ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕವಚ: 65 ವರ್ಷ ಮೇಲ್ಪಟ್ಟವರಿಗೂ ವಿಮೆ ಸೌಲಭ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಕೊರೊನಾ ಕವಚ ಯೋಜನೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೂ ವಿಮಾದಾರರ ವಿಮೆ ನೀತಿ ಮತ್ತು ಅಪಾಯವನ್ನು ಆಧರಿಸಿ ವೈದ್ಯಕೀಯ ಇನ್ಷೂರೆನ್ಸ್ ನೀಡಲಾಗುತ್ತದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ) ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಈ ಯೋಜನೆಯಲ್ಲಿ 3.5-9.5 ತಿಂಗಳುಗಳವರೆಗೆ 50,000 ರಿಂದ 5 ಲಕ್ಷ ರೂ. ಅಲ್ಲದೆ, ಆರೋಗ್ಯ ಕಾರ್ಯಕರ್ತರಿಗೆ ಪ್ರೀಮಿಯಂ ಮೇಲೆ ಶೇ.5ರ ರಿಯಾಯಿತಿ ಇತ್ತು. ಅಂತಹ ಪಾಲಿಸಿಗಳ ಪ್ರೀಮಿಯಂ ಅನ್ನು ಅಡ್ಡ-ಸಬ್ಸಿಡಿ ಮಾಡಬೇಕಾಗಿರುವುದರಿಂದ ಉಚಿತವಾಗಿ ವಿಮೆಯನ್ನು ಒದಗಿಸುವುದು ಸಾಧ್ಯವಿಲ್ಲ ಎಂದು ನಿಯಂತ್ರಕ ಪ್ರಾಧಿಕಾರ ಹೇಳಿದೆ. ಹಿರಿಯ ನಾಗರಿಕರಿಗೆ ಉಚಿತವಾಗಿ ಇಲ್ಲವೇ ಕೈಗೆಟಕುವ ದರದಲ್ಲಿ ವೈದ್ಯಕೀಯ ವಿಮೆ ನೀಡುವುದಾಗಿ ಹೇಳಿದೆ.

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 96,424ಕ್ಕೆ ಏರಿಕೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 96,424ಕ್ಕೆ ಏರಿಕೆ

ಹಿರಿಯ ನಾಗರಿಕರು ಕಡಿಮೆ ಪ್ರೀಮಿಯಂ ಪಾವತಿಸಬೇಕಾದರೆ, ಪಾಲಿಸಿಯ ವೆಚ್ಚದಲ್ಲಿನ ವ್ಯತ್ಯಾಸವನ್ನು ಕಿರಿಯ ಜನರಿಂದ ಅಡ್ಡ-ಸಬ್ಸಿಡಿ ಮಾಡಬೇಕಾಗುತ್ತದೆ. ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ತೀರಾ ಕಡಿಮೆಯಿರುತ್ತದೆ ಎಂದು ಐಆರ್ ಡಿಎಐ ಹೇಳಿದೆ.

Corona Kavach Offers Insurance For Citizens Above 65 Years

Recommended Video

Sandalwood Drug mafia ವಿಚಾರವಾಗಿ Akul , santosh ,yuvarajಗೆ CCB ಬುಲಾವ್ | Oneindia Kannada

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹೇಳಿಕೆ ನೀಡಿರುವ ಐಆರ್ ಡಿಎಐ, ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದೆ.

English summary
Medical insurance for Covid-19 under the Corona Kavach policy is offered to all people at least up to the age of 65. For those above that age group, it is offered based on the insurers’ underwriting policy and risk appetite, the Insurance Regulatory and Development Authority of India (IRDAI) told the Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X