ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಕೋವಿಡ್-19 ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯ ಕುರಿತು ಸಾರ್ವಜನಿಕರು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅದಾಗ್ಯೂ, ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆಯಾಗಿದ್ದು, ಪ್ರಸ್ತುತ ಪಾಸಿಟಿವಿಟಿ ದರ ಶೇ.0.90 ರಿಂದ ಶೇ.1.10ರಷ್ಟಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಶೇ.2ರಷ್ಟು ವಿದೇಶಿ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿಯೇ ರಾಂಡಮ್ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜಪಾನ್, ಥೈಲ್ಯಾಂಡ್, ವಿಯೆಟ್ನಾಂ, ನ್ಯೂಜಿಲೆಂಡ್, ರಷ್ಯಾ ಮತ್ತು ಚೀನಾಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ 16ನೇ ಸಭೆಯ ನಂತರ ಕೆಲವು ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಅದರಲ್ಲೂ ಜಪಾನ್ ಮತ್ತು ಥೈಲ್ಯಾಂಡ್ ರಾಷ್ಟ್ರಗಳಿಂದ ಬೆಂಗಳೂರಿಗೆ ನೇರ ವಿಮಾನಗಳ ಸಂಚಾರವಿದೆ. ಹೀಗಾಗಿ ಇಂಥ ವಿಮಾನಗಳಲ್ಲಿ ಪ್ರಯಾಣಿಸುವವರ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ. ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳ ಪಟ್ಟಿ ಇಲ್ಲಿದೆ ಓದಿ.

Covid-19 : Karnataka govt issued guidelines for International travel arrivals from designated countries

ವಿದೇಶಿ ಪ್ರಯಾಣಿಕರಿಗೆ ಕೋವಿಡ್-19 ಮಾರ್ಗಸೂಚಿ:

ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೇಗಿರಲಿದೆ ನಿಯಮ?:

* ಮೇಲೆ ಉಲ್ಲೇಖಿಸಿದ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್

ಬೆಂಗಳೂರಿಗೆ ಹೊಸ ಕೋವಿಡ್ ಮಾರ್ಗಸೂಚಿ ಇಲ್ಲ :ಬಿಬಿಎಂಪಿ ಸ್ಪಷ್ಟನೆಬೆಂಗಳೂರಿಗೆ ಹೊಸ ಕೋವಿಡ್ ಮಾರ್ಗಸೂಚಿ ಇಲ್ಲ :ಬಿಬಿಎಂಪಿ ಸ್ಪಷ್ಟನೆ

* ಕೋವಿಡ್-19 ಸೋಂಕಿನ ಲಕ್ಷಣಗಳಿರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿರುವ ಪ್ರಯೋಗಾಲಯದಲ್ಲೇ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು. ಸೋಂಕು ಖಾತ್ರಿಯಾದರೆ ಜೀನೋಮ್ ಸೀಕ್ವೆನ್ಸಿಂಗ್ ಮಾದರಿ ಪರೀಕ್ಷೆಗೆ ಕಳುಹಿಸುವುದು ಕಡ್ಡಾಯ.

* ಕೋವಿಡ್-19 ದೃಢಪಟ್ಟ ಪ್ರಕರಣಗಳನ್ನು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದ ಪ್ರಕಾರ ನಿರ್ವಹಣೆ ಮಾಡುವುದು ಹಾಗೂ ಚಿಕಿತ್ಸೆ ನೀಡುವುದು

* ಸದರಿ ಚಟುವಟಿಕೆಗೆ ಸಂಬಂಧಿಸಿದಂತೆ ದೈನಂದಿನ ವರದಿಯನ್ನು ನಮೂನೆ-1ರಂತೆ ಯೋಜನಾ ನಿರ್ದೇಶಕರು ಐಡಿಎಸ್ ಪಿ ಅವರಿಗೆ ಸಲ್ಲಿಸುವುದು

Covid-19 : Karnataka govt issued guidelines for International travel arrivals from designated countries

ಜಿಲ್ಲಾ ಮಟ್ಟ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೇಗಿರಲಿದೆ ಕ್ರಮಗಳು?:

* ಜಪಾನ್ ಮತ್ತು ಥೈಲ್ಯಾಂಡ್ ನಿಂದ ಆಗಮಿಸಿದ ಪ್ರಯಾಣಿಕರನ್ನು ಸಂಬಂಧಿಸಿದ ಜಿಲ್ಲೆಗಳ ಕಾಲ್ ಸೆಂಟರ್ ಮೂಲಕ 14 ದಿನಗಳ ಮೂಲಕ ಟೆಲಿ ಮಾನಿಟರಿಂಗ್ ಮಾಡುವುದು

* ಅನುಪಾಲನಾ ಅವಧಿಯ ಸಂದರ್ಭದಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಶಿಷ್ಟಾಚಾರದಂತೆ ಆರ್ ಟಿಪಿಸಿಆರ್ ಟೆಸ್ಟಿಂಗ್, ಚಿಕಿತ್ಸೆ ಹಾಗೂ ನಿರ್ವಹಣೆಯನ್ನು ಜಿಲ್ಲಾ ತಂಡವೇ ಕೈಗೊಳ್ಳಬೇಕು

* ಕೋವಿಡ್-19 ಪಾಸಿಟಿವ್ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸುವುದು ಕಡ್ಡಾಯವಾಗಿರುತ್ತದೆ

* ಸದರಿ ಚಟುವಟಿಕೆಗೆ ಸಂಬಂಧಿಸಿದಂತೆ ದೈನಂದಿನ ವರದಿಯನ್ನು ನಮೂನೆ-2ರಂತೆ ಯೋಜನಾ ನಿರ್ದೇಶಕರು ಐಡಿಎಸ್ ಪಿ ಅವರಿಗೆ ಸಲ್ಲಿಸುವುದು

English summary
Covid-19: Karnataka international arrivals guidelines: Random testing of 2% of passengers. Tele-monitoring for travellers who have direct flights from Japan and Thailand to Bengaluru and Mangaluru International Airports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X