ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಚಿಕಿತ್ಸೆ; ಆಸ್ಪತ್ರೆಗಳ ಜವಾಬ್ದಾರಿ ಬಗ್ಗೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜುಲೈ 29 : ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಬೆಂಗಳೂರು ನಗರದಲ್ಲಿಯೇ 48,821 ಸೋಂಕಿತರು ಇದ್ದಾರೆ.

Recommended Video

Rafael fighter jet lands in India | Oneindia Kannada

ಕೋವಿಡ್ -19 ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳ ಜವಾಬ್ದಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳು ಹೇಗೆ ಚಿಕಿತ್ಸೆ ನೀಡಬೇಕು?, ದರ ಎಷ್ಟಿರಬೇಕು? ಎಂದು ಸರ್ಕಾರ ಮಾರ್ಗಸೂಚಿಗಳನ್ನು ನೀಡಿದೆ.

ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ; ಕೆ. ಸುಧಾಕರ್ ಟ್ವೀಟ್ ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ; ಕೆ. ಸುಧಾಕರ್ ಟ್ವೀಟ್

ಸರ್ಕಾರ ನಿಗದಿಮಾಡಿರುವ ದರಕ್ಕಿಂತ ಹೆಚ್ಚಿನ ದರಗಳನ್ನು ಆಸ್ಪತ್ರೆಗಳು ಪಡೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಹೆಚ್ಚಿನ ದರಗಳನ್ನು ಪಡೆದರೆ ಜನರು 1800 425 8330 ಸಂಖ್ಯೆಗೆ ಕರೆ ಮಾಡಿ ದೂರು ಕೊಡಬಹುದು ಎಂದು ಹೇಳಿದೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ಖಾಸಗಿ ಆಸ್ಪತ್ರೆಗಳು ಕೋವಿಡ್ -19 ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಮುಂಗಡವಾಗಿ ಹಣ ಪಾವತಿ ಮಾಡುವಂತೆ ಕೇಳುವಂತೆಯೂ ಇಲ್ಲ.

ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು

ನಗದು ರಹಿತ ಚಿಕಿತ್ಸೆ

ನಗದು ರಹಿತ ಚಿಕಿತ್ಸೆ

ಬೆಂಗಳೂರು ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರೆಫರಲ್ ಆಗುವ ಕೋವಿಡ್ -19 ರೋಗಿಗಳಿಗೆ 'ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ' ಯೋಜನೆಯಡಿಯಲ್ಲಿ ನಗದು ರಹಿತ ಚಿಕಿತ್ಸೆ ಒದಗಿಸಲಾಗುತ್ತದೆ.

ಖಾಸಗಿ ಆಸ್ಪತ್ರೆಗಳು

ಖಾಸಗಿ ಆಸ್ಪತ್ರೆಗಳು

ಖಾಸಗಿ ಆಸ್ಪತ್ರೆಗಳು ಕೋವಿಡ್ - 19 ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ ಹಾಗೂ ಚಿಕಿತ್ಸೆ ವಿಳಂಬ ಮಾಡುವಂತಿಲ್ಲ. ಮುಂಗಡ ಹಣ ಪಾವತಿ ಮಾಡುವಂತೆ ಕೇಳುವಂತಿಲ್ಲ.

ಚಿಕಿತ್ಸೆಯ ದರಗಳ ಪಟ್ಟಿ

ಚಿಕಿತ್ಸೆಯ ದರಗಳ ಪಟ್ಟಿ

ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಜಿಲ್ಲಾಧಿಕಾರಿಗಳ ರೆಫರಲ್ ಇಲ್ಲದೇ ಖಾಸಗಿ ಆಸ್ಪತ್ರೆ ಕೋಟಾದಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸುವ ರೋಗಿಗಳು ಸರ್ಕಾರವು ನಿಗದಿಪಡಿಸಿರುವ ದರಗಳ ಮಿತಿಯಲ್ಲಿಯೇ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕಾಗುತ್ತದೆ.

ಜನರಲ್ ವಾರ್ಡ್ 10 ಸಾವಿರ ರೂ., ಐಸೊಲೇಷನ್ ಐಸಿಯು ವೆಂಟಿಲೇಟರ್ ರಹಿತ ರೂ. 15,000. ಹೆಚ್. ಡಿ. ಯು 12,000 ರೂ.,ಐಸೊಲೇಷನ್ ಐಸಿಯು ವೆಂಟಿಲೇಟರ್ ಸಹಿತ ರೂ. 25,000 ರೂ.ಗಳು.

ಹೆಚ್ಚು ಹಣ ಕೇಳಿದರೆ ದೂರು ಕೊಡಿ

ಹೆಚ್ಚು ಹಣ ಕೇಳಿದರೆ ದೂರು ಕೊಡಿ

ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ದರವನ್ನು ಆಸ್ಪತ್ರೆಗಳು ಕೇಳಿದರೆ ಜನರು ದೂರು ನೀಡಬಹುದು. ದೂರು ನೀಡಲು ಸಂಖ್ಯೆ 1800 425 8330. [email protected]

English summary
COVID - 19 cases rising in Karnataka. Here are the responsibilities of hospital in the time of COVID treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X