ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮೃತಪಟ್ಟ 28 ವೈದ್ಯರ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ

|
Google Oneindia Kannada News

ಬೆಂಗಳೂರು, ಜೂನ್ 25: ಕೊರೊನಾ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ 28 ವೈದ್ಯರು ಮೃತಪಟ್ಟಿದ್ದು, ಸರ್ಕಾರದಿಂದ ಇನ್ನೂ ಯಾವುದೇ ಪರಿಹಾರ ಅವರ ಕುಟುಂಬಳಿಗೆ ಲಭ್ಯವಾಗಿಲ್ಲ ಎಂಬುದು ವಿಷಾಧನೀಯ.

ಮೃತ ವೈದ್ಯರು ಕನಿಷ್ಠ ಒಂದು ಕೊರೊನಾ ಲಸಿಕೆ ಪಡೆದಿದ್ದರು, ಹಾಗೆಯೇ ಇನ್ನೂ ಕೆಲವರು ಎರಡನೇ ಡೋಸ್ ಲಸಿಕೆಯನ್ನೂ ಪಡೆದಿದ್ದರು. ಮೃತ ವೈದ್ಯರ ಪೈಕಿ 4 ಮಂದಿ ಬೆಂಗಳೂರಿನವರಾಗಿದ್ದಾರೆ.

ಡಾ. ಮನು ವಿ, ಚಿಕ್ಕಬಳ್ಳಾಪುರದ ಚಿಂತಾಮಣಿಯವರಾಗಿದ್ದಾರೆ, ಅವರು ಜೂನ್ 16 ರಂದು ಮೃತಪಟ್ಟಿದ್ದಾರೆ. ಅವರು ಬುರುದುಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Covid-19 Second Wave: 28 Doctors Died In Karnataka: But No Relief From Government Yet

ಡಾ. ಮೊಹಮ್ಮದ್ ಶಕೀಲ್, ಬಸವೇಶ್ವರ ಮೆಡಿಕಲ್ ಕಾಲೇಜು, ಆಸ್ಪತ್ರೆಯಲ್ಲಿ ಅಸೋಸಿಯೇಟ್ ಪ್ರೆಫೆಸರ್ ಆಗಿದ್ದರು. ಅವರು ಎರಡೂ ಲಸಿಕೆಯನ್ನು ಪಡೆದಿದ್ದರು. ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಡಾ. ಜಿಎನ್ ಗಣೇಶ್ ಕುಮಾರ್ ಚಾಮರಾಜನಗರದ ಕೊಳ್ಳೇಗಾಲದಲ್ಲಿ ವೈದ್ಯಾಧಿಕಾರಿಯಾಗಿದ್ದರು. ಏಪ್ರಿಲ್ 27 ರಂದು ಮೃತಪಟ್ಟಿದ್ದಾರೆ. ಅವರು ಕೂಡ ಎರಡೂ ಲಸಿಕೆಯನ್ನು ಪಡೆದಿದ್ದರು.

ಡಾ. ಜೆಎ ಜೈಲಾಲ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು, ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಡಾ. ಓಂ ಪ್ರಕಾಶ್ ಪಾಟೀಲ್ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿದ್ದರು.

ಡಾ. ಕೆವಿ ತ್ರಿಲೋಕ್ ಚಂದ್ರ ಅವರು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರಾಗಿದ್ದರು. ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಸ್ಥಿರವಾಗಿದೆ. ಕಳೆದ 24 ಗಂಟೆಗಳಲ್ಲಿ 51,667 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ದೇಶದಲ್ಲಿ ಒಂದೇ ದಿನ 68,885 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಹಾಮಾರಿಗೆ 1,321 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಒಟ್ಟು 3,01,34,445 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,91,28,267 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,93,310 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 6,12,868 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

Recommended Video

ವಿದ್ಯಾವಂತರು ರಾಜಕೀಯಕ್ಕೆ ಬರಬೇಕು ಅನ್ನೋದು ಇದೆ ಕಾರಣಕ್ಕೆ | Swathi Thippeswamy | Oneindia Kannada

English summary
A staggering 28 doctors across Karnataka succumbed to the viirus during the second wave of Covid-19, but none of their families has received insurance relief earmarked by the government for healthcare workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X