ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ; ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಒಂದೊಂದು ದಿಕ್ಕು!

|
Google Oneindia Kannada News

ಬೆಂಗಳೂರು, ಮಾರ್ಚ್ 21: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಡುವೆ ಸಮನ್ವಯ ಇಲ್ಲ ಎನ್ನಲಾಗುತ್ತಿದೆ.

ಇದಕ್ಕೆ ಪೂರಕವೆಂಬಂತೆ ಇಂದು ಗೌರಿಬಿದನೂರಿನಲ್ಲಿ 35 ವರ್ಷದ ವ್ಯಕ್ತಿಗೆ ಸೋಂಕು ಧೃಢಪಟ್ಟಿದೆ ಅಂತಾ ಆರೋಗ್ಯ ಸಚಿವ ಶ್ರೀರಾಮಲು ಟ್ವೀಟ್ ಮಾಡಿದ್ದರೆ, ಬೆಂಗಳೂರಿನಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು, 'ಗೌರಿಬಿದನೂರಿನಲ್ಲಿ ಇಬ್ಬರು ವ್ಯಕ್ತಿಗಳಿಗೆ ಸೋಂಕಿನ ಲಕ್ಷಣಗಳಿವೆ. ಆದರೆ, ಇನ್ನೂ ಸೋಂಕು ಖಚಿತವಾಗಿಲ್ಲ' ಎಂದು ಹೇಳಿರುವುದು ಗೊಂದಲ ಮೂಡಿಸಿದೆ.

ಜನತಾ ಕರ್ಫ್ಯೂ; ಸುಮ್ಮನೆ ತಿರುಗಾಡಿದರೆ ಬೀಳತ್ತೆ ಕೇಸುಜನತಾ ಕರ್ಫ್ಯೂ; ಸುಮ್ಮನೆ ತಿರುಗಾಡಿದರೆ ಬೀಳತ್ತೆ ಕೇಸು

Coronavirus In Karnataka: No Coordinance In Departments

'ಸಂಜೆ 6 ಗಂಟೆಗೆ ಕೊರೋನಾ ಬುಲೆಟಿನ್ ಬಿಡುಗಡೆ ಆಗುತ್ತೆ. ಆಗ ಮತ್ತೆ ಯಾರಿಗಾದ್ರೂ ಸೋಂಕು ದೃಢಪಟ್ಟಿದ್ರೆ ಅದ್ರಲ್ಲಿ ಮಾಹಿತಿ ಇರುತ್ತೆ ಚಿಕ್ಕಬಳ್ಳಾಪುರದಲ್ಲಿ ಕೋವಿಡ್19 ಪಾಸಿಟೀವ್ ಪತ್ತೆ. ಈ ಬಗ್ಗೆ ನಮಗೆ ಅಧಿಕೃತ ರಿಪೋರ್ಟ್ ಬರಬೇಕಾಗಿದೆ. ಇಬ್ಬರು ಮೆಕ್ಕಾದಿಂದ ಬಂದಿದ್ದಾರೆ. ಬೆಂಗಳೂರಿನಲ್ಲಿ ಅವರು ತಪಾಸಣೆ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿವೆ. ರಿಪೋರ್ಟ್ ಬಂದ ಮೇಲೆ ಸಂಜೆ 6ಗಂಟೆಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ' ಎಂದರು.

Coronavirus In Karnataka: No Coordinance In Departments

'ದುಬಾರಿ ಬೆಲೆಗೆ ಮಾಸ್ಕ್ ಮಾರಾಟ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿಎಂ ಬಹಳ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ದುಬಾರಿ ಬೆಲೆಗೆ ಮಾಸ್ಕ ಮಾರಾಟಮಾಡುವುದು ಅಪರಾಧ. ಅಂತವರ ಮೇಲೆ ಕ್ರಮ ತೆಗೆದುಕೊಳ್ತೇವೆ. ಕೆಲವೊಂದು ಕಡೆ ಕೊರತೆ ಕಂಡು ಬಂದಿದೆ. ಹೆಚ್ಚಿನ ಮಾಸ್ಕ್, ಸ್ಯಾನಿಟೈಸರ್ ತರಿಸಿಕೊಳ್ತಿದ್ದೇವೆ. ಯಾವುದಕ್ಕೂ ಕೊರತೆಯಿಲ್ಲ' ಎಂದರು.

English summary
Coronavirus In Karnataka: No Coordinance In Departments. regarding corona possitive case in chikkaballapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X