ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಜೂನ್ 24; ಕರ್ನಾಟಕ ಸರ್ಕಾರ ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಆದೇಶ ಹೊರಡಿಸಿದೆ. ಈ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ತಿಂಗಳು ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಪೂರ್ವವಾಗಿ ಪದವಿ ವಿದ್ಯಾರ್ಥಿಗಳು, ಬೋಧಕ/ ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತದೆ.

ಕೊಪ್ಪಳ; ನರೇಗಾ ಕೂಲಿಕಾರರಿಗೆ ಸ್ಥಳದಲ್ಲೇ ಕೋವಿಡ್ ಲಸಿಕೆ ಕೊಪ್ಪಳ; ನರೇಗಾ ಕೂಲಿಕಾರರಿಗೆ ಸ್ಥಳದಲ್ಲೇ ಕೋವಿಡ್ ಲಸಿಕೆ

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಲಸಿಕೆ ಅಭಿಯಾನ ನಡೆಸಲು ಆದೇಶ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜುಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಕಾಲೇಜುಗಳಲ್ಲಿ ಅಭಿಯಾನ ಆಯೋಜಿಸಿ ಲಸಿಕೆ ಕೊಡಲಾಗುತ್ತದೆ.

 ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ

Covid Vaccination Drive For Degree College Students Guidelines

ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ 12+ ಕಾಲೇಜುಗಳ (ಪದವಿ/ ಡಿಪ್ಲೊಮಾ) ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.

ದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆ

ಪ್ರತಿ ಕಾಲೇಜಿನ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ (ವಿದ್ಯಾರ್ಥಿ/ ಬೋಧಕ/ ಬೆಂಬಲ ಸಿಬ್ಬಂದಿ) ಸಂಖ್ಯೆಯನ್ನು ಸಂಸ್ಥೆಯ ಮುಖ್ಯಸ್ಥರಿಂದ ಧೃಡೀಕರಿಸಿದ ಬಳಿಕ ಆರೋಗ್ಯ ಇಲಾಖೆಗೆ ಲಸಿಕಾಕರಣದ ಸಿದ್ಧತೆಗಾಗಿ ನೀಡಬೇಕು ಎಂದು ತಿಳಿಸಲಾಗಿದೆ.

ಲಸಿಕಾಕರಣ ಅಭಿಯಾನಕ್ಕಾಗಿ ಪ್ರತಿ ಕಾಲೇಜು ಮುಖ್ಯಸ್ಥರು ಒಬ್ಬ ಜವಾಬ್ದಾರಿಯುತ ನೋಡೆಲ್ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿ ಆರೋಗ್ಯ ಇಲಾಖೆ ಜೊತೆ ಸಂಪರ್ಕದಲ್ಲಿರಬೇಕು.

Recommended Video

Strawberry Moon ಅಂದ್ರೆ ಏನು? ಚಂದ್ರನನ್ನು‌ ಹೀಗೆ ಕರೆಯೋದಕ್ಕೆ ಏನು ಕಾರಣ ಗೊತ್ತಾ? | Oneindia Kannada

ಅರ್ಹ ಫಲಾನುಭವಿಗಳಿಗೆ ಲಸಿಕೆ ಲಭ್ಯತೆ ಆಧಾರದ ಮೇಲೆ ಕಾಲೇಜು ಆವರಣದಲ್ಲಿಯೇ ಲಸಿಕೆ ನೀಡಲಾಗುತ್ತದೆ. ಎಲ್ಲಾ ಅರ್ಹರಿಗೂ ಲಸಿಕೆ ತಲುಪುವಂತೆ ನೋಡೆಲ್ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು.

English summary
Karnataka government decided to conduct Covid vaccination drive for degree college students. Here are the guidelines for vaccination drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X