ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರ ಲಸಿಕೆ ಮೇಳ; ಯಾರಿಗೆ ಸಿಗಲಿದೆ ಲಸಿಕೆ

|
Google Oneindia Kannada News

ಬೆಂಗಳೂರು, ಜೂನ್ 20; ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೂನ್ 21ರಂದು ಕೋವಿಡ್-19 ಲಸಿಕಾ ಮೇಳವನ್ನು ಆಯೋಜನೆ ಮಾಡಿದೆ. ಒಂದೇ ದಿನದಲ್ಲಿ 5 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಸೋಮವಾರ ಕೋವಿಡ್-19 ಲಸಿಕಾ ಮೇಳ ಹಮ್ಮಿಕೊಳ್ಳುವ ಕುರಿತು ಈಗಾಗಲೇ ಸೂಚನೆಗಳನ್ನು ಕಳುಹಿಸಲಾಗಿದೆ. ಸರ್ಕಾರ ಗುರುತಿಸಿರುವ ಗುಂಪಿನವರಿಗೆ ಆದ್ಯತೆ ನೀಡುವ ಮೂಲಕ ಮೇಳ ಯಶಸ್ವಿಗೊಳಿಸಲು ಕರೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ಮನೆಮನೆಗೆ ಕೊರೊನಾ ಲಸಿಕೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ಮನೆಮನೆಗೆ ಕೊರೊನಾ ಲಸಿಕೆ

ಆರೋಗ್ಯ ಇಲಾಖೆ ಜೊತೆಗೆ ಮೇಳವನ್ನು ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯು ಸಹ ಸಹಕಾರ ನೀಡಲಿದ್ದಾರೆ. ಲಸಿಕಾ ಕೇಂದ್ರದಲ್ಲಿ ಫಲಾನುಭಿಗಳನ್ನು ಸಜ್ಜುಗೊಳಿ/ ಜಾಗೃತಿ ಮೂಡಿಸುವ ಸುವ ಕೆಲಸವನ್ನು ಮಾಡಲಿದ್ದಾರೆ.

 ಭಾರತದಲ್ಲಿ 5 ತಿಂಗಳಿನಲ್ಲಿ ಶೇ.5ರಷ್ಟು ಪ್ರಜೆಗಳಿಗಷ್ಟೇ ಕೊರೊನಾವೈರಸ್ ಲಸಿಕೆ! ಭಾರತದಲ್ಲಿ 5 ತಿಂಗಳಿನಲ್ಲಿ ಶೇ.5ರಷ್ಟು ಪ್ರಜೆಗಳಿಗಷ್ಟೇ ಕೊರೊನಾವೈರಸ್ ಲಸಿಕೆ!

Covid 19 Vaccine Drive On June 21 At Karnataka

ಯಾರಿಗೆ ಸಿಗಲಿದೆ ಲಸಿಕೆ?

* 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಆದ್ಯತೆ
* 2ನೇ ಡೋಸ್ ಬಾಕಿ ಇರುವ ಫಲಾನುಭವಿಗಳಿಗೆ ಲಸಿಕಾಕರಣ
* ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ
* 18-44 ವಯೋಮಿತಿ ದುರ್ಬಲ ಗುಂಪಿನ ಫಲಾನುಭವಿ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ
* ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಲಸಿಕಾಕರಣ

ಕರ್ನಾಟಕದಲ್ಲಿ ಈಗಾಗಲೇ 14 ಲಕ್ಷ ಡೋಸ್ ಕೋವಿಶೀಲ್ಡ್ ದಾಸ್ತಾನು ಮಾಡಲಾಗಿದೆ. 18-45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ, 45 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ.

ಕೋವಿಡ್ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ತೀರಾ ಕಡಿಮೆಕೋವಿಡ್ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ತೀರಾ ಕಡಿಮೆ

ಕೋವಿಡ್ ಲಸಿಕೆ ನೀಡುವ ಜಬಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. 18-44 ವರ್ಷ ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

Recommended Video

Modi ಇಂದು ವಿಶ್ವ ಯೋಗದ ದಿನದಂದು ಹೇಳಿದ್ದೇನು | Oneindia Kannada

ಕೇಂದ್ರ ಸರ್ಕಾರವೇ ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಪೂರೈಕೆ ಮಾಡಲಿದೆ. ಖಾಸಗಿ ಆಸ್ಪತ್ರೆಯಗಳು ಶೇ 25ರಷ್ಟು ಲಸಿಕೆಯನ್ನು ಕಂಪನಿಗಳಿಂದ ಖರೀದಿ ಮಾಡಲು ಅವಕಾಶ ನೀಡಲಾಗಿದ್ದು, ಲಸಿಕೆ ನೀಡಲು ದರವನ್ನು ಸಹ ನಿಗದಿ ಮಾಡಲಾಗಿದೆ.

English summary
Karnataka health department organized Covid vaccine drive on June 21, 2021. Around 5 lakh people will be vaccinated on the drive day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X