ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಕೋವಿಡ್ ಸೋಂಕಿನ ಭೀತಿ ವಿವಿಧ ವಲಯಗಳ ಜೊತೆ ದೇವಾಲಯಗಳಿಗೂ ತಟ್ಟಿದೆ. ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಮುಜರಾಯಿ ಇಲಾಖೆ ದೇವಾಲಯಗಳ ಆದಾಯದಲ್ಲಿ ಭಾರಿ ಕುಸಿತವಾಗಿದೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಕರ್ನಾಟಕದ 20 ಪ್ರಮುಖ ದೇವಾಲಯಗಳ ಆದಾಯಗಳನ್ನು ಗಮನಿಸಿದರೆ ಶೇ 72ರಷ್ಟು ಆದಾಯ ಕುಸಿತಕಂಡಿದೆ. 2019-20ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯ ಕಡಿಮೆಯಾಗಿದೆ. ಇದಕ್ಕೆ ಲಾಕ್ ಡೌನ್ ಸಹ ಕಾರಣವಾಗಿದೆ.

ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ

ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರು ಈ ಕುರಿತು ಮಾತನಾಡಿದ್ದು, "ಅನ್‌ಲಾಕ್ 3.0 ಮಾರ್ಗಸೂಚಿ ಅನ್ವಯ ದೇವಾಲಯಗಳನ್ನು ತೆರೆಯಲಾಗಿದೆ. ಆದರೆ, ಕೆಲವು ವಿಶೇಷ ಸೇವೆಗಳಿಗೆ ಇನ್ನೂ ಅನುಮತಿ ನೀಡಿಲ್ಲ" ಎಂದು ಹೇಳಿದ್ದಾರೆ.

ಆ.26ರಿಂದ ಅನಂತ ಪದ್ಮನಾಭ ಸ್ವಾಮಿ ದರ್ಶನ ಪಡೆಯಿರಿ ಆ.26ರಿಂದ ಅನಂತ ಪದ್ಮನಾಭ ಸ್ವಾಮಿ ದರ್ಶನ ಪಡೆಯಿರಿ

ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,000 ದೇವಾಲಯಗಳಿವೆ. ಇವುಗಳಲ್ಲಿ 500 ಎ ಮತ್ತು ಬಿ ಗ್ರೇಡ್ ದೇವಾಲಯಗಳು. ವಿಶೇಷ ಸೇವೆ, ಜಾತ್ರೆ, ಧಾರ್ಮಿಕ ಕಾರ್ಮಿಕ್ರಮ ನಡೆಸಲು ಅನುಮತಿ ಸಿಕ್ಕಿದರೆ ಆದಾಯ ಸಂಗ್ರಹಣೆ ಹೆಚ್ಚಾಗಲಿದೆ.

ದೇವಾಲಯಗಳಿಗೂ ಕೋವಿಡ್ ಬಿಸಿ; ಆದಾಯದಲ್ಲಿ ಕುಸಿತ ದೇವಾಲಯಗಳಿಗೂ ಕೋವಿಡ್ ಬಿಸಿ; ಆದಾಯದಲ್ಲಿ ಕುಸಿತ

ರಾಜ್ಯದ ಶ್ರೀಮಂತ ದೇವಾಲಯ

ರಾಜ್ಯದ ಶ್ರೀಮಂತ ದೇವಾಲಯ

ಕರ್ನಾಟಕದ ಶ್ರೀಮಂತ ದೇವಾಲಯ ದಕ್ಷಿಣ ಕನ್ನಡದಲ್ಲಿರುವ ಕುಕ್ಕೆ ಸುಬ್ರಮಣ್ಯ. ಈ ಆರು ತಿಂಗಳ ಅವಧಿಯಲ್ಲಿ ದೇವಾಲಯಕ್ಕೆ ಬಂದ ಆದಾಯ ಕೇವಲ 4.28 ಕೋಟಿ. ಕಳೆದ ವರ್ಷ ದೇವಾಲಯದ ಆದಾಯ 98 ಕೋಟಿ. ಆರು ತಿಂಗಳಿನಲ್ಲಿ 24.7 ಕೋಟಿ ಆದಾಯ ಬಂದಿತ್ತು.

ಕೇವಲ 18 ಕೋಟಿ ಆದಾಯ

ಕೇವಲ 18 ಕೋಟಿ ಆದಾಯ

ಕರ್ನಾಟಕದ 20 ಪ್ರಮುಖ ದೇವಾಲಯಗಳಲ್ಲಿ ಆರು ತಿಂಗಳಿನಲ್ಲಿ ಸುಮಾರು 79 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈ ವರ್ಷ ಲಾಕ್ ಡೌನ್, ಕೋವಿಡ್ ಭೀತಿಯ ಕಾರಣದಿಂದಾಗಿ ಕೇವಲ 18 ಕೋಟಿ ಆದಾಯ ಸಂಗ್ರಹವಾಗಿದೆ.

ಯಾವ ದೇವಾಲಯದ ಆದಾಯ ಎಷ್ಟು?

ಯಾವ ದೇವಾಲಯದ ಆದಾಯ ಎಷ್ಟು?

ಕೊಲ್ಲೂರು ಮೂಕಾಬಿಂಕಾ ದೇವಾಲಯದಲ್ಲಿ ಆರು ತಿಂಗಳಿನಲ್ಲಿ ಶೇ 40ರಷ್ಟು ಮಾತ್ರ ಆದಾಯ ಸಂಗ್ರಹಣೆ ಆಗಿದೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಆರು ತಿಂಗಳಿನಲ್ಲಿ ಸಂಗ್ರಹವಾದ ಆದಾಯ ಕೇವಲ 1.3 ಕೋಟಿ ಆಗಿದೆ.

ಚೇತರಿಕೆ ಕಂಡ ಆದಾಯ

ಚೇತರಿಕೆ ಕಂಡ ಆದಾಯ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬಾ ದೇವಾಲಯದಲ್ಲಿ ಈ ಆರು ತಿಂಗಳಿನಲ್ಲಿ 89.19 ಲಕ್ಷ ಆದಾಯ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಮೊದಲ ಆರು ತಿಂಗಳಿನಲ್ಲಿ ಶೇ 109ರಷ್ಟು ಆದಾಯ ಏರಿಕೆಯಾಗಿದೆ.

English summary
Due to COVID 19 pandemic 20 wealthiest temples revenue dropped to 72 per cent in Karnataka in the first quarter of this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X