ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರೂ ಇಲ್ಲ ಉದ್ಯೋಗ ಭದ್ರತೆ!

|
Google Oneindia Kannada News

ಬೆಂಗಳೂರು, ಮೇ.12: ಕೊರೊನಾ ವಾರಿಯರ್ಸ್. ಭಾರತ ಲಾಕ್ ಡೌನ್ ನಡುವೆ ನೊವೆಲ್ ಕೊರೊನಾ ವೈರಸ್ ವಿರುದ್ಧ ಸೋಂಕಿತರನ್ನು ರಕ್ಷಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಮನೆ, ಮಕ್ಕಳನ್ನು ಮರೆತು ದೇಶದ ಒಳಿತಿಗೆ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿ ಸ್ಮರಿಸಬೇಕಿದೆ.

ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕೊರೊನಾ ವಾರಿಯರ್ಸ್ ಗೆ ದೇಶಾದ್ಯಂತ ಹೂವಿನ ಮಳೆಗರೆಯಲಾಗುತ್ತಿದೆ. ಆದರೆ ಕೊರೊನಾ ವಾರಿಯರ್ಸ್ ಕೂಡಾ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಸರ್ಕಾರ ನೀಡುತ್ತಿರುವ ವೇತನ ಸಾಕಾಗುತ್ತಿಲ್ಲ.

ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ? ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?

ಮೇ.14ರಂದು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಖಾಯಮೇತರ ನೌಕರರ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ ಉದ್ದೇಶ ಹಾಗೂ ಬೇಡಿಕೆಗಳೇನು ಎಂಬುದರ ಪ್ರಮುಖ ಅಂಶಗಳು ಇಲ್ಲಿವೆ.

Corona Warriors Protest Against Job Security On May.14

ಉದ್ಯೋಗ ಭದ್ರತೆಯಿಲ್ಲದ ವಾರಿಯರ್ಸ್ ಬೇಡಿಕೆ:

- ಕಂಟೇನ್ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್ ಗಳನ್ನು ವಿತರಿಸಿ

- ಎಲ್ಲಾ ಸಿಬ್ಬಂದಿಗೆ ಆಗಿಂದಾಗ್ಲೆ ಉಚಿತ ಕೊವಿಡ್-19 ಪರೀಕ್ಷೆ ಮಾಡಿಸಿ

- ರೂ.50 ಲಕ್ಷ ವಿಮೆಯನ್ನು ಕರ್ತವ್ಯದಲ್ಲಿದ್ದಾಗ ಯಾವುದೇ ರೀತಿಯಲ್ಲಿ ಮರಣ ಹೊಂದಿದವರಿಗೆ ಮತ್ತು ಅವರ ಇಡೀ ಕುಟುಂಬದ ಸದಸ್ಯರಿಗೂ ಜಾರಿ ಮಾಡಿ

ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?ವಿಶ್ವ ದಾದಿಯರ ದಿನ: ಕೇವಲ ಕೊರೊನಾ ಯೋಧರು ಎಂದು ಕರೆದರೆ ಸಾಕೇ?

- ಕೊವಿಡ್-19 ಕರ್ತವ್ಯದಲ್ಲಿರುವ ಎಲ್ಲಾ ಎನ್ ಹೆಚ್ ಎಂ ಗುತ್ತಿಗೆ/ಸ್ಕೀಂ ನೌಕರರಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 25,000 ರೂಪಾಯಿ ಪ್ರೊತ್ಸಾಹ ಧನ ನೀಡಿ

- ಕೊವಿಡ್-19 ಸೋಂಕಿತರಾದ ಸಿಬ್ಬಂದಿಗೆ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ ಕೊಡಿ

- ಕೊವಿಡ್-19 ಕರ್ತವ್ಯದಲ್ಲಿರುವ ಎಲ್ಲಾ ಎನ್ ಹೆಚ್ ಎಂ ಗುತ್ತಿಗೆ/ಸ್ಕೀಂ ನೌಕರರಿಗೆ ಉಚಿತ ಪಡಿತರ ಮತ್ತು ಆಹಾರ ನೀಡಿ

ಆರೋಗ್ಯ ಇಲಾಖೆ ಸೈನಿಕರ ಸೇವೆ ಹಾಗೂ ಸಂಬಳ ನಡುವಿನ ವ್ಯತ್ಯಾಸ ಆರೋಗ್ಯ ಇಲಾಖೆ ಸೈನಿಕರ ಸೇವೆ ಹಾಗೂ ಸಂಬಳ ನಡುವಿನ ವ್ಯತ್ಯಾಸ

- ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ 7,500 ರೂಪಾಯಿ ಕೊಡಿ

- ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಜಿಡಿಪಿಯ ಶೇ.5ನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಮೀಸಲಿಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಖಾಸಗೀಕರಣವನ್ನು ನಿಲ್ಲಿಸಿ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಶಾಸನವನ್ನು ರಚಿಸಿ.

English summary
Corona Warriors Protest Against Job Security On May.14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X