ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಹೆಸರಾಂತ ವೈದ್ಯರೊಬ್ಬರು ನೀಡಿದ ಸರಳ, ಉಪಯುಕ್ತ ಸಲಹೆಗಳು

|
Google Oneindia Kannada News

ಕೊರೊನಾ ಹಾವಳಿ ವಿಪರೀತವಾಗುತ್ತಿರುವ ಈ ಸಂದರ್ಭದಲ್ಲಿ ಹೆಸರಾಂತ ವೈದ್ಯರೂ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಹಿರಿಯ ಉಪನ್ಯಾಸಕರೂ ಆಗಿದ್ದ ಡಾ.ಆಂಜನಪ್ಪ, ವಿಡಿಯೋ ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.

"ಈ ವೈರಸ್ ಕ್ರೌನ್ (ಕಿರೀಟ) ರೀತಿಯಲ್ಲಿ ಇರುವುದರಿಂದ, ಇದಕ್ಕೆ ಕೊರೊನಾ ಎನ್ನುವ ಹೆಸರು ಬಂದಿದೆ" ಎಂದಿರುವ ಡಾ.ಆಂಜನಪ್ಪ, ಇಲೆಕ್ಟ್ರಾನಿಕ್ ಮಾಧ್ಯದಮವರು ಜನರನ್ನು ಭಯಭೀತರನ್ನಾಗಿಸುವುದನ್ನು ಮೊದಲು ನಿಲ್ಲಿಸಬೇಕು ಎನ್ನುವ ಮನವಿಯನ್ನು ಮಾಡಿದ್ದಾರೆ.

ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?

ಭಾನುವಾರದ ಕರ್ಫ್ಯೂ, ನೈಟ್ ಕರ್ಫ್ಯೂ ಮುಂತಾದ ಸರಕಾರದ ಕ್ರಮವನ್ನು ಪಾಲಿಸಬೇಕು ಎಂದಿರುವ ಈ ವೈದ್ಯರು, ರಾಜ್ಯಗಳಲ್ಲಿರುವ ಮೆಡಿಕಲ್ ಕಾಲೇಜುಗಳನ್ನು ಈ ತುರ್ತು ಸಂದರ್ಭದಲ್ಲಿ ಬಳಸಬೇಕು ಎನ್ನುವ ಸಲಹೆಯನ್ನು ಸರಕಾರಕ್ಕೆ ನೀಡಿದ್ದಾರೆ.

ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

ಕೊರೊನಾ ಸೋಂಕನ್ನು ಉದ್ದೇಶಪೂರ್ವಕವಾಗಿಯೇ ಚೀನಾ ವಿಶ್ವಕ್ಕೆ ಹರಡಿತು ಎನ್ನುವ ಮಾತು ಸುಳ್ಳು ಎಂದಿರುವ ಡಾ.ಆಂಜನಪ್ಪ, ಸಾರ್ವಜನಿಕರಿಗೆ ಕೆಲವೊಂದು ಉಪಯುಕ್ತ ಟಿಪ್ಸ್ ಅನ್ನು ನೀಡಿದ್ದಾರೆ. ಅದು ಹೀಗಿದೆ:

ಕೊರೊನಾ ಮಾರಣಾಂತಿಕ ವೈರಸ್ ಅಲ್ಲ

ಕೊರೊನಾ ಮಾರಣಾಂತಿಕ ವೈರಸ್ ಅಲ್ಲ

ಇಲೆಕ್ಟ್ರಾನಿಕ್ ಮಾಧ್ಯಮದವರು ಕೊರೊನಾ ವೈರಸ್ ಅನ್ನು ಮಾರಣಾಂತಿಕ ವೈರಸ್ ಎಂದು ಕರೆಯುತ್ತಾರೆ. ಆದರೆ, ಇದು ಡೆಡ್ಲಿ ವೈರಸ್ ಅಲ್ಲ ಎಂದಿರುವ ಡಾ.ಆಂಜನಪ್ಪ, ನೂರರಲ್ಲಿ ಇಬ್ಬರಿಗೆ ಮಾತ್ರ ತೊಂದರೆ ತರಲಿದೆ. ಅದು ಕೂಡಾ, ಮಧುಮೇಹ, ಡಯಾಬಿಟಿಕ್, ಕಿಡ್ನಿ ಸಂಬಂಧ ಕಾಯಿಲೆ ಇದ್ದವರಿಗೆ ಮಾತ್ರ ಇದರಿಂದ ತೊಂದರೆಯಾಗಲಿದೆ.

ಗುಂಪಿನಲ್ಲಿದ್ದರೆ ಮಾಸ್ಕ್ ಧರಿಸಬೇಕು

ಗುಂಪಿನಲ್ಲಿದ್ದರೆ ಮಾಸ್ಕ್ ಧರಿಸಬೇಕು

ನಮ್ಮಿಂದ ಇನ್ನೊಬ್ಬರಿಗೆ, ಇನ್ನೊಬ್ಬರಿಂದ ನಮಗೆ ಸೋಂಕು ತಗಲಬಾರದು ಎಂದರೆ ಮಾಸ್ಕ್ ಧರಿಸುವುದು ಖಡ್ಡಾಯ. ಇದರಿಂದ ಸೋಂಕು ಹರಡುವುದನ್ನು ನಾವು ತಡೆಯಬಹುದು. ಸಾರ್ವಜನಿಕರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಗುಂಪಿನಲ್ಲಿದ್ದರೆ ಮಾಸ್ಕ್ ಧರಿಸಬೇಕು, ಆದರೆ, ಒಬ್ಬರೇ ಅಥವಾ ಜನಸಂಚಾರ ಕಮ್ಮಿ ಇದ್ದ ಕಡೆ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ಡಾ.ಆಂಜನಪ್ಪ ಹೇಳಿದ್ದಾರೆ.

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಸಾಧ್ಯವಾದಷ್ಟು ರೂಢಿಸಿಕೊಳ್ಳಬೇಕು. ಬೆಂಗಳೂರಿನಂತಹ ಜನಸಂದಣಿಯ ಊರಿನಲ್ಲಿ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಆದರೂ, ನಮ್ಮ ಮುಂಜಾಗೃತೆಯಲ್ಲಿ ನಾವಿರಬೇಕು. ಕೊರೊನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ. ತೇವವಿರುವ ಜಾಗದಲ್ಲಿ ಇರುತ್ತದೆ - ಡಾ.ಆಂಜನಪ್ಪ.

ಸಾಬೂನಿನಿಂದ ನೊರೆ ಬರುವ ತನಕ ತೊಳೆಯಬೇಕು

ಸಾಬೂನಿನಿಂದ ನೊರೆ ಬರುವ ತನಕ ತೊಳೆಯಬೇಕು

ಸ್ಯಾನಿಟೈಸ್ ಮಾಡಬೇಕು ಆದರೆ, ಇದರಿಂದ ವೈರಸ್ ಸಾಯುವುದಿಲ್ಲ. ಸಾಬೂನಿನಿಂದ ನೊರೆ ಬರುವ ತನಕ ತೊಳೆಯಬೇಕು. ಪ್ರಮುಖವಾಗಿ, ಮಾರುಕಟ್ಟೆಗೆ ಹೋದಾಗ, ಕೈಗೆ ಗ್ಲೌಸ್ ಹಾಕಿಕೊಂಡು ಹೋದರೆ ಉತ್ತಮ. ಇನ್ನೊಬ್ಬರು ಬಳಸಿದ ಬಾಸ್ಕೆಟ್, ಟ್ರಾಲಿಗಳನ್ನು ಬಳಸಬೇಕಾಗಿರುವುದರಿಂದ ಗ್ಲೌಸ್ ಧರಿಸುವುದು ಸೂಕ್ತ - ಡಾ.ಆಂಜನಪ್ಪ.

ಮೃತ ದೇಹದಿಂದ ವೈರಸ್ ಹರಡುವುದಿಲ್ಲ

ಮೃತ ದೇಹದಿಂದ ವೈರಸ್ ಹರಡುವುದಿಲ್ಲ

ಮೃತ ದೇಹದಿಂದ ವೈರಸ್ ಹರಡುವುದಿಲ್ಲ, ವೈರಸ್ ಅದರ ಜೊತೆಗೆಯೇ ಸಾಯುತ್ತದೆ. ಹಾಗಾಗಿ, ಎಂಟು ಅಡಿ ತೋಡಿ ದೇಹವನ್ನು ಹೂಳಬೇಕು ಎನ್ನುವುದಕ್ಕೆ ಅರ್ಥವಿಲ್ಲ. ಇದು ಮಾರಣಾಂತಿಕ ವೈರಸ್ ಅಲ್ಲ.ಮನುಷ್ಯ ಮೊದಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಲಬೇಕು. ಅದಕ್ಕಾಗಿ, ಸೊಪ್ಪು, ತರಕಾರಿ, ಹಣ್ಣುಹಂಪಲು ಸೇವಿಸಬೇಕು ಎಂದು ಡಾ.ಆಂಜನಪ್ಪ ಹೇಳಿದ್ದಾರೆ.

English summary
Coronavirus: Noted Physician Dr.Anjanappa Important Tips To Public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X