ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಾದ್ಯಂತ ಕೊರೊನಾ ವೈರಸ್ ಸೋಂಕು ಹರಡಲು 121 ಯುನೀಕ್ ಸ್ಪ್ರೆಡರ್ಸ್ ಕಾರಣ!

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 2,158 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ 680 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 43 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1433 ಸಕ್ರಿಯ ಪ್ರಕರಣಗಳಿವೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಅಂದ್ಹಾಗೆ, ರಾಜ್ಯಾದ್ಯಂತ ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡಲು 121 ಮಂದಿ ಕಾರಣವಾಗಿದ್ದಾರೆ. ಆ 121 ಮಂದಿಯನ್ನು 'ಯುನೀಕ್ ಸ್ಪ್ರೆಡರ್ಸ್' ಎಂದು ಆರೋಗ್ಯ ಇಲಾಖೆ ಗುರುತಿಸಿದೆ.

13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!

ಅಸಲಿಗೆ, ಈ ಯುನೀಕ್ ಸ್ಪ್ರೆಡರ್ಸ್ ಅಂದ್ರೇನು.? ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಜನ ಯುನೀಕ್ ಸ್ಪ್ರೆಡರ್ಸ್ ಇದ್ದಾರೆ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಯುನೀಕ್ ಸ್ಪ್ರೆಡರ್ಸ್ ಅಂದ್ರೇನು.?

ಯುನೀಕ್ ಸ್ಪ್ರೆಡರ್ಸ್ ಅಂದ್ರೇನು.?

ಕರ್ನಾಟಕದಲ್ಲಿ ಇಲ್ಲಿಯವರೆಗೂ 121 ಮಂದಿಯನ್ನು 'ಯುನೀಕ್ ಸ್ಪ್ರೆಡರ್ಸ್' ಎಂದು ಗುರುತಿಸಲಾಗಿದೆ. ಕನಿಷ್ಠ ಆರು ಮಂದಿಗೆ ಸೋಂಕು ಹರಡಿಸುವ ಸೋಂಕಿತನನ್ನು 'ಯುನೀಕ್ ಸ್ಪ್ರೆಡರ್' ಎಂದು ಕರೆಯಲಾಗುತ್ತಿದೆ. ರಾಜ್ಯಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು 'ಯುನೀಕ್ ಸ್ಪ್ರೆಡರ್ಸ್' ಕಾರಣ ಅಂತ ಹೇಳಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಯುನೀಕ್ ಸ್ಪ್ರೆಡರ್ಸ್.?

ಯಾವ ಜಿಲ್ಲೆಯಲ್ಲಿ ಎಷ್ಟು ಯುನೀಕ್ ಸ್ಪ್ರೆಡರ್ಸ್.?

ಬೆಂಗಳೂರು ಒಂದರಲ್ಲೇ ಅತೀ ಹೆಚ್ಚು 'ಯುನೀಕ್ ಸ್ಪ್ರೆಡರ್ಸ್' (29) ಇದ್ದಾರೆ. ಕಲಬುರ್ಗಿಯಲ್ಲಿ 19 ಯುನೀಕ್ ಸ್ಪ್ರೆಡರ್ಸ್ ಕಂಡುಬಂದಿದ್ದರೆ, ಬೀದರ್‌ ನಲ್ಲಿ 11 ಯುನೀಕ್ ಸ್ಪ್ರೆಡರ್ಸ್ ಪತ್ತೆಯಾಗಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್-19 ಚಿಕಿತ್ಸೆಯ ಬಿಲ್: ಅಬ್ಬಬ್ಬಾ ಇಷ್ಟೊಂದಾ?!ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್-19 ಚಿಕಿತ್ಸೆಯ ಬಿಲ್: ಅಬ್ಬಬ್ಬಾ ಇಷ್ಟೊಂದಾ?!

ಹೆಚ್ಚಾಗಿದೆ ಆತಂಕ

ಹೆಚ್ಚಾಗಿದೆ ಆತಂಕ

ಯುನೀಕ್ ಸ್ಪ್ರೆಡರ್ ಗಳಿಂದ ರಾಜ್ಯದಲ್ಲೀಗ ಆತಂಕ ಹೆಚ್ಚಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

'ಸೂಪರ್ ಸ್ಪ್ರೆಡರ್ಸ್' ಕೂಡ ಇದ್ದಾರೆ

'ಸೂಪರ್ ಸ್ಪ್ರೆಡರ್ಸ್' ಕೂಡ ಇದ್ದಾರೆ

ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ಹರಡುವ ವ್ಯಕ್ತಿಯನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಪರಿಗಣಿಸಲಾಗಿದೆ. ದೈನಂದಿನ ಹೆಚ್ಚು ಜನರ ಸಂಪರ್ಕಕ್ಕೆ ಬರುವವರು 'ಸೂಪರ್ ಸ್ಪ್ರೆಡರ್' ಆಗುವ ಸಾಧ್ಯತೆ ಹೆಚ್ಚು. ತುಂಬು ಕುಟುಂಬದಲ್ಲಿ ಇರುವವರು, ತರಕಾರಿ ಅಥವಾ ಇತರೆ ಅವಶ್ಯ ವಸ್ತುಗಳ ಮಾರಾಟಗಾರರು, ಡೆಲಿವರಿ ಬಾಯ್ಸ್, ಕಚೇರಿಯಲ್ಲಿ ಕೆಲಸ ಮಾಡುವವರು 'ಸೂಪರ್ ಸ್ಪ್ರೆಡರ್' ವರ್ಗಕ್ಕೆ ಸೇರುತ್ತಾರೆ.


English summary
Coronavirus: 121 people identified as Unique Spreaders in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X