ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆತಂಕ : ಕೆಎಸ್ಆರ್‌ಟಿಸಿಗೆ ಕೋಟಿ-ಕೋಟಿ ನಷ್ಟ

|
Google Oneindia Kannada News

ಬೆಂಗಳೂರು, ಮಾರ್ಚ್ 17 : ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣ ವಾಗಿದ್ದು ಸಾರಿಗೆ ಸಂಸ್ಥೆಗಳಿಗೆ ಅಪಾರವಾದ ನಷ್ಟ ಉಂಟಾಗಿದೆ.

ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ

ಕಳೆದ 15 ದಿನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 3.91 ಕೋಟಿ ರೂ. ನಷ್ಟವಾಗಿದೆ. ಹಲವು ಐಷಾರಾಮಿ ಮತ್ತು ಸಾಮಾನ್ಯ ಬಸ್‌ಗಳ ಸಂಚಾರವನ್ನು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಕೊರೊನಾ; ವ್ಯಾಪಾರ ವಹಿವಾಟಿಗೆ ಕತ್ತರಿ ಹಾಕಿದ ಬಂದ್ಕೊರೊನಾ; ವ್ಯಾಪಾರ ವಹಿವಾಟಿಗೆ ಕತ್ತರಿ ಹಾಕಿದ ಬಂದ್

ಮಾರ್ಚ್ 1ರಿಂದ 10ರ ತನಕ ಪ್ರಯಾಣಿಕರ ಸಂಖ್ಯೆಯಲ್ಲಿ ಅಲ್ಪ ಕುಸಿತವಾಗಿತ್ತು. ಮಾರ್ಚ್ 10ರ ಬಳಿಕ ಕೊರೊನಾ ಹರಡುವ ಆತಂಕ ಇನ್ನೂ ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆ ಭಾರೀ ಕುಸಿತಕಂಡಿದೆ. ಹಲವು ಐಷಾರಾಮಿ ಬಸ್‌ಗಳ ಸಂಚಾರ ಬಂದ್ ಆಗಿದೆ.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ? ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

ಪ್ರತಿದಿನ ಸಂಚಾರ ನಡೆಸುವ ಸಂಖ್ಯೆ ಮಾತ್ರವಲ್ಲ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಕುಸಿತಕಂಡಿದೆ. ಅದರಲ್ಲೂ ಹವಾನಿಯಂತ್ರಿತ ಬಸ್‌ಗಳಿಗೆ ಬೇಡಿಕೆ ತಗ್ಗಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 23 ಸಾವಿರ ಇರುತ್ತಿದ್ದ ಮುಂಗಡ ಟಿಕೆಟ್ ಬುಕ್ಕಿಂಗ್ 13 ಸಾವಿರಕ್ಕೆ ಕಡಿಮೆಯಾಗಿದೆ.

ಫ್ಲೈ ಬಸ್‌ಗೆ ಕೊರೊನಾ ಕಾಟ; ಏ.1ರಿಂದ ಅನಂತಪುರಕ್ಕೆ ಬಸ್ ಫ್ಲೈ ಬಸ್‌ಗೆ ಕೊರೊನಾ ಕಾಟ; ಏ.1ರಿಂದ ಅನಂತಪುರಕ್ಕೆ ಬಸ್

3.2 ಲಕ್ಷ ಕಿ. ಮೀ. ಸಂಚಾರ ರದ್ದು

3.2 ಲಕ್ಷ ಕಿ. ಮೀ. ಸಂಚಾರ ರದ್ದು

ಕಳೆದ 15 ದಿನದಲ್ಲಿ ಕೆಎಸ್ಆರ್‌ಟಿಸಿ ಸುಮಾರು 3.2 ಲಕ್ಷ ಕಿ. ಮೀ. ಸಂಚಾರವನ್ನು ರದ್ದುಗೊಳಿಸಿದೆ. ಸೋಮವಾರ 585 ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಇದುವರೆಗೂ 3.91 ಕೋಟಿ ರೂ. ನಷ್ಟ ಉಂಟಾಗಿದೆ.

2 ಲಕ್ಷ ಪ್ರಯಾಣಿಕರ ಸಂಚಾರ

2 ಲಕ್ಷ ಪ್ರಯಾಣಿಕರ ಸಂಚಾರ

ಕರ್ನಾಟಕ ಸರ್ಕಾರ ಶುಕ್ರವಾರದಿಂದ 1 ವಾರ ಮಾಲ್, ಚಿತ್ರಮಂದಿರ, ಪಬ್, ನೈಟ್ ಕ್ಲಬ್ ಮುಚ್ಚಲು ಆದೇಶ ನೀಡಿತ್ತು. ಶನಿವಾರ ಬೆಂಗಳೂರು ನಗರದಿಂದ 2 ಲಕ್ಷ ಜನರು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಪ್ರಯಾಣ ಮಾಡಿದ್ದಾರೆ. ಆದರೆ, ಭಾನುವಾರ ಪ್ರಯಾಣಿಕರ ಕೊರತೆಯಿಂದ 591ಬಸ್ ಸಂಚಾರ ರದ್ದುಗೊಂಡಿದೆ.

ಐಷಾರಾಮಿ ಬಸ್‌ಗಳಿಗೆ ಬೇಡಿಕೆ ಇಲ್ಲ

ಐಷಾರಾಮಿ ಬಸ್‌ಗಳಿಗೆ ಬೇಡಿಕೆ ಇಲ್ಲ

ದೂರದ ಊರುಗಳಿಗೆ ಪ್ರಯಾಣ ಮಾಡುವವರು ಬೇಸಿಗೆಯನ್ನು ಹವಾನಿಯಂತ್ರಿತ ಬಸ್‌ಗಳನ್ನು ಬುಕ್ ಮಾಡುತ್ತಿದ್ದರು. ಆದರೆ, ಸಾಮಾನ್ಯ ದಿನಗಳಲ್ಲಿ ಮುಂಗಡ ಬುಕ್ಕಿಂಗ್ 23 ಸಾವಿರದಿಂದ 13 ಸಾವಿರಕ್ಕೆ ಕುಸಿದಿದೆ. ಅದರಲ್ಲೂ ಐಷಾರಾಮಿ ಬಸ್‌ಗಳಿಗೆ ಬೇಡಿಕೆಯೇ ಇಲ್ಲವಾಗಿದೆ.

ಪ್ರಯಾಣಿಕರ‌ ಗಮನಕ್ಕೆ

ಪ್ರಯಾಣಿಕರ‌ ಗಮನಕ್ಕೆ

18.03.2020 ರಿಂದ‌ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ‌ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ Blanket and Bedspread ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತಿದೆ. ಸಾರ್ವಜನಿಕರು ತಾವೇ Blanket and Bedspread ತೆಗೆದುಕೊಂಡು‌ ಬರಲು ಕೋರಲಾಗಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

English summary
The Karnataka State Road Transport Corporation (KSRTC) suffered 3.91 crore loss in 15 days due to passengers shortage. Due to coronavirus effect people cancelled traveling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X