ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Coronavirus in Karnataka Live Updates : ಭಾರತದಲ್ಲಿಂದು 6,594 ಹೊಸ ಕೊರೊನ ಪ್ರಕರಣಗಳು ದಾಖಲು

|
Google Oneindia Kannada News

ಬೆಂಗಳೂರು, ಜೂನ್ 14: ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾವೈರಸ್ ಸೋಂಕು ಕರ್ನಾಟಕದಲ್ಲೂ ತನ್ನ ಪ್ರಭಾವವನ್ನು ಬೀರಿದೆ. ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರು ಮುಂದಾಗಿದ್ದಾರೆ. ಸಂಪೂರ್ಣ ಲಾಕ್ ಡೌನ್, ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಪ್ರತಿದಿನದ ಸರ್ಕಾರಿ ಆದೇಶ, ಆರೋಗ್ಯ ಇಲಾಖೆ ಮಾರ್ಗಸೂಚಿ, ಅಗತ್ಯ ಸಲಹೆಗಳ ಕುರಿತಂತೆ ಪ್ರತಿ ಕ್ಷಣದ ಲೈವ್ ಅಪ್ಡೇಟ್ ನಿಮಗಿಲ್ಲಿ ಸಿಗಲಿದೆ...

Live Updates: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಡಬಲ್ ಸ್ಯಾಲರಿ
ಕೋವಿಡ್19 ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್ ನಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ.ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಲಾಕ್ ಡೌನ್ ಸಂದರ್ಭದಲ್ಲಿ ಭಾರತದ ದೈನಂದಿನ ಬದುಕಿನ ಚಿತ್ರಗಳು

Coronavirus in Karnataka: Government Announcements and Live Updates

30 ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಆಸ್ಪತ್ರೆಯವರು ಶೇ. 50 ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Newest FirstOldest First
11:28 AM, 14 Jun

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,594 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜೂನ್ 14) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,035 ಸೋಂಕಿತರು ಚೇತರಿಸಿಕೊಂಡು ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಚೇತರಿಕೆಯ ದರ ಸುಮಾರು 98.67 ರಷ್ಟಿದೆ. ಒಟ್ಟು ಚೇತರಿಕೆಯ 26,61,370 ಕ್ಕೆ ತಲುಪಿದೆ. ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 50,548 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ.
8:04 AM, 14 Jun

ಕೊರೊನಾ ವೈರಸ್‌ನ ಓಮಿಕ್ರಾನ್ ಉಪ-ವೇರಿಯಂಟ್‌ಗಳಲ್ಲಿ BA.4ನ ಮೂರು ಪ್ರಕರಣಗಳು ಮತ್ತು BA.5 ಒಂದು ಪ್ರಕರಣ ಮುಂಬೈನಲ್ಲಿ ಸೋಮವಾರ ದಾಖಲಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಎರಡು ಉಪ-ರೂಪಾಂತರಗಳು ಕೊರೊನವೈರಸ್‌ನ ಹೆಚ್ಚು-ಪ್ರಸರಣಶೀಲ ಓಮಿಕ್ರಾನ್ ಸ್ಟ್ರೈನ್‌ಗೆ ಸೇರಿವೆ. ಇದು ಈ ವರ್ಷದ ಆರಂಭದಲ್ಲಿ ಮೂರನೇ ತರಂಗಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.
12:10 PM, 13 Jun

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 8,084 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಸೋಂಕಿನಿಂದ 10 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ (ಜೂನ್ 13) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,592 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಚೇತರಿಕೆ ದರ ಸುಮಾರು 98.68 ಪ್ರತಿಶತದಷ್ಟಿದೆ ಮತ್ತು ಒಟ್ಟು ಚೇತರಿಕೆಯ ಡೇಟಾ 4 ಕ್ಕೆ ತಲುಪಿದೆ. ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 47,995ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ಬಹಿರಂಗಗೊಂಡಿವೆ.
10:43 PM, 10 Jun

ಕರ್ನಾಟಕದಲ್ಲಿ 525 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಪಾಸಿಟಿವಿಟಿ ದರ ಶೇ.2.31ರಷ್ಟು ದಾಖಲಾಗಿದೆ. 228 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 3,061 ರಷ್ಟಿದ್ದು ಇಂದು 22,673 ಪರೀಕ್ಷೆಗಳು ನಡೆದಿವೆ.
7:45 PM, 10 Jun

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ಸರ್ಕಾರ ಕೋವಿಡ್ 19 ಕುರಿತಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಕೋವಿಡ್ 19 ಪ್ರಕರಣ ಹೆಚ್ಚಳ
10:59 PM, 8 Jun

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 376 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಪಾಸಿಟಿವಿಟಿ ದರ ಶೇ. 1.61ರಷ್ಟಿದೆ. 231 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 2,623ಕ್ಕೆ ಏರಿಕೆಯಾಗಿದ್ದು 23,246 ಪರೀಕ್ಷೆಗಳನ್ನು ಮಾಡಲಾಗಿದೆ.
11:49 PM, 26 Mar

ಪುತ್ರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟನೆ ನೀಡಿದ ಮಾಜಿ ಸಚಿವ ದಿನೇಶ್ ಗುಂಡೂರಾವ್
Advertisement
11:37 PM, 26 Mar

ಧಾರವಾಡದ ಜನರಿಗೆ ಸಂಸದ ಪ್ರಹ್ಲಾದ್ ಜೋಶಿ ಮನವಿ
11:13 PM, 26 Mar

ಕಲಬುರಗಿ ಜಿಲ್ಲೆಯಿಂದ ಇದುವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ 64 ಸ್ಯಾಂಪಲ್ ಪರೀಕ್ಷೆಗೆ ಕಳಿಸಲಾಗಿತ್ತು. ಮಾರ್ಚ್ 26ರ ಸಾಯಂಕಾಲ 6 ಗಂಟೆ ವರೆಗೆ 35 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.
10:59 PM, 26 Mar

ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ 31 ಫೀವರ್ ಕ್ಲಿನಿಕ್ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿವೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರು ಈ ಚಿಕಿತ್ಸಾಲಯಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು.
10:23 PM, 26 Mar

ಲಾಕ್ ಡೌನ್ ಬಗ್ಗೆ ಬಿಬಿಎಂಪಿ ಕಚೇರಿಯಲ್ಲಿ ಸಭೆ
9:54 PM, 26 Mar

ಶಿವಮೊಗ್ಗ ಮಹಾನಗರ ಪಾಲಿಕೆ ಶುಕ್ರವಾರದಿಂದ ಮನೆ ಬಾಗಿಲಿಗೆ ಆಹಾರ ಪೂರೈಕೆ ಮಾಡಲಿದೆ. ಗ್ರಾಹಕರು ಆರ್ಡರ್ ಮಾಡಿದ ಒಂದು ಗಂಟೆಯ ವೊಳಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆಗೆ ಬರಲಿದೆ.
Advertisement
9:31 PM, 26 Mar

ರೈಲಿನಲ್ಲಿ ಪ್ರಯಾಣ ಮಾಡಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ
9:14 PM, 26 Mar

ಕೊರೊನಾ ವಿರುದ್ಧ ಹೋರಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂ. ದೇಣಿಗೆ ನೀಡಿದರು.
9:03 PM, 26 Mar

ಬಸ್ ಸಂಚಾರದ ಬಗ್ಗೆ ಬಿಎಂಟಿಸಿ ಸ್ಪಷ್ಟನೆ
8:54 PM, 26 Mar

ಪಿಜಿಯನ್ನು ಖಾಲಿ ಮಾಡಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ
8:41 PM, 26 Mar

ಮೈಸೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಗೂಲಿ ಕಾರ್ಮಿಕರಗೆ ಮತ್ತು ಜನರಿಗೆ ಫುಡ್ ಪ್ಯಾಕೇಟ್ ವಿತರಣೆ ಮಾಡಿದರು. ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ಹೋಟೆಲ್‌ಗಳು ಮುಚ್ಚಿವೆ.
8:33 PM, 26 Mar

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ತುರ್ತು ಸಚಿವ ಸಂಪುಟ ಕರೆದಿದ್ದಾರೆ. ಆಯಾ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಪಾಲನೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡುವ ನಿರೀಕ್ಷೆ ಇದೆ.
8:21 PM, 26 Mar

ಕರ್ನಾಟಕದ ಕೊರೊನಾ ಪ್ರಕರಣಗಳ ಬಗ್ಗೆ ಯಡಿಯೂರಪ್ಪ ಟ್ವೀಟ್
7:59 PM, 26 Mar

ಲಾಕ್ ಡೌನ್ ಅವಧಿಯಲ್ಲಿ ಜೀವನಾವಶ್ಯಕ ಸರಕುಗಳ ಸಾಗಣೆ ಮಾಡುವ ಲಾರಿಗಳ ಸಂಚಾರಕ್ಕೆ ನಿರ್ಬಂಧವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಖಾಲಿ ಮತ್ತು ಸರಕು ತುಂಬಿದ ಲಾರಿಗಳು ಅಂತರ್ ರಾಜ್ಯ, ಅಂತರ್ ಜಿಲ್ಲೆಯ ಸಂಚಾರಕ್ಕೆ ಅನುಮತಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪಾಸುಗಳ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
7:42 PM, 26 Mar

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಮುಸ್ಲಿಂ ಸಮಾಜದ ಹಿರಿಯರೊಂದಿಗೆ ಸಭೆ ನಡೆಸಿದರು. ರಾಜ್ಯದ ಯಾವುದೇ ಮಸೀದಿಗಳಲ್ಲಿ ಪ್ರಾರ್ಥನೆ ಮಾಡದ ಹಾಗೆ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಗುಂಪು ಸೇರದ ಹಾಗೆ ಸೂಚಿಸಿದರು. ಇತ್ತಿಚೆಗೆ ರಾಜ್ಯದಲ್ಲಿ ಯಾರಾದರೂ ಹಜ್ ಪ್ರವಾಸ ಮುಗಿಸಿ ಬಂದಿದ್ದರೆ ವಿವರ ನೀಡುವಂತೆ ಕೇಳಿದರು.
7:20 PM, 26 Mar

ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯಲ್ಲಿ ಪರೀಕ್ಷೆ ಮಾಡಲು ಸಂಗ್ರಹಿಸಿದ ಒಟ್ಟು 3 ವ್ಯಕ್ತಿಗಳ ಮಾದರಿಗಳಲ್ಲಿ 2 ನೆಗೆಟಿವ್ ಫಲಿತಾಂಶ ಬಂದಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ
7:16 PM, 26 Mar

ಮುಖ್ಯಮಂತ್ರಿಗಳ ಮನವಿ ಹಿನ್ನಲೆಯಲ್ಲಿ ಕೊರೊನಾ ನಿರ್ಮೂಲನೆಗೆ ಹುಬ್ಬಳ್ಳಿ ವಕೀಲರೊಬ್ಬರು 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಿದ್ದಾರೆ. ಹುಬ್ಬಳ್ಳಿಯ ಮಯೂರಿ ಗಾರ್ಡನ್ ನಿವಾಸಿಯಾದ ಪ್ರದೀಪ ಜೋಷಿ ಬೆಂಗಳೂರಿನ ಹೈಕೋರ್ಟ್‌ನಲ್ಲಿ ವಕೀಲರು.
7:01 PM, 26 Mar

ಮೈಸೂರಿನಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತ 35 ವರ್ಷದ ಮೈಸೂರಿನ ವ್ಯಕ್ತಿ. ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಕ್ವಾಲಿಟಿ ಅಶುರೆನ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ಸೋಂಕಿತ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
6:39 PM, 26 Mar

ಬೆಳಗಾವಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಜನರಿಗೆ ಪೊಲೀಸರು ಲಾಠಿ ಬೀಸಿದರು.
6:21 PM, 26 Mar

ಕರ್ನಾಟಕದ ಕಲಬುರಗಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದವರಿಗೆ ರಸ್ತೆಯ ಕಸ ಗುಡಿಸುವ ಕೆಲಸವನ್ನು ನೀಡಲಾಯಿತು.
6:09 PM, 26 Mar

ಕೊರೊನಾ ಹರಡದಂತೆ ತಡೆಯಲು ಕೊಡಗಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಟೈನ್ ಮೆಂಟ್ ಮತ್ತು ಬಫರ್ ಜೋನ್ ಏರಿಯಾಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
6:00 PM, 26 Mar

ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗಳಲ್ಲಿ ಓಡಾಡಿದರೆ ಐಪಿಸಿ ಪ್ರಕರಣ ದಾಖಲು ಮಾಡಲಾಗುತ್ತದೆ. ಹೊಮ್ ಕ್ವಾರಂಟಿನಲ್ಲಿರುವರು ಸಾರ್ವಜನಿಕವಾಗಿ ಹೊರ ಬಂದರೆ ಎಫ್‍ಐಆರ್ ದಾಖಲು ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
5:54 PM, 26 Mar

ಕೊರೊನಾ ಹರಡುವಿಕೆ ತಡೆಗಟ್ಟಲು ಇರುವ ಅತ್ಯಂತ ಮುಖ್ಯ ಅಸ್ತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ.
5:37 PM, 26 Mar

ಕೊರೊನಾ ಹರಡದಂತೆ ತಡೆಯಲು ಜೆಸ್ಕಾಂ, ಕೊಪ್ಪಳ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ವಿದ್ಯುತ್ ಬಿಲ್ಲುಗಳನ್ನು ಜೆಸ್ಕಾಂ ಕೌಂಟರ್‌ಗಳಿಗೆ ಹೋಗಿ ಪಾವತಿಸುವ ಬದಲು ಆನ್‌ಲೈನ್ ಸೇವೆಗಳಾದ ನೆಟ್ ಬ್ಯಾಂಕಿಂಗ್, ಪೇಟಿಎಂ, ಫೋನ್‌ಪೇ, ಗೂಗಲ್ ಪೇ, ಭೀಮ್ ಆ್ಯಪ್ ಇತ್ಯಾದಿಗಳ ಮೂಲಕ ಪಾವತಿಸಬೇಕು ಎಂದು ಮನವಿ ಮಾಡಲಾಗಿದೆ.
READ MORE

English summary
Coronavirus : Get daily Live Updates and Government Announcements Updates in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X