ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ ಕಾವೇರಿ, ಈಗ ಕೊರೊನಾ; ಕರ್ನಾಟಕ, ತಮಿಳುನಾಡು ಬಸ್ ರದ್ದು

|
Google Oneindia Kannada News

ಬೆಂಗಳೂರು, ಮಾರ್ಚ್ 19 : ಕಾವೇರಿ ವಿಚಾರದಲ್ಲಿ ಗಲಾಟೆಗಳು ನಡೆದಾಗ ಕರ್ನಾಟಕ, ತಮಿಳುನಾಡು ನಡುವೆ ಸರ್ಕಾರ ಬಸ್ ಸಂಚಾರ ಸ್ಥಗಿತವಾಗುತ್ತಿತ್ತು. ಈಗ ಕೊರೊನಾ ಭೀತಿ ಹಿನ್ನಲೆಯಲ್ಲಿ ಬಸ್ ಸಂಚಾರ ಕಡಿಮೆಯಾಗಿದೆ, ರದ್ದು ಸಹ ಆಗಿದೆ.

ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲು ಅಧಿಕೃತ ಆದೇಶ ಇಲ್ಲ. ಆದರೆ, ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಬಸ್‌ ಸಂಚಾರ ಕಡಿಮೆಯಾಗಿದೆ. ಹಲವು ಐಷಾರಾಮಿ ಬಸ್‌ಗಳ ಸೇವೆಗಳು ಸ್ಥಗಿತಗೊಂಡಿದೆ.

ಕೊರೊನಾ ಆತಂಕ : ಕೆಎಸ್ಆರ್‌ಟಿಸಿಗೆ ಕೋಟಿ-ಕೋಟಿ ನಷ್ಟಕೊರೊನಾ ಆತಂಕ : ಕೆಎಸ್ಆರ್‌ಟಿಸಿಗೆ ಕೋಟಿ-ಕೋಟಿ ನಷ್ಟ

ಧರ್ಮಪುರಿ-ಕೃಷ್ಣಗಿರಿ-ಹೊಸೂರು ನಡುವೆ ಸಂಚಾರ ನಡೆಸುವ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಉಭಯ ರಾಜ್ಯಗಳ ನಡುವೆ ಸಂಚರಿಸುವ 100ಕ್ಕೂ ಅಧಿಕ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಮಾರ್ಚ್ 31ರ ತನಕ ಬಂದ್ ವಿಸ್ತರಣೆ; ಏನಿರುತ್ತೆ ಎಂದು ತಿಳಿಯಿರಿಮಾರ್ಚ್ 31ರ ತನಕ ಬಂದ್ ವಿಸ್ತರಣೆ; ಏನಿರುತ್ತೆ ಎಂದು ತಿಳಿಯಿರಿ

ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳನ್ನು ಸ್ಥಗಿತಗೊಳಿಸಿದೆ. ಮತ್ತೊಂದು ಕಡೆ ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಕೆಲವು ಮಾರ್ಗದ ಸಂಚಾರವನ್ನು ಸಂಪೂರ್ಣ ನಿಲ್ಲಿಸಿದೆ. ಕೆಲವು ಮಾರ್ಗದಲ್ಲಿ ಬಸ್ ಸಂಖ್ಯೆ ಕಡಿತಗೊಳಿಸಿದೆ.

ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ

ದಿನಕ್ಕೆ 15 ಲಕ್ಷ ರೂ. ನಷ್ಟ

ದಿನಕ್ಕೆ 15 ಲಕ್ಷ ರೂ. ನಷ್ಟ

ಕೆಎಸ್ಆರ್‌ಟಿಸಿಯ ಚಿಕ್ಕಮಗಳೂರು ವಿಭಾಗ 30 ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದೆ. ಪ್ರತಿದಿನ ಜಿಲ್ಲೆಯಲ್ಲಿ 50 ಸಾವಿರ ಜನರು ಬಸ್‌ ಬಳಕೆ ಮಾಡುತ್ತಿದ್ದರು. ಈಗ ಅದು 35 ಸಾವಿರಕ್ಕೆ ಕಡಿತಗೊಂಡಿದೆ. ಇದರಿಂದಾಗಿ ಪ್ರತಿದಿನ 15 ಲಕ್ಷ ರೂ. ನಷ್ಟವಾಗುತ್ತಿದೆ.

ಬೆಂಗಳೂರು-ತಮಿಳುನಾಡು

ಬೆಂಗಳೂರು-ತಮಿಳುನಾಡು

ತಮಿಳುನಾಡು-ಬೆಂಗಳೂರು, ಬೆಂಗಳೂರು-ತಮಿಳುನಾಡು ನಡುವೆ ಸಂಚಾರ ನಡೆಸುವ ಬಸ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರಲ್ಲಿ ಮಾಲ್, ಪಬ್, ಚಿತ್ರಮಂದಿರಗಳು ಬಂದ್ ಆಗಿದ್ದು, ನಗರಕ್ಕೆ ಆಗಮಿಸುವವರ ಸಂಖ್ಯೆಯೂ ಇಳಿದಿದೆ. ಕೃಷ್ಣಗಿರಿ ಮತ್ತು ಹೊಸೂರಿಗೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಕಡಿಮೆಯಾಗಿದೆ.

ತಮಿಳುನಾಡಿನಿಂದ ಬಸ್‌ ಇಲ್ಲ

ತಮಿಳುನಾಡಿನಿಂದ ಬಸ್‌ ಇಲ್ಲ

ಕರ್ನಾಟಕ ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟ ಬಳಿಕ ನೀಲಗಿರಿ ಬೆಟ್ಟದಿಂದ ಕರ್ನಾಟಕ, ಕೇರಳಕ್ಕೆ ಬಸ್ ಸಂಚಾರವನ್ನು ತಮಿಳುನಾಡು ನಿಲ್ಲಿಸಿದೆ. ಪ್ರವಾಸಿಗರು ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿಯನ್ನು ನೀಡುತ್ತಿಲ್ಲ.

ಪ್ರೀಮಿಯಂ ಬಸ್ ಸೇವೆ ಇಲ್ಲ

ಪ್ರೀಮಿಯಂ ಬಸ್ ಸೇವೆ ಇಲ್ಲ

ಕರ್ನಾಟಕ-ತಮಿಳುನಾಡು ನಡುವಿನ ಪ್ರೀಮಿಯಂ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 20 ರಷ್ಟು ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ.

English summary
Due to Coronavirus outbreak bus services between Karnataka and Tamil Nadu and vice versa have been cut down drastically or have been completely stopped in some cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X