ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ. ಸಹೋದರರ ಜಾಮೀನು ಅರ್ಜಿ ಭವಿಷ್ಯ 3 ಗಂಟೆಗೆ ನಿರ್ಧಾರ

By Sachhidananda Acharya
|
Google Oneindia Kannada News

Recommended Video

ಡಿ ಕೆ ಎಸ್ ಸಹೋದರರ ಭವಿಷ್ಯ ಇಂದು 3 ಗಂಟೆಗೆ ನಿರ್ಧಾರ | Oneindia Kannada

ಬೆಂಗಳೂರು, ಮಾರ್ಚ್ 22: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಇಂದು ನ್ಯಾಯಾಲಯದ ಕಟೆಕಟೆಗೆ ಏರಿದ್ದಾರೆ. ಐಟಿ ದಾಳಿಗೆ ಸಂಬಂಧಿಸಿದ ವಿಚಾರಣೆಗೆ ಸಹೋದರರು ಹಾಜರಾಗಿದ್ದಾರೆ.

ಆಗಸ್ಟ್ 2, 2017ರಂದು ಡಿ.ಕೆ. ಶಿವಕುಮಾರ್ ಗೆ ಸೇರಿದ ಮನೆ, ಕಚೇರಿ ಹಾಗೂ ಅವರು ಗುಜರಾತ್ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದ ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ದಾಖಲೆ ಪತ್ರವೊಂದನ್ನು ಡಿ.ಕೆ. ಶಿವಕುಮಾರ್ ಹರಿದು ಹಾಕಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರಕ್ಕೂ ಕಳುಹಿಸಿ, ಐ ಡೋಂಟ್ ಕೇರ್: ಡಿಕೆಶಿ ಬಹಿರಂಗ ಸವಾಲುಪರಪ್ಪನ ಅಗ್ರಹಾರಕ್ಕೂ ಕಳುಹಿಸಿ, ಐ ಡೋಂಟ್ ಕೇರ್: ಡಿಕೆಶಿ ಬಹಿರಂಗ ಸವಾಲು

ಈ ಕುರಿತು ಸಾಕ್ಷ್ಯ ನಾಶದ ಆರೋಪವನ್ನು ಡಿ.ಕೆ. ಶಿವಕುಮಾರ್ ಹೊತ್ತುಕೊಂಡಿದ್ದು ಈ ಸಂಬಂಧ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

Court reserves order in DK brothers bail plea

ವಿಚಾರಣೆಗೆ ಶಿವಕುಮಾರ್ ಮತ್ತು ಸುರೇಶ್ ಹಾಜರಾಗಿದ್ದು ಅವರ ಪರ ವಕೀಲ ಶೇಷಾಚಲ ವಾದ ಮಂಡಿಸುತ್ತಿದ್ದಾರೆ. ಪ್ರಕರಣದಲ್ಲಿ ಜಾಮೀನು ಕೋರಿ ಸಹೋದರರು ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಸಂಬಂಧಿಸಿದ ವಿಚಾರಣೆ ನಡೆಸಿರುವ ನ್ಯಾಯಾಲಯ ಆದೇಶವನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಕಾಯ್ದಿರಿಸಿದೆ.

ಡಿ ಕೆ ಶಿವಕುಮಾರ್ ಸಹೋದರರ ನಡುವೆ ಭುಗಿಲೆದ್ದ ಮನಸ್ತಾಪ?ಡಿ ಕೆ ಶಿವಕುಮಾರ್ ಸಹೋದರರ ನಡುವೆ ಭುಗಿಲೆದ್ದ ಮನಸ್ತಾಪ?

English summary
The Economic Criminal Court of Bengaluru has reserved the bail order of Energy Minister DK Shivakumar and MP DK Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X