• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿಗೆ ಭಾರತೀಯ ಮನೆ ವೈದ್ಯ ಪದ್ಧತಿಯಲ್ಲಿ ಮೆಡಿಸಿನ್ ಅಡಗಿದೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಕೊರೊನಾ ಎರಡನೇ ಅಲೆ ಇಡೀ ದೇಶವನ್ನೇ ಮೂರಾಬಟ್ಟೆ ಮಾಡಿದೆ. ಸೂಕ್ತ ಚಿಕಿತ್ಸೆ ಇಲ್ಲದೇ ಬಡವರ ಜೀವ ಬೀದಿಯಲ್ಲೇ ನಿಲ್ಲುತ್ತಿದೆ. ಕೇವಲ ಹಲೋಪತಿ ಮೆಡಿಸಿನ್ ನೆಚ್ಚಿಕೊಂಡು ಕೂತಿರುವ ಸರ್ಕಾರ, ಈಗಿರುವ ವೈದ್ಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸತ್ಯಶ್ರೀ ಬಾಬಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮನೆ ವೈದ್ಯ ಪದ್ಧತಿಯ ತನ್ನ ಮೆಡಿಸನ್ ಉಚಿತವಾಗಿ ಜನರಿಗೆ ಹಂಚಲು ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಸತ್ಯಶ್ರೀ ಬಾಬಾ ಒನ್ ಇಂಡಿಯಾ ಕನ್ನಡಕ್ಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕೊರೊನಾ ಹಾಗೂ ವೈದ್ಯಕೀಯ ಅವ್ಯವಸ್ಥೆಯ ಮೂಲ ಸಮಸ್ಯೆ ಬಗ್ಗೆ ಹೇಳಿದ ಮಾತುಗಳು ಹೀಗಿವೆ.

ಭಾರತೀಯ ಪರಂಪರೆಯಲ್ಲಿ ಕೊರೊನಾಗೆ ಮೆಡಿಸಿನ್ ಇದೆ

ಭಾರತೀಯ ಪರಂಪರೆಯಲ್ಲಿ ಕೊರೊನಾಗೆ ಮೆಡಿಸಿನ್ ಇದೆ

ಭಾರತೀಯ ವೈದ್ಯ ಪರಂಪರೆಯಲ್ಲಿ ಕೊರೊನಾಗೆ ಮೆಡಿಸಿನ್ ಇದೆ. ಬ್ರಿಟೀಷರು ಭಾರತವನ್ನು ಆಳ್ವಿಕೆ ಮಾಡುವ ಮುನ್ನ ಕಾಲಘಟ್ಟಕ್ಕೆ ಹೋಗಿ ಹೇಳುವುದಾದರೆ, ತಾಯಿಯೇ ವೈದ್ಯೆ ಆಗಿದ್ದರು. ಅಜ್ಜಿಯೇ ವೈದ್ಯರಾಗಿದ್ದರು. ಕೈಕಾಲು ಮುರಿತ ದಂತಹ ಘಟನೆಗಳಿಗೆ ಜನರು ಆಸ್ಪತ್ರೆಗೆ ಹೋಗುತ್ತಿದ್ದರು. ಹಿಂದೂ- ಮುಸ್ಲಿಂ ಮನೆಗಳಲ್ಲಿ ಮನೆ ವೈದ್ಯ ಪದ್ಧತಿ ಚಾಲ್ತಿಯಲ್ಲಿತ್ತು. ಆಗ ಇದಕ್ಕಿಂತೂ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಬಂದಿದ್ದವು. ಆಗ ಈ ಯಾವ ಆಕ್ಸಿಜನ್ ಇತ್ತು. ಯಾವ ರೆಮ್ ಡಿಸಿವಿರ್ ತರಹದ ಚುಚ್ಚು ಮದ್ದುಗಳು ಇದ್ದವು ? ಅವೆಲ್ಲವನ್ನೂ ಭಾರತೀಯರು ಮೆಟ್ಟಿ ನಿಂತಿಲ್ಲವೇ ? ಭಾರತೀಯ ಪರಂಪರೆಯ ವೈದ್ಯ ಪದ್ಧತಿಯೇ ಜೀವ ಉಳಿಸಿತ್ತು. ಆದರೆ ಯಾವಾಗ ಬ್ರಿಟೀಷರಿಂದ ಆಳ್ವಿಕೆಗೆ ಒಳಗಾಗಿ ಅವರ ಕಾನೂನುಗಳ ಪ್ರಭಾವಕ್ಕೆ ಒಳಗಾಗಿ ಸಂವಿಧಾನ ರಚಿಸಿದರೋ ಭಾರತೀಯ ವೈದ್ಯ ಪದ್ಧತಿಯನ್ನು ಪರಿಗಣಿಸಲೇ ಇಲ್ಲ. ಸ್ವಯಂ ವೈದ್ಯ ಪದ್ಧತಿ ಮೇಲೆ ನಿರ್ಬಂಧ ವಿಧಿಸುವ ಮೂಲಕ ನಮ್ಮ ಮನೆ ವೈದ್ಯ ಪದ್ಧತಿ ನಿರ್ನಾಮಕ್ಕೆ ನಾಂದಿ ಹಾಡಿದರು ಎಂದು ಸತ್ಯಶ್ರೀ ಬಾಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಂವಿಧಾನಿಕ ಬಿಕ್ಕಟ್ಟು

ಸಾಂವಿಧಾನಿಕ ಬಿಕ್ಕಟ್ಟು

ಇವಾಗ ಆಕ್ಸಿಜನ್ ಇಲ್ಲದೇ ಸತ್ತವರು, ರೆಮ್ ಡಿಸಿವಿರ್ ತೆಗೆದುಕೊಂಡು ಸತ್ತವರು ಇಲ್ಲವೇ ? ಕೊರೊನಾಗೆ ಸರ್ಕಾರ ಏನು ಹೇಳುತ್ತೋ ಅದನ್ನೇ ನಾವು ಮಾಡಬೇಕು. ಇದು ಬಿಜೆಪಿ, ಕಾಂಗ್ರೆಸ್ ಪಕ್ಷದ ಸಮಸ್ಯೆಯಲ್ಲ. ಸಾಂವಿಧಾನಿಕ ಬಿಕ್ಕಟ್ಟಿನ ವಿಷಯ. ಕುಲಗೆಟ್ಟ ಪಾಲಿಸಿಗಳಿಂದ ಇವತ್ತು ಜನರ ಮಾರಣ ಹೋಮ ಆಗುತ್ತಿದೆ. ಪರ್ಯಾಯ ಮೆಡಿಸಿನ್ ಬಗ್ಗೆ ಜನರ ಆಯ್ಕೆಗೆ ಅವಕಾಶ ಇಲ್ಲದಂತೆ ಕಾನೂನು ರೂಪಿಸಿ ದೇಶೀ ಪರಂಪರೆ ವೈದ್ಯ ಪದ್ಧತಿಯನ್ನೇ ಸಾಯಿಸಿದ್ದಾರೆ. ಇವಾಗೇನಿದ್ದರೂ ದುಡ್ಡು ಇರುವನು ಮೆಡಿಸಿನ್ ತಯಾರಿಸಿ ಕೊಡಬೇಕು. ಅದನ್ನು ಭ್ರಷ್ಟ ವ್ಯವಸ್ಥೆಯ ಮೂಲಕ ಅಪ್ರೂವಲ್ ಮಾಡಿಸಿಕೊಂಡು ಸಮಾಜದ ಮೇರೆ ಪ್ರಯೋಗಿಸಬೇಕು. ಈ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಇದು ಅಪಾಯಕಾರಿ. ಅಡ್ಡ ಪರಿಣಾಮ ಇಲ್ಲದ ಭಾರತೀಯ ಪರಂಪರೆ ಔಷಧಗಳ ಮೊರೆ ಹೋದರೆ ಭಾರತೀಯರನ್ನು ಮೆಡಿಕಲ್ ಮಾಫಿಯಾಗಳು ಬೆತ್ತಲೆ ಮಾಡುತ್ತವೆ. ಬಾಬಾ ರಾಮ್ ದೇವ್ ಕೊರೊನಿಲ್ ಕೂಡ ಭ್ರಷ್ಟ ವ್ಯವಸ್ಥೆಗೆ ಹಣ ಕೊಟ್ಟು ಅನುಮತಿ ಪಡೆದ ಔಷಧ. ನನಗೂ ಭ್ರಷ್ಟ ವ್ಯವಸ್ಥೆಯ ಅನುಭವ ಆಗಿದೆ ಎಂದು ಬಾಬಾ ಅಸಮಾಧಾನ ತೋಡಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗಕ್ಕೆ ಯಾವ ಆಸ್ಪತ್ರೆ ಇದೆ ? ನಮ್ಮ ಸಮಾಜ, ಜನ ಸಾಮಾನ್ಯರ ಸಾಮಾನ್ಯ ಜೀವನಕ್ಕೆ ಬೇಕಾಗುವಷ್ಟು ಆಸ್ಪತ್ರೆಗಳನ್ನು ನಿರ್ಮಿಸಿದೆ. ಸಾಂಕ್ರಾಮಿಕ ರೋಗ ಎದುರಿಸಲು ಕಟ್ಟಿಲ್ಲ. ಈಗ ಕೊರೊನಾ ಸಮಸ್ಯೆ ಭೀಕರವಾಗಿದೆ. ಇಂಗ್ಲೀಷ್ ಮೆಡಿಸನ್ ವೈದ್ಯ ಮಾರುಕಟ್ಟೆಗಳನ್ನು ಆಳುತ್ತಿವೆ. ಭಾರತೀಯ ಮನೆ ವೈದ್ಯ ಪದ್ಧತಿಯ ಔಷಧಗಳಿಂದ ಅಡ್ಡ ಪರಿಣಾಮಗಳಿಲ್ಲ. ಅವನ್ನು ಬಳಕೆಗೆ ಸರ್ಕಾರ ಅವಕಾಶ ನೀಡಲ್ಲ. ಒಂದು ವೇಳೆ ಕೊಟ್ಟರೆ, ನೀವು ಬಹುದೊಡ್ಡ ಅಪರಾಧ ವೆಸಗಿದ್ದೀರ ಎಂದು ಜೈಲಿಗೆ ಹಾಕುತ್ತಾರೆ. ಅಪರಾಧ ಅಂದರೆ ಏನು ? ನೂರು ಜನರಿಗೆ ಔಷಧ ಕೊಟ್ಟು 90 ಮಂದಿಯ ಜೀವನ ಕಾಪಾಡುವುದು ಅಪರಾಧವೇ ? ಆ ವಿಚಾರಕ್ಕೆ ಬಂದರೆ, ಈಗ ಕೊಡುತ್ತಿರುವ ವ್ಯಾಕ್ಸಿನ್ ಬಳಕೆಗೆ ಇರುವ ನಿಯಮಗಳ ಪ್ರಕಾರ ಒಂದು ವರ್ಷಕ್ಕೆ ವ್ಯಾಕ್ಸಿನ್ ಕಂಡು ಹಿಡಿದು ಕ್ಲಿನಿಕಲ್ ಟ್ರಯಲ್ ಮಾಡಿ ವೈಜ್ಞಾನಿಕ ಅನ್ವೇಷಣೆ ಬಳಿಕ ಜನರಿಗೆ ಕೊಡಬೇಕು. ಇದಕ್ಕೆ ಕನಿಷ್ಠ ಮೂರ್ನಾಲ್ಕು ವರ್ಷಗಳೇ ಬೇಕು. ಕೊರೊನಾ ಸೋಂಕಿಗೆ ಹೇಗೆ ಒಂದು ವರ್ಷಕ್ಕೆ ಕಂಡ ಹಿಡಿದು ಜನರ ಬಳಕೆಗೆ ಕೊಟ್ಟರು ? ಅವರೇ ರೂಪಿಸಿರುವ ನಿಯಮಗಳನ್ನು ಅವರೇ ಉಲ್ಲಂಘಿಸಿ ಜನರ ಮೇಲೆ ಪ್ರಯೋಗ ಮಾಡಿ ದುಡ್ಡು ಮಾಡುತ್ತಿರುವ ವ್ಯವಸ್ಥೆ ಅನ್ನದೇ ಬೇರೆ ಏನಂತ ಕರೀಬೇಕು ? ಎಂದು ಸತ್ಯಶ್ರೀ ಬಾಬಾ ಕಿಡಿ ಕಾರಿದ್ದಾರೆ.

ನನ್ನ ಔಷಧದ ಕಥೆ ಹೇಳ್ತೀನಿ ಕೇಳಿ

ನನ್ನ ಔಷಧದ ಕಥೆ ಹೇಳ್ತೀನಿ ಕೇಳಿ

ಸತ್ಯಶ್ರೀ ಮಾತೆ ಮನೆ ವೈದ್ಯ ಪದ್ಧತಿಯಲ್ಲಿ ಔಷಧ ಕಂಡು ಹಿಡಿದರು. ಅದರ ಹೆಸರು ಕರುಣಶ್ರೀ. ಪ್ರಕೃತಿ ಮಾತೆಯ ಮಡಿಲಲ್ಲಿನ ಔಷಧ ಆಗಿದ್ದರಿಂದ ಅದಕ್ಕೆ ಕರುಣಶ್ರೀ ಎಂಬ ಹೆಸರನ್ನು ಇಟ್ಟಿದ್ದೇನೆ. ನಾನು ಕೊರೊನಾಗೆ ಔಷಧ ಎಂದು ಹೇಳಲಿಕ್ಕೆ ಈ ವ್ಯವಸ್ಥೆಯಲ್ಲಿ ಭಯ ಆಗುತ್ತದೆ. ಕೊರೊನಾ ಲಕ್ಷಣಗಳಿಗೆ ಭಾರತೀಯ ಮನೆ ವೈದ್ಯ ಪದ್ಧತಿಯಲ್ಲಿ ಔಷಧ ಕಂಡು ಹಿಡಿದೆವು. ನಮ್ಮ ಸಂಪರ್ಕದಲ್ಲಿದ್ದು ಮನೆ ಸಮೀಪ ಬಂದವರಿಗೆ ಕೊಟ್ಟೆವು. ಮೂರ್ನಾಲ್ಕು ದಿನದಲ್ಲಿ ಉತ್ತಮ ಫಲಿತಾಂಶ ಬಂತು. ಅದರಿಂದ ಯಾವುದೇ ಅಡ್ಡ ಪರಿಣಾಮಗಳೇ ಇಲ್ಲ. ಅದೊಂದು ರೀತಿಯ ಆಹಾರ ಪದ್ಧತಿಯಂತದ್ದು. ಪ್ಲಸಿಬೋ ತೊಂದರೆ ಕೂಡ ಅಲ್ಲ. ಸರಿ ಸುಮಾರು 300 ಮಂದಿಗೆ ಕೊಟ್ಟೆವು. ಶೇ. 90 ರಷ್ಟು ಮಂದಿ ಗುಣಮುಖರಾದರು. ಇದನ್ನು ಏನಾದರೂ ಮಾಡಿ ನಾಡಿನ ಜನತೆಗೆ ಉಚಿತವಾಗಿ ಕೊಡುವ ಹಂಬಲದಿಂದ ಮತ್ತಷ್ಟು ಅಧ್ಯಯನ ಮಾಡಿದೆ. ಐಸರ್ ಪೂನಾ ಎಂಬ ವ್ಯಕ್ತಿ ಜತೆ ಸೇರಿ ಒಂದಷ್ಟು ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿದೆವು. ಇದನ್ನು ವಾಣಿಜ್ಯ ಉದ್ದೇಶದಿಂದ ಮಾರುಕಟ್ಟೆಗೆ ಬಿಡಬೇಕೆಂಬ ಅವರ ದುರುದ್ದೇಶ ಗೊತ್ತಾದ ಕೂಡಲೇ ಹೊರಗೆ ಬಂದೆ. ಆನಂತರ ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಕೆಲವು ಕೊರೋನಾ ತಜ್ಞ ವೈದ್ಯರ ಬಳಿ ಹೋಗಿ ಚರ್ಚಿಸಲು ಮಂದಾದೆ. ನಮ್ಮ ಔಷಧದ ವಾಸ್ತವ ಅರ್ಥ ಮಾಡಿಕೊಳ್ಳಲೇ ಇಲ್ಲ. ಮತ್ತೊಂದು ಮಾರ್ಗ ಹಿಡಿದು ಪ್ರಯತ್ನಿಸಿದೆ.

ನನ್ನ ಉದ್ದೇಶ ಕೂಡ ಸ್ಪಷ್ಟ ಪಡಿಸಿದೆ. ನಾನು ಈ ರಾಜ್ಯದ ಜನತೆಗೆ ಉಚಿತವಾಗಿ ಔಷಧ ಹಂಚಬೇಕೆಂದಿದ್ದೇನೆ. ಸಾಧ್ಯವಾದರೆ ಜನರೇ ಮನೆಯಲ್ಲಿ ತಯಾರಿಸಿಕೊಂಡು ಸೇವಿಸುವ ಔಷಧ ಪದ್ಧತಿ. ಮಮ್ಮ ಔಷಧ ಜನ ಬಳಕೆಗೆ ಅನುಮತಿ ಕೊಡಿಸಲು 50 ಲಕ್ಷಕ್ಕೆ ಬೇಡಿಕೆ ಇಟ್ಟರು. ಈ ವ್ಯವಸ್ಥೆ ನೋಡಿ ನೋವಿನಿಂದ ಹೊರಗೆ ಬಂದಿದ್ದೇನೆ. ವಾಸ್ತವ ಕಾರಣ ಹುಡುಕಿದಾಗ ಸಮಸ್ಯೆ ನಮ್ಮನ್ನು ಆಳುತ್ತಿರುವ ನಾಯಕರದ್ದು ಅಲ್ಲ. ಭಾರತೀಯ ಪರಂಪರೆ ವೈದ್ಯ ಪದ್ಧತಿ ಮೇಲೆ ನಿರ್ಬಂಧ ವಿಧಿಸಿರುವ ಕಾನೂನುಗಳದ್ದು. ಬ್ರಿಟೀಷರು ಲಾಭಕ್ಕಾಗಿ ಮಾಡಿದ್ದನ್ನು ನಮ್ಮವರು ಎರವಲಾಗಿ ಪಡೆದ ಬಗ್ಗೆ ನನಗೆ ಬೇಸರವಾಗುತ್ತಿದೆ ಎಂದು ಸತ್ಯಶ್ರೀ ಬಾಬಾ ತನ್ನ ಮನೆ ವೈದ್ಯ ಪದ್ಧತಿ ಔಷಧ ಕುರಿತು ವಿವರಣೆ ನೀಡಿದ್ದಾರೆ.

  #Positive Story: ಮೇ ತಿಂಗಳಿನಲ್ಲಿ ಆಕ್ಸಿಜನ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಳ | Oneindia Kannada
  ಸತ್ಯಶ್ರೀ ಬಾಬಾ ಕೊನೆ ಮಾತು

  ಸತ್ಯಶ್ರೀ ಬಾಬಾ ಕೊನೆ ಮಾತು

  ಕೊನೆಯ ಮಾತು ಹೇಳುತ್ತಿದ್ದೇನೆ. ನಮ್ಮ ಭಾರತೀಯ ಪರಂಪರೆ ವೈದ್ಯ ಪದ್ಧತಿಗೆ ನಾವು ವಾಪಸು ಆಗಬೇಕು. ಈ ಸರ್ಕಾರಗಳನ್ನು ನಂಬಿಕೊಂಡರೆ ಜನರಿಗೆ ಸಾವೇ ಗತಿ. ಈ ಕುರಿತು ಜನರು ಜಾಗೃತಿಯಾಗಬೇಕು. ಈ ಸರ್ಕಾರಕ್ಕೆ ಓಪನ್ ಚಾಲೆಂಜ್ ಹಾಕುತ್ತೇನೆ. ಈಗಿರುವ ವ್ಯಾಕ್ಸಿನ್ ನಿಂದ ಒಂದು ಸಾವು ಇಲ್ಲದಂತೆ ಕರೊನಾ ನಿಲ್ಲಿಸಿಬಿಡಿ ನೋಡೋಣ. ಆರ್‌ಟಿ- ಪಿಸಿಆರ್ ಪರೀಕ್ಷೆ ಎಂಬುದೇ ಸುಳ್ಳು. ಆ ವಾಸ್ತವಗಳು ಕಾಲಾಂತರದಲ್ಲಿ ಅರ್ಥವಾಗುತ್ತದೆ. ಅಷ್ಟೊತ್ತಿಗೆ ಜನರ ಮಾರಣ ಹೋಮ ಆಗಿ ಹೋಗಿರುತ್ತದೆ. ನಾನು ಈಗಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಭಾರತೀಯ ಪರಂಪರೆ ಮನೆ ವೈದ್ಯ ಪದ್ದತಿಗೆ ಅವಕಾಶ ಕೊಡಿ. ನನ್ನ ಮಾತೆ ಶ್ರೀ ಕಂಡು ಹಿಡಿದಿರುವ ಕರುಣಶ್ರೀ ಔಷಧವನ್ನು ಉಚಿತವಾಗಿ ಕೊಡಲು ಅವಕಾಶ ಕೊಡಿ. ನನಗೆ ಇದರಿಂದ ಐದು ಪೈಸೆ ದುಡ್ಡು ಬೇಡ. ಜನರ ಜೀವನ ರಕ್ಷಣೆ ಮಾಡಿಕೊಳ್ಳಲಿ. ಜನರೇ ತಯಾರಿಸಿಕೊಂಡು ಸೇವಿಸಿಕೊಳ್ಳಲಿ. ಅದರಿಂದ ಆಗುವ ಅನಾಹುತಗಳಿಂದ ಆಗುವ ಉಪಯೋಗಗಳೇ ಜಾಸ್ತಿ ಮುಖ್ಯಮಂತ್ರಿಗಳೇ ...

  English summary
  Indian home medicine system has a drug for corona virus control says Satya Sree baba know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X