ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ IISc ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯಲ್ಲಿ ಹೊಸ ಭರವಸೆ

|
Google Oneindia Kannada News

ಬೆಂಗಳೂರು, ಮೇ 14: ಕೊರೊನಾವೈರಸ್ ಲಸಿಕೆ ಕೊರತೆ ನಡುವೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿರುವ ಕೊವಿಡ್-19 ಲಸಿಕೆಯು ಹೊಸ ಭರವಸೆಯನ್ನು ಮೂಡಿಸಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

Recommended Video

ದೇಶದ ಜನರಿಗೆ ಸಿಹಿ ಸುದ್ದಿ ಕೊಟ್ಟ ಬೆಂಗಳೂರು | Oneindia Kannada

ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ) ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಜೊತೆ ಚರ್ಚಿಸಿದ ಬಳಿಕ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಂಸ್ಥೆಯ ಬೆಂಬಲವನ್ನು ಕೋರಿರುವುದಾಗಿ ಹೇಳಿದರು.

ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್

"ಐಐಎಸ್ಸಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಲಸಿಕೆಯು ಪ್ರಸ್ತುತ ಬಳಕೆಯಲ್ಲಿರುವ ಲಸಿಕೆಗಳಿಗಿಂತ ಪರಿಣಾಮಕಾರಿಯಂತೆ ಕಾಣುತ್ತಿದೆ. ಅಲ್ಲದೇ ಸಾಮಾನ್ಯವಾಗಿ 30 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೆ ಸಂಗ್ರಹಿಸಬಹುದು" ಎಂದು ತಿಳಿಸಿದ್ದಾರೆ. ಇದರ ಜೊತೆ ರಾಜ್ಯ ಸರ್ಕಾರವು ತಾಂತ್ರಿಕ ಪರಿಹಾರಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರೀಮಿಯರ್ ಸೈನ್ಸ್ ಇನ್ಸ್ ಟಿಟ್ಯೂಟ್ ಸಹಾಯಕವಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

Covid-19 Vaccine Being Developed By IISc Better Than Others: Health Minister Dr K Sudhakar

ಐಐಎಸ್ ಸಿ ಕೊವಿಡ್-19 ಲಸಿಕೆ ಬಗ್ಗೆ ವಿಶ್ವಾಸ:

ದೇಶದಲ್ಲಿ ವಿತರಣೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಗಳಿಗೆ ಹೋಲಿಸಿದ್ದಲ್ಲಿ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಪರಿಣಾಮಕಾರಿ ಹಾಗೂ ತಟಸ್ಥ ಪ್ರಭಾವವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಐಐಎಸ್ ಸಿ ಅಭಿವೃದ್ಧಿಪಡಿಸುತ್ತಿರುವ ಕೊವಿಡ್-19 ಲಸಿಕೆ ಮೇಲೆ ಹೆಚ್ಚಿನ ವಿಶ್ವಾಸವಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ತಿಳಿಸಿದ್ದಾರೆ.

ವೈದ್ಯಕೀಯ ಪ್ರಯೋಗವನ್ನು ಆರಂಭಿಸದ ಲಸಿಕೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಈ ಲಸಿಕೆಯು ಮಹತ್ವದ ಹಾಗೂ ಪರಿಣಾಮಕಾರಿ ಅಸ್ತ್ರವಾಗಿ ಬಳಕೆಯಾಗಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಐಐಎಸ್ ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಲಸಿಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ)ಯಿಂದ ಅನುಮೋದನೆ ನೀಡಲು ಸಚಿವರು ಸಹಕಾರ ನೀಡಬೇಕು ಎಂದು ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಮನವಿ ಮಾಡಿಕೊಂಡಿದ್ದಾರೆ.

English summary
Covid-19 Vaccine Being Developed By IISc Better Than Others: Health Minister Dr K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X