ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಸಚಿವ ರವಿ

|
Google Oneindia Kannada News

ಬೆಂಗಳೂರು, ಮೇ 20: ಕೊರೊನಾವೈರಸ್ ಸೋಂಕು ಹರಡದಂತೆ ನಾಲ್ಕನೇ ಹಂತದ ಲಾಕ್ಡೌನ್ ವಿಧಿಸಿರುವ ಸರ್ಕಾರವು ಕ್ರೀಡಾ ಚಟುವಟಿಕೆಗಳಿಗೆ ಕೆಲವು ವಿನಾಯಿತಿ ನೀಡಿದೆ. ಕ್ರೀಡಾ ಚಟುವಟಿಕೆ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಸೂಚನೆಯಂತೆ ಕರ್ನಾಟಕದಲ್ಲೂ ನಿರ್ಬಂಧಿತವಾಗಿ ಕ್ರೀಡೆಗೆ ಅವಕಾಶ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಒಟ್ಟು 864 ಸಕ್ರೀಯ ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ. ಇವತ್ತು 10 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಲಾಕ್ ಡೌನ್ ನಿಂದ ಕ್ರೀಡಾಕ್ಷೇತ್ರ ಪೂರ್ಣ ಸ್ತಬ್ದವಾಗಿತ್ತು. ಆದರೆ, ಲಾಕ್ಡೌನ್ 4.0ರಲ್ಲಿ ಕೆಲವು ಕ್ರೀಡೆಗಳಿಗೆ ವಿನಾಯಿತಿ ನೀಡಲಾಗಿದೆ.

ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌

ಫಿಟ್ನೆಸ್ ಸೆಂಟರ್ ಗಳಲ್ಲಿ ವೃತ್ತಿಪರರಿಗೆ ಅವಕಾಶ ಕೊಡಬೇಕು ಅನ್ನೋ ಮನವಿ ಬಂದಿತ್ತು. ಆದರೆ, ಜೂನ್ ಒಂದರವರೆಗೆ ಜಿಮ್, ಸ್ವಿಮ್ಮಿಂಗ್, ಕಬಡ್ಡಿ, ಕುಸ್ತಿಗೆ ಅವಕಾಶ ಇಲ್ಲಈಜುಕೊಳ, ಜಿಮ್ ಹೊರತುಪಡಿಸಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅಂತರ ಕಾಯ್ದುಕೊಳ್ಳಬಹುದಾದ ಕ್ರೀಡೆಗಳಿಗೆ ಮಾತ್ರ ಅವಕಾಶ ಸಿಕ್ಕಿದೆ.

Coronavirus Lock Down 4.0: SOP and guidelines for Sportsperson and activities

ಕಬಡ್ಡಿ, ಕುಸ್ತಿ, ಟೆಕ್ವಾಂಡೋ, ಕುಂಗು ಫೂ ಮುಂತಾದ ಕ್ರೀಡೆಗೆ ಅವಕಾಶ ಇಲ್ಲ. ಸರ್ಕಾರ ನೀಡಿರುವ ನಿಬಂಧನೆಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಕ್ರೀಡಾ ಕಾಂಪ್ಲೆಕ್ಸ್ , ತರಬೇತಿ ಕೇಂದ್ರ, ಮೈದಾನಕ್ಕಿಳಿಯುವ ಮುನ್ನ ಈ ವಿಷಯಗಳನ್ನು ಗಮನಿಸಿ: ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಟಿಶ್ಯೂ ಪೇಪರ್ ಜೊತೆಗಿರಬೇಕು. ಪ್ರೇಕ್ಷಕರಿಗೆ ಅವಕಾಶ ಇಲ್ಲದೇ ಕ್ರೀಡೆಗಳನ್ನು ನಡೆಸಬಹುದು. ಕ್ಲಬ್ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಕ್ರೀಡೆಗೆ ಅವಕಾಶವಿದೆ ಎಂದು ಸಚಿವ ರವಿ ಹೇಳಿದರು.

English summary
Coronavirus Lock Down 4.0: Minister C.T Ravi today(May 2-0) released Standard Operative Procedure and guidelines for Sportsperson and sport activities in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X