ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆಯಲ್ಲೇ ಸಾವು, ಪಾದಾಚಾರಿ ಮಾರ್ಗವೇ ಹಾಸಿಗೆ: ಇದು ಕೊರೊನಾ ತಂದಿತ್ತ ಪರಿಸ್ಥಿತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು 20,000ಕ್ಕೂ ಹೆಚ್ಚು ವರದಿಯಾಗಿದ್ದು, ಕರ್ನಾಟಕ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಭಯಾನಕ ದೃಶ್ಯಗಳು ಕಂಡುಬರುತ್ತಿವೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿಲ್ಲದೆ ಕೊರೊನಾ ಸೋಂಕಿತ ರೋಗಿಗಳು ಪಾದಚಾರಿ ಮಾರ್ಗದ ಮೇಲೆ ಮಲಗುತ್ತಿದ್ದರೆ, ಅದರಲ್ಲಿ ಹಲವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

ಬೀದರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದು, ಹೊರಗಡೆ ಸಾಲುಗಟ್ಟಿ ಮಲಗುತ್ತಿರುವ ದೃಶ್ಯ ದುಃಖ ತರಿಸುವಂತಿದೆ.

ಒನ್ಇಂಡಿಯಾ ಫಲಶ್ರುತಿ: ಸುಧಾಕರ್‌ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್ಒನ್ಇಂಡಿಯಾ ಫಲಶ್ರುತಿ: ಸುಧಾಕರ್‌ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್

ರಸ್ತೆಯಲ್ಲೇ ಸಾವು, ಮಲಗುವುದು

ರಸ್ತೆಯಲ್ಲೇ ಸಾವು, ಮಲಗುವುದು

ಹಾಸಿಗೆಗಳು ಲಭ್ಯವಿಲ್ಲದ ಕಾರಣ ಬೆಂಗಳೂರಿನಲ್ಲಿ ಕೋವಿಡ್ ಸಂತ್ರಸ್ತಯೊಬ್ಬರು ರಸ್ತೆಯಲ್ಲಿ ಮೃತಪಟ್ಟರೆ, ಮತ್ತೊಬ್ಬರು ಕಲಬುರಗಿಯಲ್ಲಿ ಕಾರಿನಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಅಲ್ಲದ ರೋಗಿಯ ಅವಸ್ಥೆಯೂ ಅಷ್ಟೇ ಕೆಟ್ಟದಾಗಿದೆ. ಕಲಬುರಗಿಯಲ್ಲಿ ಆರು ವರ್ಷದ ಪ್ರಜ್ವಲ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿದ್ದಾನೆ.

ದಿನದಿಂದ ದಿನಕ್ಕೆ ಕುಸಿಯುತ್ತಿರುವ ಆರೋಗ್ಯ ಮೂಲಸೌಕರ್ಯ

ದಿನದಿಂದ ದಿನಕ್ಕೆ ಕುಸಿಯುತ್ತಿರುವ ಆರೋಗ್ಯ ಮೂಲಸೌಕರ್ಯ

"ನಾವು ಬಳ್ಳಾರಿಯಿಂದ ಶರಣಬಸವೇಶ್ವರ ದೇವಸ್ಥಾನವನ್ನು ನೋಡಲು ಕಲಬುರಗಿಗೆ ಬಂದಿದ್ದೇವು. ವಾಪಸ್ ಹೋಗುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಕಾರು ನಿಲ್ಲಿಸಿದೆವು. ಮಗು ಕಾರಿನ ಬಳಿ ನಿಂತಿತ್ತು. ಇನ್ನೋವಾ ಕಾರು ಅವನಿಗೆ ಡಿಕ್ಕಿ ಹೊಡೆದು ಹೋಗಿದೆ. ಆಗ ಸಮಯ ಮುಂಜಾನೆ 2 ಗಂಟೆ ಆಗಿತ್ತು. ನಾವು ಸನ್‌ರೈಸ್ ಆಸ್ಪತ್ರೆಗೆ ಹೋದೆವು. ವೆಂಟಿಲೇಟರ್ ಇಲ್ಲ ಎಂದು ಅವರು ಹೇಳಿದರು. ನಾವು ಬಸವೇಶ್ವರ ಆಸ್ಪತ್ರೆಗೆ ಹೋದೆವು. ಅಲ್ಲಿಯೂ ವೆಂಟಿಲೇಟರ್ ಇರಲಿಲ್ಲ. ಮತ್ತೊಂದು ಆಂಬ್ಯುಲೆನ್ಸ್ ಮೂಲಕ ನಾವು ವಾತ್ಸಲ್ಯ ಆಸ್ಪತ್ರೆಗೆ ಹೋದೆವು. ಅಲ್ಲಿಯೂ ನಮಗೆ ಅದೇ ಉತ್ತರ ಸಿಕ್ಕಿದೆ" ಎಂದು ಮೃತ 6 ವರ್ಷದ ಪ್ರಜ್ವಲ್ ಸಂಬಂಧಿ ಹೇಳಿದರು.

ಕೋವಿಡ್-19 ಪ್ರಕರಣಗಳ ಒತ್ತಡದಲ್ಲಿ ಕರ್ನಾಟಕದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿವೆ. ಬೆಂಗಳೂರಿನ ಇಎಸ್ಐ ಆಸ್ಪತ್ರೆಯನ್ನು ಪ್ರವೇಶಿಸಿದರೆ, ರೋಗಿಗಳು ಆಸ್ಪತ್ರೆಯ ಮಹಡಿಯಲ್ಲಿ ಚಿಕಿತ್ಸೆ ಪಡೆಯುವುದು ಕಂಡುಬರುತ್ತದೆ.

ಆಮ್ಲಜನಕದ ಕೊರತೆಯಿಂದ ಸಾವು

ಆಮ್ಲಜನಕದ ಕೊರತೆಯಿಂದ ಸಾವು

ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್‌ನಲ್ಲಿ ತನ್ನ ಅನಾರೋಗ್ಯದ ಮಗಳೊಂದಿಗೆ ತಾಯಿಯೊಬ್ಬಳು ಆರು ಗಂಟೆಗಳ ಕಾಲ ಕಾಯುತ್ತಿದ್ದಳು, ನಂತರ ವೈದ್ಯರನ್ನು ಭೇಟಿ ಮಾಡಿದರು.

ಚಿಕ್ಕಮಗಳೂರಿನ ಜಗನ್ನಾಥ್ ಎಂಬ ಕ್ಯಾಬ್ ಡ್ರೈವರ್, ಕೊರೊನಾ ವೈರಸ್ ಮೊದಲ ಅಲೆಯ ನಂತರ ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಬಂದಿದ್ದಾರೆ. ಅವನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತು ಮಗಳ ಶಿಕ್ಷಣಕ್ಕಾಗಿ ಹಣ ಕಳಿಸುತ್ತಿದ್ದ ಜಗನ್ನಾಥ್ ಆಮ್ಲಜನಕದ ಕೊರತೆಯಿಂದ ನಿಧನರಾದರು.

ಆಮ್ಲಜನಕದ ಪೂರೈಕೆಯ ಕೊರತೆ

ಆಮ್ಲಜನಕದ ಪೂರೈಕೆಯ ಕೊರತೆ

ಬೆಂಗಳೂರಿನ ಕೋವಿಡ್ ಪ್ರತಿಕ್ರಿಯೆ ತಂಡದ ಪ್ರಕಾರ, ಪ್ರತಿ ಸ್ವಯಂಸೇವಕರು ಆಸ್ಪತ್ರೆಯ ಹಾಸಿಗೆಗಳಿಗಾಗಿ ದಿನಕ್ಕೆ ಕನಿಷ್ಠ 1,000 ಮನವಿ ಕರೆಗಳನ್ನು ಸ್ವೀಕರಿಸುತ್ತಾರೆ, ಮತ್ತೊಂದು ಕಡೆ 200 ಕರೆಗಳು ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಕೋರುತ್ತಾರೆ. ಬೆಂಗಳೂರು ನಗರದ ನಾಲ್ಕೈದು ಆಸ್ಪತ್ರೆಗಳು ಆಮ್ಲಜನಕದ ಪೂರೈಕೆಯ ಕೊರತೆಯ ಕಾರಣದಿಂದ ಐಸಿಯುನಿಂದ ರೋಗಿಗಳನ್ನು ವಾಪಸ್ ಕಳುಹಿಸಿವೆ.

ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ಪುರಸಭೆ ಚುನಾವಣೆ ಅಭ್ಯರ್ಥಿ ಪರ ಪ್ರಚಾರ ಮಾಡುವ ಮೂಲಕ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

Recommended Video

#Positive Story: ಮೇ ತಿಂಗಳಿನಲ್ಲಿ ಆಕ್ಸಿಜನ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಳ | Oneindia Kannada

English summary
Karnataka’s COVID-19 Woes: COVID-19 patients in Karnataka suffer on roads and pavements as health infrastructure crumbles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X