ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡುಕಿದ ಸಿದ್ದರಾಮಯ್ಯ: ರಾಜ್ಯ ಸರ್ಕಾರದಲ್ಲಿ ಹುಟ್ಟುತ್ತಾ ನಡುಕ?

|
Google Oneindia Kannada News

ಬೆಂಗಳೂರು, ಆಗಸ್ಟ್.02: ನೊವೆಲ್ ಕೊರೊನಾವೈರಸ್ ಸೋಂಕು ನಿರ್ವಹಣೆ ಮತ್ತು ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 5172 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ. 53648 ಸೋಂಕಿತರು ಗುಣಮುಖರಾಗಿದ್ದರೆ, 73219 ಸಕ್ರಿಯ ಪ್ರಕರಣಗಳಿವೆ. ಮಹಾಮಾರಿಗೆ 2412ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಸರ್ಕಾರವು ಲೂಟಿ ಹೊಡೆಯುವುದಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಜೆಪಿ ನೋಟಿಸ್ ಗೆ ಹೆದರಲ್ಲ, ನಾನೂ ಒಬ್ಬ ಲಾಯರ್; ಸಿದ್ದರಾಮಯ್ಯಬಿಜೆಪಿ ನೋಟಿಸ್ ಗೆ ಹೆದರಲ್ಲ, ನಾನೂ ಒಬ್ಬ ಲಾಯರ್; ಸಿದ್ದರಾಮಯ್ಯ

ರಾಜ್ಯದಲ್ಲಿ ಬೆಡ್, ವೆಂಟಿಲೇಟರ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ನಿಂದ ಮಾಸ್ಕ್ ವರೆಗೂ ಎಲ್ಲದರಲ್ಲೂ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. ಸಾಲು ಸಾಲಾಗಿ 12 ಬಾರಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಇರುವುದು

ರಾಜ್ಯದಲ್ಲಿ ಇರುವುದು "ಹೃದಯಹೀನ ಸರ್ಕಾರ"

"ಕರ್ನಾಟಕದಲ್ಲಿ ಪ್ರತಿದಿನ 5000ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ, ಸರಾಸರಿ 80-90 ಮಂದಿ ಸಾಯುತ್ತಿದ್ದಾರೆ.‌ ಸಚಿವ @drharshvardhan ಪ್ರಕಾರ ಕೊರೊನಾ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ಕೊಡ್ತಾರಂತೆ. ಹೃದಯಹೀನ‌ ಸರ್ಕಾರ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

"ಸೋಂಕಿತರ ಸಾವಿಗೆ ವೆಂಟಿಲೇಟರ್ ಕೊರತೆಯೇ ಕಾರಣ"

"ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಒಂದು ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕಿತ ಪ್ರಕರಣಗಳು 57,396. ಲಭ್ಯವಿರುವ ವೆಂಟಿಲೇಟರ್ ‌ಗಳು ಕೇವಲ 801. ಒಟ್ಟು ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಆದರೆ @narendramodi ಸರ್ಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ"ಯಾಗಿದೆ ಎಂದು 2ನೇ ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.

ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೆ ಅನುಮತಿ ಇಲ್ಲದಿದ್ದರೂ, ಸಿಎಂ ತವರು ಜಿಲ್ಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ!ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೆ ಅನುಮತಿ ಇಲ್ಲದಿದ್ದರೂ, ಸಿಎಂ ತವರು ಜಿಲ್ಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ!

"ಕೊರೊನಾವೈರಸ್ ಹರಡುವುದಕ್ಕೆ ಭ್ರಷ್ಟಾಚಾರ ಕಾರಣ"

"ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ಮೂರನೇ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

"ಸಾವು-ನೋವಿನ ನಡುವೆ ಭ್ರಷ್ಟಾಚಾರ ಮಾಡಬೇಕೇ?"

"ಜನರ ಕಷ್ಟದ ಕಾಲದಲ್ಲಿ ವಿರೋಧಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ ಎಂದು @CMofKarnataka ಕೇಳುತ್ತಿದ್ದಾರೆ. ಇಂತಹ ಸಾವು-ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲುಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲು

"ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ ಏಕೆ ಸಹಕಾರ ನೀಡಲಿಲ್ಲ"

"ನಮ್ಮಿಂದ ಸಹಕಾರ ನಿರೀಕ್ಷಿಸುವ @BJP4India ಸರ್ಕಾರ, ಕೊರೊನಾವೈರಸ್ ಕಾಲದಲ್ಲಿ ಮಧ್ಯಪ್ರದೇಶದ ನಮ್ಮ ಸರ್ಕಾರಕ್ಕೆ @BJP4MP ಯಾಕೆ‌ ಸಹಕಾರ ಕೊಡಲಿಲ್ಲ?. ರಾಜಸ್ತಾನದ ನಮ್ಮ ಸರ್ಕಾರವನ್ನು ಉರುಳಿಸಲು ಹೊರಟದ್ದು ಯಾಕೆ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಕರ್ನಾಟಕವು ನೆರೆ ರಾಜ್ಯಗಳನ್ನೂ ಮೀರಿಸುತ್ತಿದೆ"

"ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೊರೊನಾ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡುಗಳನ್ನು ಮೀರಿಸಿ ಕರ್ನಾಟಕ ನಂಬರ್ ಒನ್ ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ ಆಗಲಾರದೇ?" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೊವಿಡ್-19 ನಿಯಂತ್ರಿಸುವಲ್ಲಿ ವಿಫಲ

ಕೊವಿಡ್-19 ನಿಯಂತ್ರಿಸುವಲ್ಲಿ ವಿಫಲ

"ರಾಜ್ಯದಲ್ಲಿ "ಬೆಡ್ ಇಲ್ಲ, ಔಷಧಿ ಇಲ್ಲ, ಊಟ ಕೊಡ್ತಿಲ್ಲ, ಅಂಬ್ಯುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತ ಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ,1,29,287ಕ್ಕೆ ಸಾವಿನ ಸಂಖ್ಯೆ 2412ಕ್ಕೆ ಏರಿದೆ. ನಾವು ಸುಮ್ಮನಿರಬೇಕಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜನರ ಕಷ್ಟಗಳು ಸರ್ಕಾರಕ್ಕೆ ಕಾಣಲಿಲ್ಲ ಎಂದ ಸಿದ್ದರಾಮಯ್ಯ

ಜನರ ಕಷ್ಟಗಳು ಸರ್ಕಾರಕ್ಕೆ ಕಾಣಲಿಲ್ಲ ಎಂದ ಸಿದ್ದರಾಮಯ್ಯ

"ರಾಜ್ಯದ ಜನ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಪೂರೈಕೆ ಯಂತ್ರಗಳಿಲ್ಲ, ಊಟ-ತಿಂಡಿ ಇಲ್ಲ, ಉದ್ಯೋಗ ಇಲ್ಲ ಎಂದು ಗೋಳಾಡುತ್ತಿದ್ದಾರೆ. @BJP4Karnataka ಸರ್ಕಾರಕ್ಕೆ ಜನರ ಕಷ್ಟ ಕಾಣಲಿಲ್ಲ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು‌ ‌ಕಾಣ್ತು" ಎಂದು ಟ್ವಿಟ್ಟರ್ ನಲ್ಲಿ ತಿವಿದಿದ್ದಾರೆ.

ತನಿಖೆ ನಡೆಸಲು ಸರ್ಕಾರದ ಹಿಂದೇಟು ಏಕೆ?

ತನಿಖೆ ನಡೆಸಲು ಸರ್ಕಾರದ ಹಿಂದೇಟು ಏಕೆ?

"ಅಕ್ರಮದ ಬಗ್ಗೆ @CMofKarnataka ಅವರನ್ನು ಪ್ರಶ್ನಿಸಿದರೆ "ಮಾಹಿತಿ ಕೊಡಿ'' ಎನ್ನುತ್ತಾರೆ, ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದು ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳ್ತಾರೆ. ಜನರ ಬಳಿ ಹೋಗದೆ ನಮಗೆ ಬೇರೆ ದಾರಿ ಏನಿದೆ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಒಂದೇ ಒಂದು ಹಾಳೆ ಮಾಹಿತಿಯೂ ಬಂದಿಲ್ಲ"

"24 ಗಂಟೆಯೊಳಗೆ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ಮಾಹಿತಿ ಕಳಿಸಿಕೊಡ್ತೇವೆ ಎಂದು @CMofKarnataka ಹೇಳಿ 24 ದಿನ ಕಳೆದು ಹೋಗಿದೆ. ಇಲ್ಲಿಯ ವರೆಗೆ ರಾಜ್ಯ ಸರ್ಕಾರದಿಂದ ಒಂದು ಹಾಳೆ ಮಾಹಿತಿ ನನಗೆ ಬಂದಿಲ್ಲ. ಸತ್ಯ ಹೇಳಲು ನಿಮಗೆ ಭಯ ಯಾಕೆ?" ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

"ಖರೀದಿ ಹಗರಣಕ್ಕೆ ಇದೀಗ ಕೊಂಚ ತಡೆ ಬಿದ್ದಿದೆ"

"ನಾನು ಬಹಿರಂಗವಾಗಿ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿಯ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲಾ ಎಂದು ಇವರಿಗೆಲ್ಲ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಕೋರ್ಟ್ ನಲ್ಲಿ ಆದರೂ ನಮ್ಮನ್ನು ಎದುರಿಸಬೇಕಲ್ಲ"

"ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು @BJP4Karnataka ನಮ್ಮ‌ ಕೆಲಸವನ್ನು ಸುಲಭ‌ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ?, ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ?" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Coronavirus Equipment Scandal: Siddaramaiah's Challenge To State Government On Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X