ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಕೋವಿಡ್‌ ಗುಣಮುಖ ಸಂಖ್ಯೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಬೆಂಗಳೂರು ನಗರವೊಂದರದಲ್ಲಿಯೇ 1 ಲಕ್ಷಕ್ಕೂ ಅಧಿಕ ಸೋಂಕಿತರು ಇದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಅಧಿಕವಾಗಿದೆ.

Recommended Video

ಬಿಡುಗಡೆಯಾಯ್ತು RCB ಹೊಸ ಜೆರ್ಸಿ | Oneindia Kannada

ಕರ್ನಾಟಕದ ಆರೋಗ್ಯ ಇಲಾಖೆಯ ಮಂಗಳವಾರ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 204439. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 82,410.

ಡಿಕೆಶಿಗೆ ಕೋವಿಡ್ ಸೋಂಕು; ಸೋನಿಯಾ ಗಾಂಧಿ ದೂರವಾಣಿ ಕರೆ ಡಿಕೆಶಿಗೆ ಕೋವಿಡ್ ಸೋಂಕು; ಸೋನಿಯಾ ಗಾಂಧಿ ದೂರವಾಣಿ ಕರೆ

ಆರೋಗ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ‌ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 2 ಲಕ್ಷ ದಾಟಿದೆ. ಕಳೆದ 7 ದಿನಗಳಲ್ಲಿ 55,000 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ 1.2 ಲಕ್ಷ ಹೆಚ್ಚಿದೆ.

ಕೋವಿಡ್ ಪರೀಕ್ಷೆ ಟಾರ್ಗೆಟ್; ತಳಮಟ್ಟದ ಚಿತ್ರಣವೇ ಬೇರೆ ಕೋವಿಡ್ ಪರೀಕ್ಷೆ ಟಾರ್ಗೆಟ್; ತಳಮಟ್ಟದ ಚಿತ್ರಣವೇ ಬೇರೆ

COVID Recovery Rate Karnataka More Than Active Cases

ಕರ್ನಾಟಕದಲ್ಲಿ ಗುಣಮುಖರಾದವರು 2,04,439. ಕೋವಿಡ್ ಸೋಂಕಿನ ಚೇತರಿಕೆ ಪ್ರಮಾಣ ಶೇ 70.05. ಮರಣ‌ ಪ್ರಮಾಣ 1.69 ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೋವಿಡ್ ರೋಗಿಗಳಿಗೆ ಆಮ್ಲಜನಕ ಬಳಕೆ: ಸರ್ಕಾರದ ಹೊಸ ನಿಯಮಕೋವಿಡ್ ರೋಗಿಗಳಿಗೆ ಆಮ್ಲಜನಕ ಬಳಕೆ: ಸರ್ಕಾರದ ಹೊಸ ನಿಯಮ

4958 ಕೋವಿಡ್ ಸೋಂಕಿತರು ಕರ್ನಾಟಕದಲ್ಲಿ ಇದುವರೆಗೂ ಮೃತಪಟ್ಟಿದ್ದಾರೆ. ಮಂಗಳವಾರ ಬೆಂಗಳೂರು ನಗರದಲ್ಲಿ 2294 ಹೊಸ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,12,087ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿಯೂ ಸಕ್ರಿಯ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರ ಸಂಖ್ಯೆ ಅಧಿಕವಾಗಿದೆ. 74,901 ಜನರು ಇದುವರೆಗೂ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 35,430.

English summary
COVID 19 recovery rate in Karnataka more than the active cases. According to August 25th report state has 204439 recovery numbers and total active cases 82,410.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X