ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ಎನ್ನುವುದು ಮುಗಿದ ಅಧ್ಯಾಯ, ಡೋಂಟ್ ವರಿ': ಡಾ.ರಾಜು ಕೃಷ್ಣಮೂರ್ತಿ

|
Google Oneindia Kannada News

ಕೊರೊನಾ ಆರಂಭವಾದ ನಂತರ ತಮ್ಮ ಉಪಯುಕ್ತ ಸಲಹೆಗಳಿಂದ ಬೆಂಗಳೂರಿನಲ್ಲಿ ಮನೆಮಾತಾಗಿರುವ ರಾಜೂ ಹೆಲ್ತಿ ಇಂಡಿಯಾದ ಡಾ.ರಾಜು ಕೃಷ್ಣಮೂರ್ತಿಯವರು ಕೊರೊನಾ ಮೂರನೇ ಅಲೆ ಈಗಾಗಲೇ ಬಂದಾಗಿದೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ.

ನಗರದ ಮೂಡಲಪಾಳ್ಯದಲ್ಲಿ ಸಾಗರ್ ಕ್ಲಿನಿಕ್ ನಡೆಸುತ್ತಿರುವ ಡಾ.ರಾಜು ಅವರು ಈ ಸಂಬಂಧ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಶೇ. 200ರಷ್ಟು ಗ್ಯಾರಂಟಿಯಾಗಿ ಹೇಳುತ್ತಿದ್ದೇನೆ, ಕೊರೊನಾ ಮೂರನೇ ಅಲೆಯೇ ಅಲ್ಲಲ್ಲಿ ನಮ್ಮನ್ನು ಕಾಡುತ್ತಿರುವುದು ಎಂದು ಹೇಳಿದ್ದಾರೆ.

ಅಬ್ಬಬ್ಬಾ..ಮಗುವಿನ ಚಿಕಿತ್ಸೆಗೆ 16 ಕೋಟಿಯ ಇಂಜೆಕ್ಷನ್: ಏನಿದು ಕಾಯಿಲೆ?ಅಬ್ಬಬ್ಬಾ..ಮಗುವಿನ ಚಿಕಿತ್ಸೆಗೆ 16 ಕೋಟಿಯ ಇಂಜೆಕ್ಷನ್: ಏನಿದು ಕಾಯಿಲೆ?

ಮನೆಯಲ್ಲೋ, ಕಚೇರಿಯಲ್ಲೋ ಕೂತು, ರೋಗಿಗಳನ್ನು ನೋಡದೇ ಮೂರನೇ ಅಲೆ ಅಕ್ಟೋಬರ್ ಮೊದಲ ವಾರದಲ್ಲಿ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಮೂರನೇ ಅಲೆ ಬಂದು ಹದಿನೈದು ದಿನಗಳಾಗಿವೆ, ಈಗ ನಾವು ನೋಡುತ್ತಿರುವುದು ಕೊರೊನಾ ಮೂರನೇ ಅಲೆ. ಪ್ರತಿಯೊಬ್ಬರಲ್ಲೂ ಶೀತ, ಜ್ವರ, ನೆಗಡಿ ಈ ರೀತಿಯ ಸಿಂಪ್ಟಮ್ಸ್ ಕಾಣಲಾರಂಭಿಸಿದೆ ಎಂದು ಡಾ.ರಾಜು ಕೃಷ್ಣಮೂರ್ತಿ ಹೇಳಿದ್ದಾರೆ.

ಸಾಧಾರಣವಾದ ಜ್ವರ, ಮೈಕೈನೋವು, ನೆಗಡಿ ಮತ್ತಿದರ ಜೊತೆಗೆ ಸುಸ್ತು ಇರುತ್ತದೆ. ಇದೇ ಸಿಂಪ್ಟಮ್ಸ್ ಕೊರೊನಾ ಮೂರನೇ ಅಲೆಯಲ್ಲೂ ಇರುತ್ತದೆ, ಇದು ತಜ್ಞರಲ್ಲೂ ಆಗುತ್ತದೆ. ಆದರೆ ಇವರೆಲ್ಲಾ ಕೋವಿಡ್ ಟೆಸ್ಟ್ ಮಾಡಿಸುವುದಿಲ್ಲ. ಜನರು ವೈದ್ಯರ ಬಳಿ ಹೋದರೆ, ಆಗ ಟೆಸ್ಟ್ ಮಾಡಿಸಲು ಹೇಳುತ್ತಾರೆ. ಈಗಿನ ಸಂದರ್ಭದಲ್ಲಿ ಟೆಸ್ಟ್ ಮಾಡಿಸಿದರೆ ಪಾಸಿಟೀವ್ ಬರುವ ಸಾಧ್ಯತೆಯೇ ಹೆಚ್ಚು ಎಂದು ಡಾಕ್ಟರ್, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದೆ ಓದಿ..

Recommended Video

ನಾಯಕತ್ವದ ವಿಚಾರದಲ್ಲಿ KL ರಾಹುಲ್ ಗೆ ಮಣೆ ಹಾಕುತ್ತಾ BCCI? | Oneindia Kannada

 ಚಿಕನ್ ಗುನ್ಯಾ, ಡೆಂಘ್ಯೂ ಮುಂತಾದ ಕಾಯಿಲೆಗಳು ಇನ್ನು ಇದ್ದರೂ, ಅದರ ಪ್ರಭಾವ ಕಮ್ಮಿ

ಚಿಕನ್ ಗುನ್ಯಾ, ಡೆಂಘ್ಯೂ ಮುಂತಾದ ಕಾಯಿಲೆಗಳು ಇನ್ನು ಇದ್ದರೂ, ಅದರ ಪ್ರಭಾವ ಕಮ್ಮಿ

ಕೊರೊನಾ ಎರಡನೇ ಅಲೆಯ ನಂತರ ಬಹುತೇಕ ಎಲ್ಲರಲ್ಲೂ ಆಂಟಿ ಬಾಡಿ ಅಭಿವೃದ್ದಿಯಾಗಿದೆ, ಯಾವುದೇ ಒಂದು ಸೋಂಕು ಹದಿನೆಂಟು ತಿಂಗಳ ಮೇಲೆ ಇರುವುದಿಲ್ಲ. ಕೋವಿಡ್ ಬಂದು ಈಗಾಗಲೇ ಅಷ್ಟು ದಿನಗಳಾಗಿವೆ, ವೈರಸಿನ ಪ್ರಭಾವ ಇದರ ನಂತರ ಕಮ್ಮಿಯಾಗುತ್ತದೆ. ಚಿಕನ್ ಗುನ್ಯಾ, ಡೆಂಘ್ಯೂ ಮುಂತಾದ ಕಾಯಿಲೆಗಳು ಇನ್ನು ಇದ್ದರೂ, ಅದರ ಪ್ರಭಾವ ಕಮ್ಮಿಯಾಗಿದೆ. ಇದಕ್ಕೆ, ಯಾವುದೇ ಲಸಿಕೆಯ ಎಫೆಕ್ಟ್ ಕಾರಣವಲ್ಲ ಎಂದು ಡಾ.ರಾಜು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

 ಕೊರೊನಾ ಎನ್ನುವುದು ಎಂಡ್ ಆಫ್ ದಿ ಟಾಪಿಕ್, ಎಷ್ಟೇ ಅಲೆಗಳು ಬಂದರೂ ತೊಂದರೆಯಿಲ್ಲ

ಕೊರೊನಾ ಎನ್ನುವುದು ಎಂಡ್ ಆಫ್ ದಿ ಟಾಪಿಕ್, ಎಷ್ಟೇ ಅಲೆಗಳು ಬಂದರೂ ತೊಂದರೆಯಿಲ್ಲ

ಕೊರೊನಾ ಎನ್ನುವುದು ಎಂಡ್ ಆಫ್ ದಿ ಟಾಪಿಕ್, ಇದರಿಂದ ಇನ್ನಷ್ಟು ತೊಂದರೆಯಾಗಲಿದೆ ಎನ್ನುವುದು ಸುಳ್ಳು, ಈ ವೈರಸ್ ನಮ್ಮ ಜೊತೆಗೇ ಇರುತ್ತದೆ. ಪಾಸಿಟೀವ್ ಬಂದರೂ, ಜನರಿಗೆ ಇದರಿಂದ ಮಾರಣಾಂತಿಕ ತೊಂದರೆಯಾಗುವುದಿಲ್ಲ. ಫ್ಲೂ ರೀತಿಯ ಪರಿಣಾಮಗಳು ಇರುತ್ತವೆ. ಮೂರು, ನಾಲ್ಕು, ಐದು ಎಂದು ಕೊಂಡು ಎಷ್ಟೇ ಅಲೆಗಳು ಬಂದರೂ ತೊಂದರೆಯಿಲ್ಲ. ಕಂಪೆನಿಗಳು, ಆಸ್ಪತ್ರೆಗಳು ಕೊರೊನಾ ಮೂರನೇ ಅಲೆ ಎನ್ನುವ ಮೂಲಕ ಲಾಭವನ್ನು ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು.

 ಸರಿಯಾಗಿ ಟೆಸ್ಟ್ ನಲ್ಲಿ ಬೆಂಗಳೂರಿನಲ್ಲಿ ಕೇರಳಕ್ಕಿಂತ ಹತ್ತು ಪಟ್ಟು ಕೇಸುಗಳು ಸಿಗುತ್ತವೆ

ಸರಿಯಾಗಿ ಟೆಸ್ಟ್ ನಲ್ಲಿ ಬೆಂಗಳೂರಿನಲ್ಲಿ ಕೇರಳಕ್ಕಿಂತ ಹತ್ತು ಪಟ್ಟು ಕೇಸುಗಳು ಸಿಗುತ್ತವೆ

ಕೊರೊನಾ ವಿವಿಧ ಅಲೆಗಳನ್ನು ಹುಟ್ಟು ಹಾಕಿರುವುದು ನನ್ನ ಪ್ರಕಾರ ಕೆಲವೊಂದು ವೈದ್ಯರುಗಳೇ, ಜನರಲ್ಲಿ ಭಯ ಹುಟ್ಟಿಸುತ್ತಾರೆ, ಪದೇಪದೇ ಟೆಸ್ಟ್ ಮಾಡಿಸಲು ಹೇಳುತ್ತಾರೆ. ಸರಿಯಾಗಿ ಟೆಸ್ಟ್ ಬೆಂಗಳೂರಿನಲ್ಲಿ ನಲ್ಲಿ ಮಾಡಿದರೆ, ಕೇರಳಕ್ಕಿಂತ ಹತ್ತು ಪಟ್ಟು ಜಾಸ್ತಿ ಕೇಸುಗಳು ಸಿಗುತ್ತವೆ. ಆದರೆ, ಈ ಟೆಸ್ಟ್ ಮಾಡಿಸುವ ಅವಶ್ಯಕತೆಯೇ ಇಲ್ಲ, ಯಾಕೆಂದರೆ ವೈರಸಿನ ಪ್ರಭಾವ ಕಮ್ಮಿಯಾಗಿದೆ, ಜನರಲ್ಲಿರುವ ಆಂಟಿ ಬಾಡಿ ಪವರ್ ಕೂಡಾ ಹೆಚ್ಚಾಗಿದೆ. ಕೊರೊನಾ ಎನ್ನುವ ಭಯವನ್ನು ನಮ್ಮ ತಲೆಯಿಂದ ಮೊದಲು ತೆಗೆದು ಹಾಕಬೇಕು ಎಂದು ಡಾ.ರಾಜು ಕೃಷ್ಣಮೂರ್ತಿ ಹೇಳಿದ್ದಾರೆ.

 ಕೊರೊನಾ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವವರು ಸಂಖ್ಯೆ ಹೆಚ್ಚಿದೆ - ಡಾ.ರಾಜು ಕೃಷ್ಣಮೂರ್ತಿ

ಕೊರೊನಾ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವವರು ಸಂಖ್ಯೆ ಹೆಚ್ಚಿದೆ - ಡಾ.ರಾಜು ಕೃಷ್ಣಮೂರ್ತಿ

ಜನರು ಮೊದಲು ಟೆಸ್ಟ್ ಮಾಡಿಸುವುದನ್ನು ನಿಲ್ಲಿಸಲಿ, ಆಯಾಯ ಕಾಯಿಲೆಗೆ ಸಂಬಂಧಿಸಿದಂತೆ ಮಾತ್ರ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು. ಸಾಚ್ಯುರೇಶನ್ ಲೆವೆಲ್ ಕಮ್ಮಿಯಾಗದಂತೆ ಜನರು ನೋಡಿಕೊಳ್ಳಬೇಕು, ಯಾಕೆಂದರೆ ಇದು ಕಮ್ಮಿಯಾಗಬಾರದು. ಕೊರೊನಾ ಡೇಂಜರಸ್ ಎನ್ನುವುದು ಮುಗಿದ ಅಧ್ಯಾಯ. ಕೊರೊನಾ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವವರು ಸಂಖ್ಯೆ ಹೆಚ್ಚಿದೆ. ಕೊರೊನಾ ಮಾರ್ಗಸೂಚಿಗಳು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇರಬೇಕು ಎಂದು ಡಾ.ರಾಜು ಕೃಷ್ಣಮೂರ್ತಿ ಹೇಳಿದ್ದಾರೆ.

English summary
Covid-19 infection is the finished chapter says Dr Raju Krishnamurthy, he said 3rd wave already started, now antibodies developed in everyone's body. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X