ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1ರಿಂದ ಕೋರ್ಟ್ ಕಲಾಪ ಆರಂಭ; ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 27 : ಲಾಕ್ ಡೌನ್ ಘೋಷಣೆ ಬಳಿಕ ಸ್ಥಗಿತಗೊಂಡಿದ್ದ ಕರ್ನಾಟಕ ಹೈಕೋರ್ಟ್ ಮತ್ತು ಇತರ ಜಿಲ್ಲಾ ನ್ಯಾಯಾಲಯಗಳ ಕಲಾಪ ಜೂನ್ 1ರಿಂದ ಆರಂಭವಾಗಲಿದೆ. ನ್ಯಾಯಾಲಯ ಕಲಾಪದ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ 38 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ವಕೀಲರು ಮತ್ತು ಸಿಬ್ಬಂದಿಗಳು ಇವುಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಜಿಲ್ಲಾ ನ್ಯಾಯಾಲಯಗಳಿಗೆ ಈ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.

ಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿ

ನ್ಯಾಯಾಲಯದ ಕಲಾಪಗಳು ಆರಂಭವಾದ ಬಳಿಕ ಬೆಳಗ್ಗೆ 10 ಮತ್ತು ಮಧ್ಯಾಹ್ನದ ಕಲಾಪದಲ್ಲಿ 10 ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ವಕೀಲರು ಮತ್ತು ನ್ಯಾಯಾಧೀಶರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿ

Court Proceedings From June 1 Sop Issued

ಪ್ರಮುಖ ಅಂಶಗಳು

* ಕೆಮ್ಮು, ನೆಗಡಿ ಮತ್ತು ಜ್ವರ ಇದ್ದವರಿಗೆ ನ್ಯಾಯಾಲಯಕ್ಕೆ ಪ್ರವೇಶ ನೀಡುವಂತಿಲ್ಲ

* ವಕೀಲರು ಮತ್ತು ಸಿಬ್ಬಂದಿ ನಡುವೆ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು

* ನ್ಯಾಯಾಲಯಕ್ಕೆ ಕಕ್ಷಿದಾರರಿಗೆ ಪ್ರವೇಶವಿಲ್ಲ

* ವಕೀಲರು ಹೊರ ರಾಜ್ಯ, ದೇಶ, ನಿರ್ಬಂಧಿತ ವಲಯಕ್ಕೆ ಭೇಟಿ ನೀಡಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು

* ಪ್ರತಿ ಕೋರ್ಟ್‌ ಹಾಲ್‌ನಲ್ಲಿ 20ಕ್ಕಿಂತ ಹೆಚ್ಚು ವಕೀಲರು, ಸಿಬ್ಬಂದಿ ಇರುವಂತಿಲ್ಲ

* 20ಕ್ಕಿಂತ ಹೆಚ್ಚು ವ್ಯಕ್ತಿಗಳು ಇದ್ದರೆ ತಕ್ಷಣ ಕಲಾಪವನ್ನು ಸ್ಥಗಿತಗೊಳಿಸಬೇಕು

* ಮೊದಲ ಎರಡು ವಾರಗಳ ಕಾಲ ಸಾಕ್ಷ್ಯಗಳ ವಿಚಾರಣೆಗೆ ಅವಕಾಶವಿಲ್ಲ

* ಮೊದಲ ಎರಡು ವಾರ ವಕೀಲರ ವಾದ ಮಂಡನೆಗೆ ಮಾತ್ರ ಅವಕಾಶ

English summary
In Karnataka court proceedings will start from June 1, 2020. Karnataka high court issued standard operating procedure (sop) for conduct proceedings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X