ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಉಪಕರಣ ಅಕ್ರಮ ಆರೋಪ: ಯಡಿಯೂರಪ್ಪರನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಪೆನ್ ಡ್ರೈವ್

|
Google Oneindia Kannada News

ಬೆಂಗಳೂರು, ಜುಲೈ 9: ಕೋವಿಡ್ 19 ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಮತ್ತಷ್ಟು ಇಂಬು ನೀಡುವಂತಹ ವಿದ್ಯಮಾನವೊಂದು ನಡೆದಿದೆ.

Recommended Video

Reimagining the Future of Internet-Enabled Mobility Services in Bengaluru by Rajeev Gowda Part - 1

ಖುದ್ದು, ಬಿಜೆಪಿಯ ಹಿರಿಯ ಮುಖಂಡ, ಬೀಳಗಿ ಶಾಸಕ ಮುರುಗೇಶ್ ನಿರಾಣಿ ನೀಡಿರುವ ಹೇಳೀಕೆ, ರಾಜ್ಯದ ಬಿಜೆಪಿ ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಈ ವಿಚಾರ, ಸರಕಾರಕ್ಕೆ ಮುಜುಗರ ತಂದೊಡ್ಡಲಿದೆ ಎನ್ನುವುದನ್ನು ಅರಿತ ನಿರಾಣಿ, ಇದೆಲ್ಲಾ ನಿರಾಧಾರ ಎಂದಿದ್ದಾರೆ.

ಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯ

"ಸರಕಾರದಲ್ಲಿ ಯಾವುದೇ ವಿಪಕ್ಷಗಳ ಹೇಳುತ್ತಿರುವಂತಹ ಹಗರಣ ನಡೆದಿಲ್ಲ. ಸಿದ್ದರಾಮಯ್ಯ ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆ ಒದಗಿಸುತ್ತಿಲ್ಲ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುರುಗೇಶ್ ನಿರಾಣಿ ಹೇಳಿಕೆಯನ್ನು ಮುಂದಿಟ್ಟುಕೊಂಡು, ಮತ್ತೆ ಯಡಿಯೂರಪ್ಪ ಸರಕಾರದ ವಿರುದ್ದ ತಿರುಗಿಬಿದ್ದಿದ್ದಾರೆ. ನಿರಾಣಿ ಹೇಳಿದ ಪೈನ್ ಡ್ರೈವ್, ಮುಂದೆ ಓದಿ..

ರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯ

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಮುರುಗೇಶ್ ನಿರಾಣಿ, "ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಅದಕ್ಕೆ ಸಂಬಂಧ ಪಟ್ಟ ದಾಖಲೆಗಳು ನನ್ನಲ್ಲಿವೆ"ಎಂದು ಹೇಳಿದ್ದರು. ನಿರಾಣಿ, ಸಭೆಯಲ್ಲಿ ನೀಡಿದ ಹೇಳಿಕೆ ಅದ್ಯಾಗೋ ಸೋರಿಕೆಯಾಗಿದೆ.

ಪೆನ್ ಡ್ರೈವ್ ನಿಮಗೆ (ಎಚ್.ಕೆ.ಪಾಟೀಲ್) ಕಳುಹಿಸಿಕೊಡುತ್ತೇನೆ

ಪೆನ್ ಡ್ರೈವ್ ನಿಮಗೆ (ಎಚ್.ಕೆ.ಪಾಟೀಲ್) ಕಳುಹಿಸಿಕೊಡುತ್ತೇನೆ

"ಬಿಜಾಪುರದಿಂದ ಬರುತ್ತಿದ್ದಾಗ ಅಧಿಕಾರಿಯೊಬ್ಬರು ನನ್ನ ಜೊತೆಗಿದ್ದರು. ಅವರು ತಮ್ಮ ಬಳಿ ಪೆನ್ ಡ್ರೈವ್ ಒಂದನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಮಹತ್ವದ ದಾಖಲೆಗಳಿದ್ದವು. ನನಗೆ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಲು ಆಗದೇ ಇರುವುದರಿಂದ, ಪೆನ್ ಡ್ರೈವ್ ನಿಮಗೆ (ಎಚ್.ಕೆ.ಪಾಟೀಲ್) ಕಳುಹಿಸಿಕೊಡುತ್ತೇನೆ"ಎಂದು ಮುರುಗೇಶ್ ನಿರಾಣಿ ಹೇಳಿದ್ದರು.

ಪೆನ್ ಡ್ರೈವ್ ಪಡೆಯಲು ವಿರೋಧ ಪಕ್ಷಗಳ ಪ್ರಯತ್ನ

ಪೆನ್ ಡ್ರೈವ್ ಪಡೆಯಲು ವಿರೋಧ ಪಕ್ಷಗಳ ಪ್ರಯತ್ನ

ಇದರಲ್ಲಿ ಯಾವಯಾವ ವಸ್ತುಗಳ ಮೂಲ ಬೆಲೆ ಎಷ್ಟು, ಬಿಲ್ ಮಾಡಿರುವ ಬೆಲೆ ಎಷ್ಟು ಎನ್ನುವ ಅಂಶವೂ ಪೆನ್ ಡ್ರೈವ್ ನಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಪೆನ್ ಡ್ರೈವ್ ವಿಚಾರ ಗೊತ್ತಾಗುತ್ತಿದ್ದಂತೆಯೇ ಅದನ್ನು ಪಡೆಯಲು ವಿರೋಧ ಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸಿದರೂ ಸಫಲರಾಗಲಿಲ್ಲ.

ಬಿಎಸ್ವೈಗೆ ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಪೆನ್ ಡ್ರೈವ್

ಬಿಎಸ್ವೈಗೆ ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಪೆನ್ ಡ್ರೈವ್

ಲೆಕ್ಕಪತ್ರ ಸಮಿತಿಯಲ್ಲಿ ತಾನು ನೀಡಿದ ಹೇಳಿಕೆಯಿಂದ ಸರಕಾರ ಇಕ್ಕಟ್ಟಿಗೆ ಸಿಲುಕುತ್ತದೆ ಎಂದರಿತ ಮುರುಗೇಶ್ ನಿರಾಣಿ, ಆ ರೀತಿ ನಾನು ಹೇಳಿಲ್ಲ ಎಂದಿದ್ದಾರೆ. ಆದರೆ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಈಶ್ವರ ಖಂಡ್ರೆ ಮುಂತಾದವರು, ನಿರಾಣಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಸರಕಾರಕ್ಕೆ ಭರ್ಜರಿ ಬಿಸಿಮುಟ್ಟಿಸುತ್ತಿದ್ದಾರೆ.

English summary
Illegal Purchase Of Covid 19 Equipments: BJP Leader Murugesh Nirani Statement Embarassed BSY Government,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X