ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 101 ಮಂದಿಗೆ ಕೊರೊನಾ: ಗುಣಮುಖರಾದವರೆಷ್ಟು?

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೇರಿದೆ. ಲಾಕ್‌ಡೌನ್ ಇದ್ದರೂ ಕೂಡ ಸೋಂಕಿತರ ಸಂಖ್ಯೆ ಈ ಮಟ್ಟಕ್ಕೇರುತ್ತಿದೆ. ಒಂದೊಮ್ಮೆ ಲಾಕ್‌ಡೌನ್ ಇಲ್ಲವಾದಲ್ಲಿ ಸ್ಥಿತಿ ಇನ್ನೂ ಗಂಭೀರವಾಗುತ್ತಿತ್ತು.

ಮಂಗಳವಾರ 10 ಮಂದಿಯಲ್ಲಿ ಸೋಂಕು ಕಂಡುಬಂದಿತ್ತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ ಆಗಿದೆ. ಗರ್ಭಿಣಿ ಸೇರಿ 88 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ರಾಜ್ಯದಲ್ಲಿ 43 ಶಂಕಿತರು ಪತ್ತೆಯಾಗಿದ್ದಾರೆ. 37,261 ಮಂದಿಯ ಕ್ವಾರಂಟೈಟೇನ್ ಪೂರ್ಣಗೊಂಡಿದ್ದು, ಇನ್ನೂ 25,382 ಮಂದಿ ಹೋಮ್ ಕ್ವಾರಂಟೈಟೇನ್‍ನಲ್ಲಿ ಇದ್ದಾರೆ. ಇವರೆಲ್ಲರ ಕೈಗೆ ಸೀಲ್ ಹಾಕಲಾಗಿದೆ.

ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ

ಕರ್ನಾಟಕದಲ್ಲಿ ಒಟ್ಟು ಪತ್ತೆ ಮಾಡಲಾಗಿರುವ 101 ಪ್ರಕರಣಗಳಲ್ಲಿ 6 ಪ್ರಕರಣಗಳು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕರ್ನಾಟಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈ ದಿನದವರೆಗೆ, 1,28,315 ಹೊರದೇಶದಿಂದ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ.

ಹೋಮ್ ಕ್ವಾರೆಂಟೈನ್ ಜಾರಿ ತಂಡದವರು, ಸಾರ್ವಜನಿಕರಿಂದ ಪಡೆದ ದೂರುಗಳ ಮೇರೆಗೆ ಸೋಮವಾರ 49 ವ್ಯಕ್ತಿಗಳನ್ನು ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

1-8ರವರೆಗಿನ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

1-8ರವರೆಗಿನ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

ರೋಗಿಗಳಾದ 1, 2, 3, 4, 5, 7, 8 ಮತ್ತು 12 ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ರೋಗಿ 6, 53 ಹಾಗೂ 60 ಮರಣ ಹೊಂದಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ದಾಖಲು

ಎಲ್ಲೆಲ್ಲಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಒಟ್ಟು 45 ಮಂದಿಗೆ ಕೊರೊನಾ ಸೋಂಕು ತಗುಲಿದೆ.ನಂಜನಗೂಡು, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟೀವ್ ಕಂಡುಬಂದಿದೆ. ಬೆಂಗಳೂರಿನ ಇಬ್ಬರಿಗೆ, ಕಲಬುರಗಿ, ಗೌರಿಬಿದನೂರು, ಭಟ್ಕಳದ ತಲಾ ಒಬ್ಬರಲ್ಲಿ ಇಂದು ಸೋಂಕು ಕಂಡುಬಂದಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಮರಳಿದ್ದರೆ, ಐವರು ಸೋಂಕಿತರಿಂದ ಸೋಂಕಿಗೆ ತುತ್ತಾಗಿದ್ದಾರೆ. ಒಬ್ಬರ ಟ್ರಾವೆಲ್ ಹಿಸ್ಟರಿ ತಿಳಿದುಬರಬೇಕಿದೆ.
ರೋಗಿ ನಂ.89: ಹೊಸಪೇಟೆ ನಿವಾಸಿ

ರೋಗಿ ನಂ.89: ಹೊಸಪೇಟೆ ನಿವಾಸಿ

ರೋಗಿ 89: 52 ವರ್ಷದ ಪುರುಷ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ 90: 48 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ 91 ಇವರೂ ಹೊಸಪೇಟೆ ನಿವಾಸಿ

ರೋಗಿ 91 ಇವರೂ ಹೊಸಪೇಟೆ ನಿವಾಸಿ

ರೋಗಿ 91: 26 ವರ್ಷದ ಮಹಿಳೆ, ಹೊಸಪೇಟೆ-ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಮಾರ್ಚ್ 16ರಂದು ಬೆಂಗಳೂರು ಜಿಲ್ಲೆಗೆ ಪ್ರಯಾಣಿಸಿದ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ಉಳಿದ ರೋಗಿಗಳ ಬಗ್ಗೆ ಮಾಹಿತಿ

ಉಳಿದ ರೋಗಿಗಳ ಬಗ್ಗೆ ಮಾಹಿತಿ

ರೋಗಿ 92: 40 ವರ್ಷದ ಪುರುಷ, ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು (ಪ್ರಕರಣ 59-ಗಂಡ). ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ 93: 19 ವರ್ಷದ ಪುರುಷ, ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು, ನ್ಯೂಯಾರ್ಕ್, ಯು.ಎಸ್.ಎ.ದಿಂದ ಮಾರ್ಚ್ 22ರಂದು ಭಾರತಕ್ಕೆ ವಾಪಸ್ ಆಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ ನಂಬರ್ 94-98

ರೋಗಿ ನಂಬರ್ 94-98

ರೋಗಿ 94: 40 ವರ್ಷದ ಮಹಿಳೆ, ಗೌರಿಬಿದನೂರು-ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಯಾಗಿರುತ್ತಾರೆ.
ರೋಗಿ 95: 35 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 52 ಸಂಪರ್ಕಿತ).
ರೋಗಿ 96: 41 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 52 ಸಂಪರ್ಕಿತ).
ರೋಗಿ 97: 34 ವರ್ಷದ ಪುರುಷ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ.
ರೋಗಿ 98: 26 ವರ್ಷದ ಪುರುಷ, ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 20ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ.

ರೋಗಿ 99-101 ಮಾಹಿತಿ

ರೋಗಿ 99-101 ಮಾಹಿತಿ

ರೋಗಿ 99: 60 ವರ್ಷದ ಮಹಿಳೆ, ಕಲಬುರಗಿ ಜಿಲ್ಲೆಯ ನಿವಾಸಿಯಾಗಿರುತ್ತಾರೆ (ಪ್ರಕರಣ 9 ಪತ್ನಿ). ಇವರನ್ನು ಕಲಬುರಗಿಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ 100: 40 ವರ್ಷದ ಪುರುಷ, ಬಿಬಿಎಂಪಿ- ಬೆಂಗಳೂರಿನ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಬೆಳಸಿ ಮಾರ್ಚ್ 20ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನಲೆ ಇರುತ್ತದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ 101: 62 ವರ್ಷದ ಮಹಿಳೆ, ಬೆಂಗಳೂರಿನ ನಿವಾಸಿಯಾಗಿರುತ್ತಾರೆ. ವಿವರವಾದ ವೈದ್ಯಕೀಯ ತನಿಖೆಯು ಪ್ರಗತಿಯಲ್ಲಿರುತ್ತದೆ ಮತ್ತು ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

English summary
The 10 new cases of Coronavirus have been reported in Karnataka As On Tuesday. Taking the total number of the infected in the state to 101.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X