ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷತೆಯ ಕ್ರಮ ವಿಧೇಯಕ ಅಂಗೀಕಾರ, ದೇಗುಲ, ಶಾಲೆಗಳಲ್ಲಿ ಸಿಸಿ ಟಿವಿ ಕಡ್ಡಾಯ

|
Google Oneindia Kannada News

ಬೆಳಗಾವಿ, ನವೆಂಬರ್ 16 : ಸಾರ್ವಜನಿಕ ಸುರಕ್ಷತೆಯ ಕ್ರಮಗಳ ಜಾರಿ ವಿಧೇಯಕ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ.

ರಮೇಶ್ ಕುಮಾರ್ ಭಾವನಾತ್ಮಕ ಭಾಷಣ ಮತ್ತು ಬೆಳಗಾವಿಯ 10 ಬೆಳವಣಿಗೆಗಳು

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ರಾಜ್ಯದಲ್ಲಿನ ವಿವಿಧ ಕೈಗಾರಿಕೆ, ವಾಣಿಜ್ಯ ಸಂಸ್ಥೆ, ಧಾರ್ಮಿಕ ಸ್ಥಳ, ಆಸ್ಪತ್ರೆ, ಶಾಲಾ-ಕಾಲೇಜು ಸೇರಿ ಎಲ್ಲಾ ಜನಸಂದಣಿ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟೀವಿ ಕ್ಯಾಮರಾ ಅಳವಡಿಸಬೇಕು. ನಿಯಮ ಉಲ್ಲಂಘಿಸಿದರೆ ಸಂಸ್ಥೆಗಳನ್ನು ನೋಟಿಸ್ ನೀಡಿ ಮುಚ್ಚವ ಸಾರ್ವಜನಿಕ ಸುರಕ್ಷತೆಯ ಕ್ರಮಗಳ ಜಾರಿ ವಿಧೇಯಕಕ್ಕೆ ಎರಡೂ ಸದನಗಳು ಒಪ್ಪಿಗೆ ಸೂಚಿಸಿವೆ.

council approves public safety enforcement Bill, CCTV mandatory in schools temples

ಸಾರ್ವಜನಿಕ ಸ್ಥಳ ಹಾಗೂ ಜನಸಂದಣಿ ಇರುವ ಖಾಸಗಿ ಸ್ಥಳಗಳಲ್ಲಿನ ಅಪರಾಧ ಕೃತ್ಯ ನಿಯಂತ್ರಿಸುವುದು ಮತ್ತು ಭಯೋತ್ಪಾದನೆ ನಿಯಂತ್ರಿಸಲು ಅನುವಾಗುವಂತೆ ಜನ ಸೇರುವ ಖಾಸಗಿ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೇ ಸಿಸಿ ಟಿವಿ ಅಳವಡಿಸಬೇಕು ಎಂಬ ಕಾಯಿದೆಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿ ಅಂಗೀಕಾರ ಪಡೆದರು.

ಸಾರ್ವಜನಿಕ ಸುರಕ್ಷತೆಯ ಕ್ರಮಗಳ ಜಾರಿ ವಿಧೇಯಕ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರ ಅಂಕಿತ ಬಿದ್ದ ನಂತರ ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬರಲಿದೆ.

ಬಿಬಿಎಂಪಿ, ನಗರ ಪಾಲಿಕೆ ವ್ಯಾಪ್ತಿ ಹಾಗೂ ಬಳಿಕ ಕಾಲಕಾಲಕ್ಕೆ ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿನ ಖಾಸಗಿ ವಾಣಿಜ್ಯ ಕೇಂದ್ರಗಳಲ್ಲಿ ಒಂದೇ ವೇಳೆಗೆ 100ಕ್ಕೂ ಹೆಚ್ಚು ಜನ ಸೇರುವಂತಿದ್ದರೆ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಕೆ ಮಾಡಬೇಕು.

ಆದೇಶ ಹೊರಡಿಸಿದ 3 ತಿಂಗಳೊಳಗಾಗಿ ಸಿಸಿ ಟಿವಿ ಹಾಕದಿದ್ದರೆ ಮೊದಲ ತಿಂಗಳು 5 ಸಾವಿರ ರು. 2ನೇ ತಿಂಗಳು 10 ಸಾವಿರ ರು. ದಂಡ ವಿಧಿಸಲಾಗುವುದು. ಬಳಿಕವೂ ಅಳವಡಿಸದಿದ್ದರೆ ಧಾರ್ಮಿಕ ಕೇಂದ್ರ, ಶೈಕ್ಷಣಿಕ, ಆಸ್ಪತ್ರೆ ಸಂಸ್ಥೆ ಬಿಟ್ಟು ಉಳಿದವುಗಳನ್ನು ಮುಚ್ಚಲಾಗುವುದು.

English summary
The Legislative Council on Wednesday approved the Karnataka Public Safety (Measures) Enforcement Bill 2017 in Belagavi assembly session. It was approved after Home Minister Ramalinga Reddy, who tabled the Bill, assured the House of making some modifications suggested by the members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X