ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Corona Effect: 1 ಗ್ರಾಂ ಚಿನ್ನದ ಬೆಲೆ 5 ಸಾವಿರಕ್ಕೆ ಐವತ್ತು ರೂಪಾಯಿ ಕಡಿಮೆ

|
Google Oneindia Kannada News

ಬೆಂಗಳೂರು, ಫೆಬ್ರವರಿ.24: ಚಿನ್ನ ಖರೀದಿಸಬೇಕಾದರೆ ಇನ್ನು ಮುಂದೆ ಜೇಬು ಮುಟ್ಟಿ ನೋಡಿಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬಂಗಾರದ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ ಕಂಡಿದೆ.

ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ನಿಂದಾಗಿ ವಿದೇಶಿ ವಹಿವಾಟಿನಲ್ಲಿ ಬಹುತೇಕ ಏರಿಳಿತಗಳು ಕಂಡು ಬಂದಿವೆ. ಅದೆಷ್ಟೋ ಖಾಸಗಿ ಕಂಪನಿಗಳು ಉತ್ಪಾದನೆಯನ್ನೇ ಬಂದ್ ಮಾಡಿದೆ. ಇದರಿಂದಾಗ ಹೂಡಿಕೆದಾರರು ಚಿನ್ನ ಮತ್ತು ಸರ್ಕಾರಿ ಬಾಂಡ್ ಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ.

ಚಿನ್ನದ ದರ ಕುಸಿತ: ಆಭರಣ ಪ್ರಿಯರಿಗೆ ಖುಷಿಯ ಸುದ್ದಿಚಿನ್ನದ ದರ ಕುಸಿತ: ಆಭರಣ ಪ್ರಿಯರಿಗೆ ಖುಷಿಯ ಸುದ್ದಿ

ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಕ್ಕೆ ಏರುತ್ತಿದೆ. ಜಾಗತಿಕ ಮಟ್ಟದಲ್ಲಷ್ಟೇ ಅಲ್ಲದೇ, ಭಾರತದಲ್ಲೂ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಇಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ.

ಸಿದ್ಧ ಬಂಗಾರ ಖರೀದಿಯ ಬೆಲೆ ಎಷ್ಟಾಗುತ್ತದೆ?

ಸಿದ್ಧ ಬಂಗಾರ ಖರೀದಿಯ ಬೆಲೆ ಎಷ್ಟಾಗುತ್ತದೆ?

ಬೆಂಗಳೂರಿನ ಜಯನಗರದಲ್ಲಿ ಇರುವ ಪ್ರತಿಷ್ಠಿತ ಮಳಿಗೆಯೊಂದರಲ್ಲಿನ ಚಿನ್ನದ ಬೆಲೆಯ ಪ್ರಕಾರ ಒಂದು ಗ್ರಾಂ ಸಿದ್ಧ ಚಿನ್ನದ ಆಭರಣ ಖರೀದಿಸಬೇಕಾದಲ್ಲಿ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.

ಉದಾಹರಣೆ:

1 ಗ್ರಾಂ ಚಿನ್ನದ ಒಡವೆ ಖರೀದಿಗೆ - 4,030 ರೂಪಾಯಿ

ಸರಾಸರಿ 15% ವೇಸ್ಟೇಜ್ - 604.50 ರೂಪಾಯಿ

ಮೇಕಿಂಜ್ ಚಾರ್ಜ್ 1 ಗ್ರಾಂಗೆ - 150 ರೂಪಾಯಿ

ಒಟ್ಟು - 4, 784 ರೂಪಾಯಿ

ಶೇ. 3ರಷ್ಟು GST - 143.50 ರೂಪಾಯಿ

ಒಂದು ಗ್ರಾಂ ಸಿದ್ಧ ಬಂಗಾರಕ್ಕೆ - 4927.50 ರೂಪಾಯಿ

ಫೆಬ್ರವರಿ.24ರ ಪ್ರಕಾರ 24 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ

ಫೆಬ್ರವರಿ.24ರ ಪ್ರಕಾರ 24 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ

ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ 43,000 ರೂಪಾಯಿ ಗಡಿ ದಾಟಿದ್ದು, ಬೆಂಗಳೂರಿನಲ್ಲೂ ಬಂಗಾರದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 4388 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 4,030 ರೂಪಾಯಿ ಆಗಿದೆ.

ಚಿನ್ನದ ಬೆಲೆಯಲ್ಲಿ ಆಗಿರುವ ಬದಲಾವಣೆ ಎಷ್ಟು?

ಚಿನ್ನದ ಬೆಲೆಯಲ್ಲಿ ಆಗಿರುವ ಬದಲಾವಣೆ ಎಷ್ಟು?

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 43, 880 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 40,300 ರೂಪಾಯಿ ಆಗಿದೆ. ಕಳೆದ ಒಂದೇ ದಿನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 290 ರೂಪಾಯಿ ಏರಿಕೆ ಕಂಡಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಹ 290 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 51,500 ರೂಪಾಯಿಗೆ ಏರಿಕೆಯಾಗಿದ್ದು, ನಿನ್ನೆಗೂ ಇಂದಿಗೂ 500 ರೂಪಾಯಿ ಬೆಲೆ ಏರಿಕೆಯಾಗಿದೆ.

ಡಾಲರ್ ಮೌಲ್ಯದ ಎದುರು ಪಾತಾಳಕ್ಕೆ ಕುಸಿದ ರೂಪಾಯಿ

ಡಾಲರ್ ಮೌಲ್ಯದ ಎದುರು ಪಾತಾಳಕ್ಕೆ ಕುಸಿದ ರೂಪಾಯಿ

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದರೆ ರೂಪಾಯಿ ಮೌಲ್ಯವು ಪಾತಾಳಕ್ಕೆ ಕುಸಿದಿದೆ. ರೂಪಾಯಿ ಮೌಲ್ಯ ಮೊದಲ ಬಾರಿಗೆ 71.98 ರೂಪಾಯಿಗೆ ಇಳಿಕೆ ಕಂಡಿದೆ. ಕಳೆದ ಜನವರಿ.08ರಂದು ಅತ್ಯಂತ ರೂಪಾಯಿ ಮೌಲ್ಯವು ಅತ್ಯಂತ ಕಡಿಮೆ ಎಂದರೂ 71.89 ರೂಪಾಯಿಗೆ ಇಳಿಕೆಯಾಗಿತ್ತು.

English summary
Coronavirus Effect: Peoples Invests In Gold And Government Bonds. Gold Rate Cross 43,000 Rupees In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X