ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಎಫೆಕ್ಟ್: ಆಫೀಸ್ ಗಳಲ್ಲಿ 'AC'ಗೆ ಗುಡ್ ಬೈ.!

|
Google Oneindia Kannada News

ನವದೆಹಲಿ, ಮೇ 26: ಕೋವಿಡ್-19 ಭೀತಿಯಿಂದ ಹಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. 'ವರ್ಕ್ ಫ್ರಮ್ ಹೋಮ್' ಮಾಡಲು ಸಾಧ್ಯವಾಗದವರು ಲಾಕ್ ಡೌನ್ ಸಡಿಲಗೊಂಡ ಮೇಲೆ ಕಛೇರಿಗೆ ತೆರಳಿ ಕಾರ್ಯನಿರ್ವಹಿಸುತ್ತಿದ್ದಾರೆ.

Recommended Video

ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

ಕೊರೊನಾ ವೈರಸ್ ನಿಂದಾಗಿ ಆಫೀಸ್ ಗಳಲ್ಲೀಗ ಭಾರಿ ಬದಲಾವಣೆಯಾಗಿದೆ. ಫುಲ್ ಏರ್ ಕಂಡೀಷನ್ಡ್ ಆಗಿದ್ದ ಹಲವು ಕಛೇರಿಗಳು ಇದೀಗ 'ಎಸಿ'ಗೆ ಗುಡ್ ಬೈ ಹೇಳಿವೆ.

ಸೆಂಟ್ರಲೈಸ್ಡ್ ಎಸಿ ಮೂಲಕ ಕೊರೊನಾ ವೈರಸ್ ಹರಡುವ ಆತಂಕವಿರುವುದರಿಂದ ಆಫೀಸ್ ಗಳಲ್ಲಿ ಎಸಿ ಬಳಕೆ ಮಾಡುತ್ತಿಲ್ಲ. ಮೊದಲೇ ಬೇಸಿಗೆ.. ಹೊರಗಡೆ ಉರಿ ಬಿಸಿಲಿದ್ದರೂ, ಹಲವು ಕಂಪನಿಗಳಲ್ಲಿ ಸೆಂಟ್ರಲೈಸ್ಡ್ ಎಸಿ ಸ್ವಿಚ್ ಆನ್ ಆಗುತ್ತಿಲ್ಲ.

 ಮತ್ತೆ ಕಚೇರಿಯತ್ತ ಹೊರಟವರು ಪಾಲಿಸಲೇಬೇಕಾದ ಕೆಲವು ಅಂಶಗಳಿವು ಮತ್ತೆ ಕಚೇರಿಯತ್ತ ಹೊರಟವರು ಪಾಲಿಸಲೇಬೇಕಾದ ಕೆಲವು ಅಂಶಗಳಿವು

ಎಸಿ ಬದಲು ಆಫೀಸ್ ಗಳಲ್ಲಿ ನೈಸರ್ಗಿಕ ಗಾಳಿ-ಬೆಳಕಿಗಾಗಿ ಕಿಟಕಿ-ಬಾಗಿಲುಗಳನ್ನು ತೆರೆಯಲಾಗುತ್ತಿದೆ. ಜೊತೆಗೆ ಸೆಕೆಯಿಂದ ಪಾರಾಗಲು ಪೆಡೆಸ್ಟಲ್ ಅಥವಾ ಸೀಲಿಂಗ್ ಫ್ಯಾನ್ ಬಳಸಲಾಗುತ್ತಿದೆ.

ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ವೆಚ್ಚ

ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ವೆಚ್ಚ

ಎಸಿ ಕಾರ್ಯನಿರ್ವಹಿಸುತ್ತಿರುವ ಹಲವು ಕಛೇರಿಗಳಲ್ಲಿ, ಸುರಕ್ಷತಾ ದೃಷ್ಟಿಯಿಂದ ಹೊಸ ಮಾರ್ಪಾಡುಗಳನ್ನು ಮಾಡಲು 15-20% ಹೆಚ್ಚುವರಿ ವೆಚ್ಚ ಭರಿಸಲಾಗುತ್ತಿದೆ. ಕೋವಿಡ್-19 ನಿಂದ ಪಾರಾಗಲು ದೊಡ್ಡ ದೊಡ್ಡ ಕಂಪನಿಗಳು ತಮ್ಮ ಕಛೇರಿಗಳಲ್ಲಿ ಹಲವು ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳುಕಚೇರಿಗಳನ್ನು ಖಾಲಿ ಮಾಡುತ್ತಿವೆ ದೊಡ್ಡ ದೊಡ್ಡ ಕಂಪನಿಗಳು

ಎಸಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳು

ಎಸಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳು

ಮಿಂತ್ರಾ, ವರ್ಲ್ ಪೂಲ್, ಎನ್.ಟಿ.ಪಿ.ಸಿ, ಪ್ಯಾನಸಾನಿಕ್ ಲೈಫ್ ಸಲ್ಯೂಷನ್ಸ್, ಆಲ್ಸ್ಟಾಮ್, ವೇಕ್ ಫಿಟ್.ಕೋ, ಇನ್ಸ್ಟಾ ಮೋಜೋ, ಹೋಮ್ ಲೇನ್, ಕ್ವಿಕ್ ರೈಡ್ ಸೇರಿದಂತೆ ಹಲವು ಕಂಪನಿಗಳು ಸದ್ಯ ಎಸಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ.


ಫ್ರೆಶ್ ಮೆನ್ಯೂ ಮತ್ತು ಕ್ಯಾಶ್ ಫ್ರೀ ಕಂಪನಿಗಳಲ್ಲಿ ಕೆಲವೇ ಹೊತ್ತು ಮಾತ್ರ ಎಸಿ ಆನ್ ಆಗಿರಲಿದೆ.


ನೆಸ್ಲೆ, ಮೋತಿಲಾಲ್ ಒಸ್ವಾಲ್ ಫಿನಾನ್ಶಿಯಲ್ ಸರ್ವಿಸಸ್ ಮತ್ತು ಆರ್.ಪಿ.ಜಿ ಗ್ರೂಪ್ ನಲ್ಲಿ ಹೊಸ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆ.

ಪೆಡೆಸ್ಟಲ್ ಫ್ಯಾನ್ ಗಳ ಮೊರೆ ಹೋದ ಕಂಪನಿಗಳು

ಪೆಡೆಸ್ಟಲ್ ಫ್ಯಾನ್ ಗಳ ಮೊರೆ ಹೋದ ಕಂಪನಿಗಳು

ಮಿಂತ್ರಾ ಸೇರಿದಂತೆ ಬೆಂಗಳೂರಿನ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಪೆಡೆಸ್ಟಲ್ ಫ್ಯಾನ್ ಗಳ ಮೊರೆ ಹೋಗಿವೆ.


ಪ್ಯಾನಸಾನಿಕ್ ಲೈಫ್ ಸಲ್ಯೂಷನ್ಸ್ ಕಂಪನಿಯಲ್ಲಿ ವೆಂಟಿಲೇಷನ್ ಫ್ಯಾನ್ಸ್, ಸೀಲಿಂಗ್ ಮತ್ತು ಪೆಡೆಸ್ಟಲ್ ಫ್ಯಾನ್ ಗಳು ಬಳಕೆಯಾಗುತ್ತಿವೆ.

ಉದ್ಯೋಗಿಗಳ ಆರೋಗ್ಯಕ್ಕಾಗಿ

ಉದ್ಯೋಗಿಗಳ ಆರೋಗ್ಯಕ್ಕಾಗಿ

ಆಫೀಸ್ ಗಳಲ್ಲಿ ಎಸಿ ಬಳಕೆ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಮಾರ್ಗಸೂಚಿ ನೀಡಿದೆ. ಮಾರ್ಗಸೂಚಿ ಅನುಸಾರ, 24-30 ಡಿಗ್ರಿ ರೇಂಜ್ ನಲ್ಲಿ ಟೆಂಪರೇಚರ್ ಸೆಟ್ಟಿಂಗ್ ಮಾಡಬಹುದು. ಹ್ಯೂಮಿಡಿಟಿ 40-70% ಇರಬಹುದು.

ಉದ್ಯೋಗಿಗಳು ಆರೋಗ್ಯವಾಗಿರಲು ಹೀಟಿಂಗ್, ವೆಂಟಿಲೇಷನ್ ಮತ್ತು ಏರ್ ಕಂಡೀಷನಿಂಗ್ ಡಕ್ಟ್ ಗಳಲ್ಲಿ ಕ್ಲೀನಿಂಗ್, ಸ್ಯಾನಿಟೈಸೇಷನ್ ಮತ್ತು ಡಿಸ್ ಇನ್ಫೆಕ್ಷನ್ ಪ್ರಕ್ರಿಯೆಗೆ ನೆಸ್ಲೆ ಕಂಪನಿ ಚಾಲನೆ ನೀಡಿದೆ.

ಪ್ರತಿಯೊಬ್ಬ ಉದ್ಯೋಗಿಗೂ ತಾಜಾ ಗಾಳಿ ಸಿಗಬೇಕು ಎಂಬ ನಿಟ್ಟಿನಲ್ಲಿ ಭಾರ್ತಿ ರಿಯಾಲ್ಟಿ ಫ್ರೆಶ್ ಏರ್ ಯೂನಿಟ್ ಗಳನ್ನು ಸ್ಥಾಪಿಸಿದೆ.

English summary
Covid 19 fear: Pedestal and Ceiling fans have replaced AC in Offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X