ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಷ್ಟತೆಯಿಲ್ಲದ ಪರಿಷ್ಕೃತ ದಿಢೀರ್ ಮಾರ್ಗಸೂಚಿ: ಶೇ.90 ಲಾಕ್‌ಡೌನ್‌ನತ್ತ ರಾಜ್ಯ

|
Google Oneindia Kannada News

ರಾಜ್ಯಪಾಲರು ಕರೆದ ಸರ್ವಪಕ್ಷಗಳ ಸಭೆ, ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ, ಹೊಸ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿತ್ತು. ಆ ಮೂಲಕ, ರಾಜ್ಯ ಮತ್ತೆ ಲಾಕ್ ಡೌನ್ ಆಗಲಿದೆ ಎನ್ನುವ ಸುದ್ದಿಗೆ ತೆರೆಬಿದ್ದಿತ್ತು.

ಹೊಸ ಮಾರ್ಗಸೂಚಿಯಂತೆ ಸಾರ್ವಜನಿಕರು/ಸಂಸ್ಥೆಗಳು ಮತ್ತು ಇತರ ಉದ್ದಿಮೆಗಳು ಕಾರ್ಯ ನಿರ್ವಹಿಸಲಾರಂಭಿಸಿದ್ದವು. ಆದರೆ, ಬುಧವಾರ (ಏ 21) ಕೆಲವೊಂದು ಮಾರ್ಪಾಡುಗಳನ್ನು ಸರಕಾರ ಮಾಡಿತ್ತು.

ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್! ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್!

ಆದರೆ, ಪರಿಷ್ಕೃತ ಮಾರ್ಗಸೂಚಿಗೂ ಮತ್ತು ಮೂಲ ಮಾರ್ಗಸೂಚಿಗೂ ಏನೂ ಅಂಥ ವ್ಯತ್ಯಾಸಗಳು ಇರಲಿಲ್ಲ. ಜೊತೆಗೆ, ಈ ಹೊಸ ಆದೇಶದ ಪ್ರಕಾರ ಯಾವುದು ಓಪನ್, ಯಾವುದಕ್ಕೆ ನಿರ್ಬಂಧ ಎನ್ನುವ ಸ್ಪಷ್ಟ ಮಾಹಿತಿಯೂ ಇರಲಿಲ್ಲ.

ಇನ್ನೊಂದು ವಿಚಾರವೇನಂದರೆ, ಪರಿಷ್ಕೃತ ಮಾರ್ಗಸೂಚಿಯನ್ನು ಸರಕಾರದ ಮಟ್ಟದಲ್ಲಿ ಯಾರೂ ಮಾಧ್ಯಮದವರ ಮುಂದೆ ಪ್ರಕಟಿಸಿರಲಿಲ್ಲ. ಆದರೆ, ಸರಕಾರದ ಮಾರ್ಗಸೂಚಿಯನ್ನು ಜಿಲ್ಲಾಡಳಿತ ಜಾರಿಗೆ ತರಲು ಮುಂದಾಗಿದ್ದು, ಬೆಂಗಳೂರು ಸೇರಿದಂತೆ ಶೇ. 90ರಷ್ಟು ಲಾಕ್‌ಡೌನ್ ಆಗುವ ಸಾಧ್ಯತೆಯಿದೆ. ಸರಕಾರದ ಉದ್ದಟತನದ ಪರಮಾವಧಿ, ಮುಂದೆ ಓದಿ..

ಭಾರತದಿಂದ ಸಿಂಗಾಪುರಕ್ಕೆ ಹೋಗಬೇಕೆ? 3 ವಾರ ಕ್ವಾರಂಟೈನ್ ಆಗ್ಲೇಬೇಕುಭಾರತದಿಂದ ಸಿಂಗಾಪುರಕ್ಕೆ ಹೋಗಬೇಕೆ? 3 ವಾರ ಕ್ವಾರಂಟೈನ್ ಆಗ್ಲೇಬೇಕು

ಡಿಸ್ಚಾರ್ಜ್ ಆಗಿರುವ ಸಿಎಂ ಯಡಿಯೂರಪ್ಪ

ಡಿಸ್ಚಾರ್ಜ್ ಆಗಿರುವ ಸಿಎಂ ಯಡಿಯೂರಪ್ಪ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಿಎಂ ಯಡಿಯೂರಪ್ಪ, ಬೆಂಗಳೂರು ವ್ಯಾಪ್ತಿಯ ಸಚಿವರು, ಸಂಸದರು ಮತ್ತು ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ. ಈ ಸಭೆ ಸದ್ಯ ಚಾಲಿಯಲ್ಲಿದೆ. ಯಾವಯಾವ ಚಟುವಟಿಕೆಗಳಿಗೆ ಅನುಮತಿ ಇದೆ/ಇಲ್ಲ ಎನ್ನುವುದರ ಬಗ್ಗೆ ಸರಕಾರ ಸ್ಪಷ್ಟನೆಯನ್ನು ನೀಡಲಿದೆ.

ಬುಧವಾರದ ಪರಿಷ್ಕೃತ ಮಾರ್ಗಸೂಚಿ

ಬುಧವಾರದ ಪರಿಷ್ಕೃತ ಮಾರ್ಗಸೂಚಿ

ಆದರೆ, ಬುಧವಾರದ ಪರಿಷ್ಕೃತ ಮಾರ್ಗಸೂಚಿಯ ನಂತರ ಆಯಾ ಜಿಲ್ಲಾಡಳಿತ ಅದನ್ನು ಜಾರಿಗೆ ತರಲು ಮುಂದಾದ ರೀತಿ ಮಾತ್ರ ಒಪ್ಪಿಕೊಳ್ಳುವಂತದಲ್ಲ. ಯಾವುದೇ ಪೂರ್ವ ಮಾಹಿತಿಯಿಲ್ಲದೇ, ಅಂಗಡಿಗಳನ್ನು ಪೊಲೀಸರು ಜಬರ್ದಸ್ತಾಗಿ ಮುಚ್ಚುತ್ತಿರುವುದು ಉದ್ಯಮಿಗಳಿಗೆ, ಸಣ್ಣಪುಟ್ಟ ಅಂಗಡಿಯವರಿಗೆ ಶಾಕ್ ನೀಡಿದೆ.

ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿರುವ ಪೊಲೀಸರು

ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿರುವ ಪೊಲೀಸರು

ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಅವೆನ್ಯೂ ರಸ್ತೆ, ಚಿಕ್ಕಪೇಟೆ ಭಾಗದಲ್ಲಿ ಪೊಲೀಸರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ರೀತಿ ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಅಂಗಡಿಗಳನ್ನು ಮುಚ್ಚಿಸುತ್ತಿರುವುದರ ಬಗ್ಗೆ ವರದಿಯಾಗಿದೆ.

ಒಂದೋ ಲಾಕ್‌ಡೌನ್, ಇಲ್ಲವೋ ನಾರ್ಮಲ್

ಒಂದೋ ಲಾಕ್‌ಡೌನ್, ಇಲ್ಲವೋ ನಾರ್ಮಲ್

ಒಂದೋ ಲಾಕ್‌ಡೌನ್, ಇಲ್ಲವೋ ನಾರ್ಮಲ್. ಎರಡರಲ್ಲಿ ಯಾವುದನ್ನೂ ಸ್ಪಷ್ಟವಾಗಿ ತಿಳಿಸದ ಸರಕಾರ ವಾಣಿಜ್ಯ ಚಟುವಟಿಕೆಗಳ ಮೇಲೆ ಗಧಾಪ್ರಹಾರ ಮಾಡುತ್ತಿರುವುದು ಖಂಡನೀಯ. ಒಂದರ ಮೇಲೊಂದು ಗೊಂದಲದ/ ಮುಂದಾಲೋಚನೆಯಿಲ್ಲದ ನಿರ್ಧಾರ ತೆಗೆದುಕೊಳ್ಳುವ ಸರಕಾರಕ್ಕೆ ಅದ್ಯಾವಾಗ ಬುದ್ದಿಬರುತ್ತೋ ಎಂದು ಸಾರ್ವಜನಿಕರು ರೊಚ್ಚಿಗೆದ್ದರೆ, ಸರಕಾರಕ್ಕೆ ಇದು ದುಬಾರಿಯಾಗುವುದಂತೂ ನಿಶ್ಚಿತ.

English summary
Karnataka Covid-19 Guidelines: only essential services allowed in the state till may 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X