ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌; ಅನಾಥ ಮಕ್ಕಳಿಗೆ ಆಸರೆಯಾದ ಆದಿಚುಂಚನಗಿರಿ ಮಠ

|
Google Oneindia Kannada News

ಬೆಂಗಳೂರು, ಮೇ 21; ಕೋವಿಡ್ ಸೋಂಕಿನಿಂದ ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಮುಂದಾಗಿದೆ.

ಕೋವಿಡ್ ಎರಡನೇ ಅಲೆಯಿಂದ ತೀವ್ರತರವಾದ ಸಂಕಷ್ಟವನ್ನು ಜನರು ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಅನಾಥರಾಗಿರುವ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮಠದ ವತಿಯಿಂದ ವಹಿಸಿಕೊಳ್ಳಲಾಗುವುದು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.

 ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭ

ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ತಂದೆ, ತಾಯಿ ಹಾಗೂ ಪೋಷಕರು ಮೃತಪಟ್ಟಿರುತ್ತಾರೆ. ಹೀಗೆ ಮೃತಪಟ್ಟವರ ಮಕ್ಕಳು ಆಶ್ರಯವಿಲ್ಲದೆ, ಅನ್ನ, ಶಿಕ್ಷಣಕ್ಕೆ ಪರದಾಡಬೇಕಾಗುತ್ತದೆ. ಇಂತಹ ಮಕ್ಕಳು ಅನಾಥರಾಗಿರುವ ವರದಿಗಳು ಮಾಧ್ಯಮಗಳಲ್ಲಿ ಬಂದಿವೆ.

ಕೋವಿಡ್-19: 50 ಲಕ್ಷ ರೂಪಾಯಿ ದೇಣಿಗೆ ನೀಡಿದ ಆದಿಚುಂಚನಗಿರಿ ಮಠಕೋವಿಡ್-19: 50 ಲಕ್ಷ ರೂಪಾಯಿ ದೇಣಿಗೆ ನೀಡಿದ ಆದಿಚುಂಚನಗಿರಿ ಮಠ

Covid Adichunchanagiri Mutt To Take Education Related Responsibilities Of Children

ಅನ್ನ, ಅಕ್ಷರ, ಆರೋಗ್ಯ ಸೇವೆಗೆ ಸದಾ ಮುಂದಿರುವ ಮಠವು, ಮಾನವೀಯ ದೃಷ್ಟಿಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಿದೆ ಎಂದು ಸ್ವಾಮೀಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಂದೆ, ತಾಯಿ ಕಳೆದುಕೊಂಡಿರುವ ಮಕ್ಕಳು ಆದಿಚುಂಚನಗಿರಿ ಮಠದಲ್ಲಿ ಸಂಪೂರ್ಣ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

ನಮ್ಮ ತಾಯಿ ಸಾವಿಗೆ ಬಿಬಿಎಂಪಿ ಕಾರಣ ಎಂದು ಕಣ್ಣೀರು ಹಾಕುತ್ತಿರುವ ಹೆಣ್ಣು ಮಕ್ಕಳುನಮ್ಮ ತಾಯಿ ಸಾವಿಗೆ ಬಿಬಿಎಂಪಿ ಕಾರಣ ಎಂದು ಕಣ್ಣೀರು ಹಾಕುತ್ತಿರುವ ಹೆಣ್ಣು ಮಕ್ಕಳು

ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡು ನೋವಿನಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ‌ ಶ್ರೀಮಠವು ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ತಂದೆ, ತಾಯಿ ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಈ ಕೆಳಕಂಡ ಮೊಬೈಲ್ ಸಂಖ್ಯೆ ಸಂಖ್ಯೆಯನ್ನು ಸಂಪರ್ಕಿಸಬಹುದು. ಬೆಂಗಳೂರು 9448071803 ಹಾಗೂ ಆದಿಚುಂಚನಗಿರಿ ಮಠದಲ್ಲಿ 9148024141.

Recommended Video

IPL ನಡೇಸೋಕೆ ಮಹತ್ವದ ಸಭೆ! | Oneindia Kannada

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಠವು ಬೆಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್, ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರಿಗೆ ಸಾರಿಗೆ ವ್ಯವಸ್ಥೆ ಹಾಗೂ ಔಷಧಿ ಕಿಟ್ ನೀಡುವ ಕಾರ್ಯವನ್ನು ಮಾಡುತ್ತಿದೆ.

English summary
The Adichunchanagiri Mutt come forward to take education-related responsibilities of kids who lost parents due to Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X