ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೆ ಹರಿದು ಬಂದ ದೇಣಿಗೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 15: "ಕೊರೊನಾ ನಿರ್ನಾಮಕ್ಕೆ ಪಣತೊಟ್ಟು ನಮ್ಮ ಜೊತೆ ಕೈಜೋಡಿಸಿ, ಉದಾರವಾಗಿ ದೇಣಿಗೆ ನೀಡಿ" ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಮನವಿಗೆ ರಾಜ್ಯದ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇದುವರೆಗೆ ಸಂಗ್ರಹವಾಗಿರುವ ಒಟ್ಟು ದೇಣಿಗೆ ಎಷ್ಟು ಎಂದು ಯಡಿಯೂರಪ್ಪನವರು ತಮ್ಮ ಅಧಿಕೃತ ಅಕೌಂಟ್ ನಿಂದ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಸಾರ್ವಜನಿಕರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು, ದೇಣಿಗೆ ನೀಡಲು ಏಕಕಾಲದಲ್ಲಿ ಮನವಿ ಮಾಡಿದ್ದರಿಂದ, ಹೆಚ್ಚಿನ ದೇಣಿಗೆ ರಾಜ್ಯದಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಹೋಗಿದೆ. ಹಾಗಾಗಿ, ಉತ್ತರ ಕರ್ನಾಟಕದ ಪ್ರವಾಹದ ವೇಳೆ, ಜನ ಸ್ಪಂದಿಸಿದಕ್ಕೆ ಹೋಲಿಸಿದರೆ, ಕೊರೊನಾ ಪರಿಹಾರ ನಿಧಿಗೆ ಬಂದ ದೇಣಿಗೆ ಮೊತ್ತ ಅಬ್ಬಬ್ಬಾ ಎಂದು ಹೇಳುವಂತಿಲ್ಲ.

 Corona CM Relief Fund: So Far Collected Rs. 138 Crores As On 15th April

ದಿನಾಂಕ 27 ಮಾರ್ಚ್ 2020 ರಿಂದ 15 ಏಪ್ರಿಲ್ 2020ರವರೆಗೆ, ಸಂಗ್ರಹಗೊಂಡಿರುವ ಮೊತ್ತ ಹೀಗಿದೆ:

ಇದುವರೆಗೆ ಸಂಗ್ರಹವಾಗಿರುವ ಮೊತ್ತ: ರೂ.137,39,87,587/-
ದಿನಾಂಕ 15.04.20ರಂದು ಸ್ವೀಕೃತಿಗೊಂಡಿರುವ ಚೆಕ್ ಮೊತ್ತ: ರೂ. 87,00,001/-
ಒಟ್ಟು ಸಂಗ್ರಹವಾಗಿರುವ ಮೊತ್ತ: ರೂ. 138,26,87,588/-

"#ಕೊರೊನ ಸೋಂಕನ್ನು ನಿರ್ನಾಮ ಮಾಡಲು 'ಮುಖ್ಯಮಂತ್ರಿಗಳ ಪರಿಹಾರ ನಿಧಿ #ಕೋವಿಡ್_19' ಅನ್ನು ಬಲಪಡಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಮಾಡಿದ ಮನವಿಗೆ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ.

ದಿನಾಂಕ 27 ಮಾರ್ಚ್ 2020 ರಿಂದ 09 ಏಪ್ರಿಲ್ 2020 ರ ವರೆಗೆ ಪರಿಹಾರ ನಿಧಿಗೆ ಹರಿದುಬಂದ ಒಟ್ಟು ಮೊತ್ತದ ವಿವರ ಇಂತಿದೆ" ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದರು.

English summary
Corona Karnataka Chief Minister Relief Fund: So Far Collected Rs. 138 Crores As On 15th April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X