ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಕೋವಿಡ್ ಲಸಿಕೆ ಪರಿಚಯದ ಸಿದ್ಧತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಕೋವಿಡ್-19 ಲಸಿಕೆ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿಯೂ ಲಿಸಿಕೆ ಪರಿಚಯದ ಸಿದ್ಧತೆಗಳು ನಡೆದಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 8,84,897ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕೋವಿಡ್-19 ಲಸಿಕೆ ಪರಿಚಯದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಲಸಿಕೆ ಕುರಿತು ಚರ್ಚೆ ನಡೆಸಿದ್ದಾರೆ.

ಕೊರೊನಾ ಲಸಿಕೆ ತಯಾರು ಕಂಪನಿ, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಶ್ಲಾಘನೆಕೊರೊನಾ ಲಸಿಕೆ ತಯಾರು ಕಂಪನಿ, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಶ್ಲಾಘನೆ

ವಿವಿಧ ಟಾಸ್ಕ್ ಫೋರ್ಸ್ ಮತ್ತು ಚಾಲನಾ ಸಮಿತಿ ಸಭೆಗಳನ್ನು ನಡೆಸಿರುವುದಕ್ಕೆ ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯಗಳ ಬಹಳಷ್ಟು ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ಲಸಿಕೆಗಾಗಿ ಪಟ್ಟಿ ಮಾಡಿರುವುದಕ್ಕೆ ಕರ್ನಾಟಕ ರಾಜ್ಯವನ್ನು ಪ್ರಶಂಶಿಸಲಾಗಿದೆ.

2021ರ ಆಗಸ್ಟ್ ವೇಳೆಗೆ 30 ಕೋಟಿ ಭಾರತೀಯರಿಗೆ ಕೊವಿಡ್-19 ಲಸಿಕೆ 2021ರ ಆಗಸ್ಟ್ ವೇಳೆಗೆ 30 ಕೋಟಿ ಭಾರತೀಯರಿಗೆ ಕೊವಿಡ್-19 ಲಸಿಕೆ

ಕರ್ನಾಟಕ ರಾಜ್ಯವು ಕೋವಿಡ್ 19 ಲಸಿಕೆ ಶೇಖರಣೆ, ವಿತರಣೆ ಮತ್ತು ನಿರ್ವಹಣೆಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಲೂಕು ಮಟ್ಟದಲ್ಲಿ ಕಾರ್ಯಪಡೆ ಸಭೆಗಳನ್ನು ನಡೆಸಲು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ.

ಲಸಿಕೆ ತುರ್ತು ಬಳಕೆಗೆ ಅಮೆರಿಕ, ಯುರೋಪ್ ಅನುಮತಿ ಕೋರಿದ ಮಾಡೆರ್ನಾಲಸಿಕೆ ತುರ್ತು ಬಳಕೆಗೆ ಅಮೆರಿಕ, ಯುರೋಪ್ ಅನುಮತಿ ಕೋರಿದ ಮಾಡೆರ್ನಾ

ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ

ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಭೆ ನಡೆಸಲಾಗಿದೆ. ಶೀತಲ ಸರಪಣಿ ಸಿದ್ಧತೆ ಹಾಗೂ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಣೆ ಕುರಿತು ಪರಿಶೀಲನೆ ನಡೆಸಲಾಗಿದೆ. 224083 ಸರ್ಕಾರಿ ವಲಯ, 245773 ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ಲಸಿಕೆಗಾಗಿ ನೋಂದಣಿ ಮಾಡಲಾಗಿದೆ.

ಲಸಿಕೆ ನೀಡುವವರ ಗುರುತಿಸುವಿಕೆ

ಲಸಿಕೆ ನೀಡುವವರ ಗುರುತಿಸುವಿಕೆ

ಇದುವರೆಗೂ 68317 ಸರ್ಕಾರಿ, 35310 ಖಾಸಗಿ ವಲಯದಲ್ಲಿನ ಲಸಿಕೆ ನೀಡುವವರನ್ನು ಗುರುತಿಸಲಾಗಿದೆ. ಭಾರತ ಸರ್ಕಾರದಿಂದ ಸರಬರಾಜು ಮಾಡಲಾಗುವ ಶೀತಲ ಸರಪಣಿ ಉಪಕರಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೇಂದ್ರ ಸರ್ಕಾರಕ್ಕೆ ಮಾಹಿತಿ

ಕೇಂದ್ರ ಸರ್ಕಾರಕ್ಕೆ ಮಾಹಿತಿ

ಪಶುಸಂಗೋಪನಾ ಇಲಾಖೆಯಲ್ಲಿ ಲಭ್ಯವಿರುವ ಶೀತಲ ಶೇಖರಣೆ ಸ್ಥಳ ಲಭ್ಯತೆಯ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಭಾರತದ ಆಹಾರ ನಿಗಮದಡಿಯಲ್ಲಿ ಲಭ್ಯವಿರುವ ಡ್ರೈ ಸ್ಟೋರೇಜ್ ಸ್ಥಳ ಲಭ್ಯತೆ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.

ಮೂರು ವಿಭಾಗೀಯ ಲಸಿಕಾ ಉಗ್ರಾಣ

ಮೂರು ವಿಭಾಗೀಯ ಲಸಿಕಾ ಉಗ್ರಾಣ

ಬೆಂಗಳೂರು ನಗರ, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮೂರು ಹೊಸ ವಿಭಾಗೀಯ ಮಟ್ಟದ ಲಸಿಕಾ ಉಗ್ರಾಣ ಹಾಗೂ ರಾಜ್ಯದ ಲಸಿಕಾ ವಿತರಣೆ ಜಾಲವನ್ನು ಉತ್ತಮ ಪಡಿಸಲು ಲಸಿಕಾ ವಾಹನ ಮತ್ತು ಶೀತಲೀಕರಿಸಿದ ಲಸಿಕಾ ವಾಹನವನ್ನು ಪೂರೈಸಲು ಕೋರಲಾಗಿದೆ.

ಶೀಘ್ರವೇ ತರಬೇತಿ

ಇ-ವಿನ್ ಲಸಿಕೆಯ ಆರ್ಡರ್ ಮ್ಯಾನೇಜ್‌ಮೆಂಟ್‌ಗಾಗಿ ಶೀಘ್ರವೇ ತರಬೇತಿ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.

English summary
Karnataka closely monitoring developments in the COVID-19 vaccine. State COVID cases tally raised to 8,84,897.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X