ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಾಲಯದ ಮೇಲೂ ಕೊರೊನಾ ವಕ್ರದೃಷ್ಠಿ: ಅಲ್ಲೂ ಕೋಟಿ ಕೋಟಿ ನಷ್ಟ!

|
Google Oneindia Kannada News

ಬೆಂಗಳೂರು, ಮೇ 15: ಕೊರೊನಾ ವೈರಸ್ ದೇವಸ್ಥಾನವನ್ನೂ ಬಿಟ್ಟಿಲ್ಲ. ನಾಡಿನ ಎಲ್ಲಾ ದೇವಾಲಯಗಳು ಬಂದ್ ಆಗಿ ಸುಮಾರು ಐವತ್ತು ದಿನದ ಮೇಲಾದವು.

Recommended Video

ನಿಮ್ಮ ಕೈ ಬೆರಳುಗಳು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ ನೋಡಿ | Palmistry | Oneindia Kannada

ಕೊರೊನಾ ಎಂತಹ ಟೈಂನಲ್ಲಿ ವಕ್ಕರಿಸಿದೆ ಎಂದರೆ, ಅದೂ ಬೇಸಿಗೆಯಲ್ಲಿ. ಮಾರ್ಚ್ ನಿಂದ ಮೇ ತಿಂಗಳು ಶುಭ ಸಮಾರಂಭ ಹೆಚ್ಚಾಗಿ ನಡೆಯುವಂತಹ ಸಮಯ. ಇನ್ನೂ, ಈ ಸಮಯದಲ್ಲಿ ದೇವಾಲಯಗಳಲ್ಲಿ ವಿಪರೀತ ಜನದಟ್ಟಣಿ ಇರುವಂತಹ ಸಮಯ ಕೂಡಾ..

ಬಡ ಅರ್ಚಕರ ನೆರವಿಗೆ ನಿಂತ ದಿನೇಶ್, ದಿನಸಿ ಕಿಟ್ ವಿತರಣೆಬಡ ಅರ್ಚಕರ ನೆರವಿಗೆ ನಿಂತ ದಿನೇಶ್, ದಿನಸಿ ಕಿಟ್ ವಿತರಣೆ

ಆದರೆ, ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿದೆ. ನಾಡಿನ ಎಲ್ಲಾ ದೇವಾಲಯಗಳೂ ಭಕ್ತಾದಿಗಳಿಗೆ ಬಾಗಿಲು ಮುಚ್ಚಿವೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ) ವ್ಯಾಪ್ತಿಯಲ್ಲಿ ಬರುವ ಎಲ್ಲಾ ವರ್ಗದ ದೇವಾಲಗಳಿಗೆ, ಕಳೆದ ಐವತ್ತು ದಿನಗಳಿಂದ ಆಗಿರುವ ನಷ್ಟ ಸುಮಾರು ನೂರು ಕೋಟಿಯ ಮೇಲೆ.

Coronaviurs Effect:Temples Shuts, Huge Loss For Karnataka Endowment Department

ಇದರಿಂದ ದೇವಾಲಯದ ಆದಾಯವನ್ನೇ ನಂಬಿಕೊಂಡಿದ್ದಂತಹ ಮುಜರಾಯಿ ಇಲಾಖೆ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕನಸಿನ 'ಸಪ್ತಪದಿ' ಸರಳ ಸಾಮೂಹಿಕ ವಿವಾಹ ಯೋಜನೆಯೂ ಅನಿರ್ದಿಷ್ಟಾವದಿಗೆ ಮುಂದಕ್ಕೆ ಹಾಕಲಾಗಿದೆ.

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು, ಆಯಾಯ ದೇಗುಲದ ಆದಾಯದ ಮೇಲೆ ವರ್ಗದ ಮೇಲೆ ವಿಂಗಡಿಸಲಾಗಿದೆ. ಎ ವರ್ಗದ ದೇವಾಲಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು ಮೂವತ್ತು ಕೋಟಿ ಆದಾಯ ಬಂದಿತ್ತು.

ದೇವೇಗೌಡರ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ: ಕೋಟ ಶ್ರೀನಿವಾಸ ಪೂಜಾರಿದೇವೇಗೌಡರ ಮೇಲಿನ ಗೌರವ ಇನ್ನೂ ಹೆಚ್ಚಾಗಿದೆ: ಕೋಟ ಶ್ರೀನಿವಾಸ ಪೂಜಾರಿ

ಇನ್ನು ಬಿ ವರ್ಗದ ದೇವಾಲಯಗಳಲ್ಲಿ ಸುಮಾರು 36 ಕೋಟಿ ಮತ್ತು ಸಿ ವರ್ಗದ ದೇವಾಲಯಗಳಲ್ಲೂ ಅಷ್ಟೇ ಪ್ರಮಾಣದ ಆದಾಯ ಕಳೆದ ವರ್ಷದ ಈ ಸಮಯದಲ್ಲಿ ಬಂದಿತ್ತು. ಹಾಗಾಗಿ, ಕೊರೊನಾದಿಂದ ಇದುವರೆಗೆ ಮುಜರಾಯಿ ಇಲಾಖೆಗೆ ಆದ ನಷ್ಟ ನೂರು ಕೋಟಿಗೂ ಮೇಲು ಎಂದು ಅಂದಾಜಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರ ದೇವಾಲಯಗಳಿವೆ. ಇದರಲ್ಲಿ ಎ ದರ್ಜೆಯ ದೇವಾಲಯಗಳು ಸುಮಾರು 145.

English summary
Coronaviurs Effect:Temples Shuts, Huge Loss For Karnataka Endowment Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X