnataka demand proper action solution to Labour, Daily Wage workers, small traders during the Covid19 outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X