ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್

|
Google Oneindia Kannada News

ಬೆಂಗಳೂರು, ಜುಲೈ 23: ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆ ಸೇರಿ ಒಟ್ಟು ₹4167 ಕೋಟಿ ರು ಗಳನ್ನು ಮಾರ್ಚ್ ತಿಂಗಳಿನಿಂದ ಇಲ್ಲಿ ತನಕ ಖರ್ಚು ಮಾಡಲಾಗಿದೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾಧ್ಯಮ ಗೋಷ್ಠಿಯಲ್ಲಿ ₹324 ಕೋಟಿ ಎಂದಿದ್ದಾರೆ‌. ಸರ್ಕಾರ ಯಾಕೆ ಸುಳ್ಳು ಹೇಳುತ್ತಿದೆ ? ಕೊವಿಡ್ 19 ಸಂಬಂಧಿಸಿದ ಖರೀದಿಯಲ್ಲಿ ಸರ್ಕಾರ 2000 ಕೋಟಿ ರು ನುಂಗಿ ಹಾಕಿದೆ ಎಂದು ಸಿದ್ದರಾಮಯ್ಯ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

Recommended Video

ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಸುದ್ದಿಗೋಷ್ಠಿ ಬೆನ್ನಲ್ಲೇ ಮೆಡಿಕಲ್ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ #ಉತ್ತರಕೊಡಿಬಿಜೆಪಿ ಎಂದು ಕಾಂಗ್ರೆಸ್ಸಿನ ವಿವಿಧ ಸೆಲ್, ಸಮಿತಿ, ನಾಯಕರು ಟ್ವೀಟ್ ಮಾಡಿ ಪ್ರಶ್ನಿಸತೊಡಗಿದ್ದಾರೆ. ಇದರಿಂದ ಟ್ವಿಟ್ಟರ್ ನಲ್ಲಿ ಟ್ರೆಂಡ್ ಶುರುವಾಗಿದೆ.

2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ?2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ?

ಮೆಡಿಕಲ್ ಸಾಮಾಗ್ರಿ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಏನೇ ಮಾಹಿತಿ ಕೇಳಿದರೂ ನಾವು ಕೊಡುತ್ತೇವೆ ಎಂದು ಸಂಬಂಧಪಟ್ಟ ಸಚಿವರಾದ ಡಾ. ಅಶ್ವಥ್ ನಾರಾಯಣ, ಡಾ. ಸುಧಾಕರ್ ಹಾಗೂ ಬಿ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಈ ಟ್ರೆಂಡಿಂಗ್ ಸಂಬಂಧಿಸಿದಂತೆ ಆಯ್ದ ಟ್ವೀಟ್ಸ್ ಇಲ್ಲಿದೆ...

ರೋಗಿಗಳನ್ನು ಬೀದಿಯಲ್ಲಿ ಬಿಡುವುದು ಆತ್ಮ ನಿರ್ಭರ್

ರೋಗಿಗಳನ್ನು ಬೀದಿಯಲ್ಲಿ ಬಿಡುವುದು ಆತ್ಮ ನಿರ್ಭರ್

ಆತ್ಮ ನಿರ್ಭರ್ ಎಂದರೆ ರೋಗಿಗಳನ್ನು ಬೀದಿಯಲ್ಲಿ ಬಿಡುವುದಲ್ಲ, ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು. ಸೂಕ್ತ ಚಿಕಿತ್ಸೆ ಇಲ್ಲದೇ ಪೌರ ಕಾರ್ಮಿಕರು ತೊಂದರೆಯಲ್ಲಿದ್ದಾರೆ. ಆಶಾ ಕಾರ್ಯಕರ್ತೆಯರ ದುಡಿಮೆ ನದಿಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆ.

ಯಾರಿಗೆ ಬಂತು ಎಲ್ಲಿಗೆ ಬಂತು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್? ವೆಂಟಿಲೇಟರ್ ಖರೀದಿಯಲ್ಲಿ ಹಗರಣ, ಕೊರೊನಾ ಆರೋಗ್ಯ ಸಾಮಾಗ್ರಿ ಖರೀದಿಯಲ್ಲಿ ಹಗರಣದ ನಡುವೆ ಸರ್ಕಾರಕ್ಕೆ ಮುಖ್ಯವಾಗಿರುವುದು ಜನರ ಪ್ರಾಣವೋ ಲೂಟಿಯ ವ್ಯಾಮೋಹವೋ? ಎಂದು ಪ್ರಶ್ನಿಸಲಾಗಿದೆ.

ಕಳ್ಳರ ಕೈಗೆ ಬೀಗ ಕೊಡುವುದೂ ಒಂದೇ ಬಿಜೆಪಿ ಅಧಿಕಾರವೂ ಒಂದೇ

ಕಳ್ಳರ ಕೈಗೆ ಬೀಗ ಕೊಡುವುದೂ ಒಂದೇ, ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಡುವುದೂ ಒಂದೇ ಎಂಬ ಸಂಗತಿಯನ್ನು ಈ ಕರೋನಾ ಸಂದರ್ಭವು ಸಾಬೀತುಪಡಿಸಿದೆ.

ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?

ಜನರ ಜೀವವೆಂಬುದು ವ್ಯಾಪಾರದ ಸರಕಾಗಿ ಹೋಗಿದೆ. #ಉತ್ತರಕೊಡಿಬಿಜೆಪಿ

ಇಲ್ಲಿಯವರೆಗೂ ನನಗೆ ಉತ್ತರ ಬಂದಿಲ್ಲ

ಇದುವರೆಗೂ ಸರ್ಕಾರಕ್ಕೆ 2 ಪತ್ರ ಬರೆಯಲಾಗಿದೆ. 10-07-2020 ರಂದು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ 20 ಪತ್ರ ಬರೆದಿರುವೆ.ಇವರು ಪ್ರಾಮಾಣಿಕರಾಗಿದ್ದರೆ ಉತ್ತರ ಕೊಡಲು‌ ಏನು ತೊಂದರೆ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕೂಗು

ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಕೋವಿಡ್ ಸೇವೆಯಲ್ಲಿ ಮನೆ ಮನೆಗೆ ತೆರಳಿ ದುಡಿಯುತ್ತಿರುವರು ಅವರ ಮೇಲೆ ಹಲ್ಲೆಯಾದರು ಅವರ ಕೆಲಸ ಬಿಡಲಿಲ್ಲ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕೂಗು ಕೇಳುತ್ತಿಲ್ಲ ಸರ್ಕಾರ ನಿದ್ರೆಯಲ್ಲಿದೆ, ಅವರಿಗೆ ನ್ಯಾಯ ಒದಗಿಸುವುದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಲಾಗಿದೆ.

'330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು''330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು'

ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ

ಕೊವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇಂದ್ರ ಸರ್ಕಾರವು ರಾಜಸ್ಥಾನ ಸರ್ಕಾರವನ್ನು ಉರುಳಿಸುವುದರಲ್ಲಿ ನಿರತವಾಗಿದೆ. ಕರ್ನಾಟಕದ ಬಿಜೆಪಿ ಸರಕರವು ಕೊವಿಡ್ 19 ಉಪಕರಣ ಸಾಮಾಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದೆ.

ದಿನಗೂಲಿ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ

ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಮಡಿವಾಳರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಸಮಸ್ಯೆಯಲ್ಲಿದ್ದಾರೆ. ಯಾರಿಗೂ ಸರಿಯಾದ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.

'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ''4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'

ಜನರ ಅನಾರೋಗ್ಯವನ್ನು ಲಾಭಕ್ಕಾಗಿ ಬಳಸುತ್ತಿದೆ

ಇತ್ತೀಚೆಗೆ ಕರೋನಾ ಸೋಂಕಿನ ವಿಷಯವನ್ನು ಬಳಸಿಕೊಂಡು ನಕಲಿ ವೈದ್ಯಕೀಯ ಬಿಲ್ಲಿಂಗ್ ಮಾಡಿಸುವ ಸಲುವಾಗಿಯೇ ಸರ್ಕಾರವು ಸೋಂಕಿನ ಲಕ್ಷಣ ಇಲ್ಲದವರನ್ನೂ ಕೂಡಾ ಸರ್ಕಾರೀ ಸ್ಥಳದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು ಪ್ರಯತ್ನಿಸುತ್ತಿದೆ.ಜನರ ಅನಾರೋಗ್ಯವೆಂಬುದೂ ಕೂಡಾ ಪಕ್ಷಕ್ಕೆ ಲೂಟಿ ಮಾಡುವ ಸಂಗತಿಯಾಗಿದೆ, ಉತ್ತರಕೊಡಿ ಬಿಜೆಪಿ ಎಂದು ಪ್ರಶ್ನಿಸಲಾಗಿದೆ.

English summary
COVID-19 equipment Scam: Congress seeking judicial probe into COVID-19 equipment Scam and Uttara Kodi BJP(meaning Answer us BJP) is trending in Twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X