ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಸಾಮಾಜಿಕ ಅಂತರ ಕಾಪಾಡಲು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಒಂದು ಸೀಟಿನಲ್ಲಿ ಒಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶವಿತ್ತು. ಇನ್ನು ಮುಂದೆ ಬಸ್‌ನಲ್ಲಿ ಎಲ್ಲಾ ಸೀಟುಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಲಾಗಿದೆ.

Recommended Video

ಇದು ಗಾಂಜಾ ನಗರವಲ್ಲ ಗಾಂಧಿನಗರ ಎಂದ ಹಿರಿಯ ನಟ ದೊಡ್ಡಣ್ಣ | Oneindia Kannada

ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೆಲವು ಷರತ್ತುಗಳ ಜೊತೆಗೆ ಎಲ್ಲಾ ಸೀಟುಗಳನ್ನು ಭರ್ತಿ ಮಾಡಲು ಅವಕಾಶ ಕೊಡಲಾಗಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್‌ಟಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್‌ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಬಸ್‌ಗಳಲ್ಲಿ ನಿಗದಿಪಡಿಸಿರುವ ಆಸನಗಳಷ್ಟು ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆಎಸ್ಆರ್‌ಟಿಸಿಯಿಂದ ಟ್ಯಾಕ್ಸಿ ಸೇವೆ ಆರಂಭ? ಕೆಎಸ್ಆರ್‌ಟಿಸಿಯಿಂದ ಟ್ಯಾಕ್ಸಿ ಸೇವೆ ಆರಂಭ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಂಸ್ಥೆಗಳ ಬಸ್‌ಗಳಲ್ಲಿ ನಿಗದಿಪಡಿಸಿರುವಷ್ಟು ಪ್ರಯಾಣಿಕರು ಸಂಚಾರ ನಡೆಸಲು ಸೂಚಿಸಲಾಗಿದೆ.

ಅನ್ ಲಾಕ್ 4.0: ಖಾಸಗಿ ಬಸ್ ಸಂಚಾರ ಆರಂಭಅನ್ ಲಾಕ್ 4.0: ಖಾಸಗಿ ಬಸ್ ಸಂಚಾರ ಆರಂಭ

ಷರತ್ತುಗಳನ್ನು ಪಾಲಿಸಬೇಕು

ಷರತ್ತುಗಳನ್ನು ಪಾಲಿಸಬೇಕು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಲವು ಷರತ್ತುಗಳನ್ನು ವಿಧಿಸಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಎಲ್ಲಾ ಸೀಟುಗಳನ್ನು ಭರ್ತಿ ಮಾಡಲು ಅವಕಾಶವನ್ನು ನೀಡಿದೆ. ಆದರೆ, ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಕೊಟ್ಟಿಲ್ಲ.

ಮಾಸ್ಕ್ ಬಳಕೆ ಕಡ್ಡಾಯ

ಮಾಸ್ಕ್ ಬಳಕೆ ಕಡ್ಡಾಯ

ಬಸ್‌ನಲ್ಲಿ ಪ್ರಯಾಣಿಕರು ಪ್ರತಿಯೊಬ್ಬರು ಫೇಸ್ ಮಾಸ್ಕ್‌ ಅನ್ನು ಕಟ್ಟುನಿಟ್ಟಾಗಿ ಧರಿಸತಕ್ಕದ್ದು. ಜನ ಸಂದಣಿಯನ್ನು ತಡೆಗಟ್ಟಲು ಯಾವುದೇ ಪ್ರಯಾಣಿಕರನ್ನು ಬಸ್ಸಿನಲ್ಲಿ ನಿಂತು ಪ್ರಯಾಣಿಸಲು ಅನುಮತಿ ನೀಡಬಾರದು ಎಂದು ಷರತ್ತು ಹಾಕಲಾಗಿದೆ.

ಸ್ಯಾನಿಟೈಸ್ ಮಾಡಬೇಕು

ಸ್ಯಾನಿಟೈಸ್ ಮಾಡಬೇಕು

ಹವಾನಿಯಂತ್ರಿತ ಬಸ್‌ಗಳಲ್ಲಿ ಮಾರ್ಗಸೂಚಿಗಳ ಅನ್ವಯ ಎಸಿಯನ್ನು ಬಳಕೆ ಮಾಡಬೇಕು. ನಿರ್ದಿಷ್ಟಪಡಿಸಿದ ಪ್ರತಿ ಪ್ರಯಾಣದ ಬಳಿಕ ಬಸ್‌ಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಸಾಮಾಜಿಕ ಅಂತರ

ಸಾಮಾಜಿಕ ಅಂತರ

ಲಾಕ್ ಡೌನ್ ಬಳಿಕ ಸರ್ಕಾರಿ ಬಸ್ ಸಂಚಾರ ಆರಂಭವಾಗಿತ್ತು. ಬಸ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಲು ಮೂವರು ಕೂರುವ ಸೀಟಿನಲ್ಲಿ ಇಬ್ಬರಿಗೆ, ಇಬ್ಬರು ಕೂರುವ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಸಂಚಾರ ನಡೆಸಲು ಅನುಮತಿ ನೀಡಲಾಗಿತ್ತು. ಬಸ್‌ನಲ್ಲಿನ ಕರ್ಟನ್‌ಗಳನ್ನು ತೆಗೆದುಹಾಕಲಾಗಿತ್ತು.

English summary
All seats in the KSRTC bus can fill and follow guidelines of health and family welfare department to control spread of Coronavirus directed to all corporations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X