ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಕ್ಸಿನ್ ಅಭಾವ: ಲಸಿಕೆ‌ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 12: ಈಗ ದೇಶಾದ್ಯಂತ ಎದ್ದಿರುವ ಲಸಿಕೆ ಅಭಾವಕ್ಕೆ ಕರ್ನಾಟಕ ಬಿಜೆಪಿ ಘಟಕ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಕಾರಣ ಎಂದು ದೂರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ನಿರಾತಂಕವಾಗಿ ನಡೆಯುತ್ತಿದ್ದ ಲಸಿಕೆ‌ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್. ಜನರ ಮನಸಿನಲ್ಲಿ ಹುಳಿ ಹಿಂಡಿದ #ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು. ಜನರಿಗೆ ಆತ್ಮ ಸ್ಥೈರ್ಯ ತುಂಬುವ ಒಂದು ಕೆಲಸವನ್ನಾದರೂ @INCKarnataka ಮಾಡಿದೆಯೇ?"ಎಂದು ಬಿಜೆಪಿ ಪ್ರಶ್ನಿಸಿದೆ.

 ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್ ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್

"ನಾನು ಅಕ್ಕಿ ಕೊಟ್ಟೆ, ಇಂದಿರಾ ಕ್ಯಾಂಟೀನಲ್ಲಿ ಊಟ ಕೊಟ್ಟೆ ನಾನು, ನಾನು, ನಾನು..! ಏನು ನಿಮ್ಮ‌ ಪಿತ್ರಾರ್ಜಿತ ಆಸ್ತಿಯ ದುಡ್ಡಿನಲ್ಲಿ ಕೊಟ್ಟಿದ್ದೇ @siddaramaiah? ಎಲ್ಲದಕ್ಕೂ ನಾನು ಎನ್ನುವ @INCKarnataka ಪಕ್ಷದ ನಾಯಕರು ಕೋವಿಡ್‌ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮಾಡಿದ್ದೇನು" ಎಂದು ಬಿಜೆಪಿ ಪ್ರಶ್ನಿಸಿದೆ.

Corona Vaccine Shortage, Because Of Wrong Information Spreaded By Congress And Siddaramaiah

"ವ್ಯಾಕ್ಸಿನ್ ಬಾಕ್ಸ್ ಮೇಲೆ ಪ್ರಧಾನಿ ಚಿತ್ರ ಏಕೆ, ಕೋವಿಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಏಕೆ ಎಂದು ಪ್ರಶ್ನಿಸಿದ್ದ @siddaramaiah ಮಾಡಿದ್ದೇನು? ಬಡವರಿಗೆ ಕೊಡುವ ದಿನಸಿ ಚೀಲದ ಮೇಲೆ ಪುತ್ರನ ಚಿತ್ರ ಹಾಕಿದ್ದು ಎಷ್ಟು ಸರಿ? ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಅಲ್ವೇ #ಬುರುಡೆರಾಮಯ್ಯ?"ಎಂದು ಬಿಜೆಪಿ, ಕಾಂಗ್ರೆಸ್ ಅನ್ನು ದೂಷಿಸಿದೆ.

"ಲಸಿಕೆ ಹಾಕುವುದು ಎಂದರೆ, ಭ್ರಷ್ಟಾಚಾರ ಮಾಡಿ ದುಡ್ಡು ಹೊಡೆದಷ್ಟು ಸುಲಭ ಎಂದುಕೊಂಡಿರಾ @DKShivakumar? ಲಸಿಕಾಕರಣ ಎನ್ನುವುದೊಂದು ಬೃಹತ್ ಅಭಿಯಾನ. ನೀವು ಕೇಳಿದ ತಕ್ಷಣ ಬ್ಲೂ ಪ್ರಿಂಟ್ ಕೊಟ್ಟು ಬಿಡುವುದಕ್ಕೆ ಇದೇನು ನಿಮ್ಮ ರಾಜಕೀಯ ಪೂರ್ವದ ವೃತ್ತಿ ಅಂದುಕೊಂಡಿದ್ದೀರಾ?" ಎಂದು ಕೆಪಿಸಿಸಿ ಅಧ್ಯಕ್ಷರನ್ನು ಬಿಜೆಪಿ ಟೀಕಿಸಿದೆ.

 ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ಮಾದರಿ: ಏನಿದು 'ಮುಂಬೈ ಮಾಡೆಲ್', ಯಾರಿದರ ನಾಯಕ? ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ಮಾದರಿ: ಏನಿದು 'ಮುಂಬೈ ಮಾಡೆಲ್', ಯಾರಿದರ ನಾಯಕ?

"ಅಪಪ್ರಚಾರ ಮತ್ತು ಸುಳ್ಳು ಮಾಹಿತಿಗಳ ಮೂಲಕ, ಕೋವಿಡ್ ವಿರುದ್ಧ ಹೋರಾಡುತ್ತಿರುವ ದೇಶದ ಒಗ್ಗಟ್ಟನ್ನು ಕಾಂಗ್ರೆಸ್ ಹಳಿ ತಪ್ಪಿಸುತ್ತಿದೆ. ಬಿಜೆಪಿ ಅಧ್ಯಕ್ಷರಾದ ಶ್ರೀ @JPNadda ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನ ಕುತಂತ್ರವನ್ನು‌ ಬಟಾಬಯಲಾಗಿಸಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದಾರೆ.

Recommended Video

ಬಡವರ ಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ! | Oneindia Kannada

English summary
Corona Vaccine Shortage, Because Of Wrong Information Spreaded By Congress And Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X