ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜೆ ಮಂಜೂರು: ಸರ್ಕಾರಿ ನೌಕರರ ಮನವಿಗೆ ಸ್ಪಂದಿಸಿದ ಬಿಸ್ವೈ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಕೋವಿಡ್ 19 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾದರಿಯಲ್ಲಿ ರಾಜ್ಯ ಸರ್ಕಾರದಲ್ಲೂ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಂದಿಸಿ, ರಜೆ ಮಂಜೂರು ಮಾಡಿದ್ದಾರೆ.

ಪ್ರಚಂಚಾದ್ಯಂತ ಕೋವಿಡ್19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಹಂತಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧವಾಗಿ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ; ಆದರೆ ಪೋಷಕರು ಜನಸಂದಣಿ ಇರುವ ಕಛೇರಿಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸೋಂಕು ಹರಡಲು ಕ್ರಮ ಕೈಗೊಂಡಂತಾಗುವುದಿಲ್ಲ. ಮಾರ್ಚ್ 23,24, 26 ಹಾಗೂ 27ರಂದು ಸರ್ಕಾರಿ ರಜೆಯೆಂದು ಘೋಷಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಲು ತಾವು ಅನುವು ಮಾಡಿಕೊಡುವಂತೆ ಎಂದು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ ಗುರುಸ್ವಾಮಿ ಮನವಿ ಮಾಡಿಕೊಂಡಿದ್ದರು.

ಕೊರೊನಾಭೀತಿ: ಮುಂದಿನ ಅನಾಹುತ ತಪ್ಪಿಸಿ ರಜೆ ಕೊಡಿ-ಸರ್ಕಾರಿ ನೌಕರರ ಅಳಲುಕೊರೊನಾಭೀತಿ: ಮುಂದಿನ ಅನಾಹುತ ತಪ್ಪಿಸಿ ರಜೆ ಕೊಡಿ-ಸರ್ಕಾರಿ ನೌಕರರ ಅಳಲು

ಕೋವಿಡ್19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಸಾಮಾಜಿಕ ಅಂತರವನ್ನು ಪಾಲಿಸಲು ಕರ್ನಾಟಕ ನಾಗರಿಕ ಸೇವಾ(ಕೆ.ಸಿ.ಎಸ್. ಆರ್) ನಿಯಮಗಳನ್ನು 1957ನ್ನು ಸಡಿಲಿಸಿ ರಜೆ ಮಂಜೂರು ಮಾಡಿ, ರಾಜ್ಯ ಸರ್ಕಾರ ಸೂಚನೆ ನೀಡಿದೆ.

Coronavirus Scare: BS Yediyurappa sanctions holiday to Karnataka Government employees

50 ವರ್ಷ ಮೀರಿದ ಹಾಗೂ ಮಧುಮೇಹ ಉಸಿರಾಟದ ತೊಂದರೆ, ಮೂತ್ರಪಿಂಡ ಕಾಯಿಲೆ ಹಾಗೂ ಇಂಥ ಇತರೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಸರ್ಕಾರಿ ನೌಕರರು ಸ್ವಸುರಕ್ಷಿತ ವಲಯದಲ್ಲಿ (self-quarantine) ಇರಲು ಇಚ್ಛಿಸಿದಲ್ಲಿ ದಿನಾಂಕ ಏಪ್ರಿಲ್ 04ರ ತನಕ್ ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳ 114ಅಡಿಯಲ್ಲಿ ಪರಿವರ್ತಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ ಈ ಮೂಲಕ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿಯಂತ್ರಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

English summary
Coronavirus Scare: CM BS Yeidyurappa has approvied Karnataka Government employees Holiday in and around Ugadi day(March 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X