• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮತ್ತೆ ಏರುತ್ತಿದೆ ಕೊರೋನಾ, ಎಲ್ಲಿ ಪಾಸಿಟಿವಿಟಿ ಪ್ರಮಾಣ ಅಧಿಕ ಗೊತ್ತಾ?

|
Google Oneindia Kannada News

ಧಾರವಾಡ, ಆಗಸ್ಟ್‌ 12: ಕೋವಿಡ್‌ 19ನಿಂದ ಈಗ ಸ್ವಲ್ವ ನಿರಾಳರಾಗಿದ್ದಾರೆ. ಆದರೆ ದೇಶದ ವಿವಿಧೆಡೆ ಕೊರೋನಾ ಮತ್ತೆ ಜೋರಾಗಿಯೇ ಸದ್ದು ಮಾಡುತ್ತಿದೆ. ಹೀಗೆ ಮುಂದುವರಿದರೆ ಮತ್ತೆ ಜನರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಬೆಳವಣಿಗೆಗಳನ್ನು ಗಮನಿಸಿಯೇ ಇತ್ತೀಚೆಗೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಕರ್ನಾಟಕ ಆರೋಗ್ಯ ಇಲಾಖೆಗೆ ಪತ್ರ ಬರೆದು ಲಸಿಕೆ ಹಾಗೂ ಕೋವಿಡ್‌ ಪರೀಕ್ಷಾ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ ಜನರು ಜಾಸ್ತಿ ಸಮೂಹ ಸೇರದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಕಳೆದ 24 ಗಂಟೆಗಳಲ್ಲಿ 1691 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳು 10,0054 ಇದ್ದು, 6 ಸಾವು ವರದಿಯಾಗಿವೆ.

Breaking: ಕರ್ನಾಟಕದಲ್ಲಿ 3ನೇ ಡೋಸ್ ಕೋವಿಡ್ ಲಸಿಕೆ ಪಡೆದವರು ಎಷ್ಟು?Breaking: ಕರ್ನಾಟಕದಲ್ಲಿ 3ನೇ ಡೋಸ್ ಕೋವಿಡ್ ಲಸಿಕೆ ಪಡೆದವರು ಎಷ್ಟು?

ಒಂದು ವರ್ಷದ ನಂತರ ಧಾರವಾಡ ಜಿಲ್ಲೆಯಲ್ಲಿ ದೈನಂದಿನ ಕೋವಿಡ್ 19 ಪಾಸಿಟಿವಿಟಿ ಪ್ರಮಾಣ ನಿಧಾನವಾಗಿ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ದೈನಂದಿನ ಪಾಸಿಟಿವಿಟಿ (ಹರಡುವಿಕೆ) ದರವು 1-2% ಅನ್ನು ದಾಟಿಲ್ಲ. ಆದರೆ, ಸೋಮವಾರ ಜಿಲ್ಲೆಯಲ್ಲಿ ಶೇ.11.09ರಷ್ಟು ಪಾಸಿಟಿವಿಟಿ ಪ್ರಮಾಣ ದಾಖಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಜತೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತವನ್ನು ಆತಂಕಕ್ಕೆ ದೂಡಿದೆ.

ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ನಿಯಮಾವಳಿಗಳನ್ನು ಇನ್ನೂ ಅನುಸರಿಸದ ಕಾರಣ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಜಿಲ್ಲಾಡಳಿತವು ಪರಿಸ್ಥಿತಿಯನ್ನು ಪರಿಶೀಲಿಸಲು ನಿರ್ಧರಿಸಿದೆ ಮತ್ತು ಬೂಸ್ಟರ್‌ ಡೋಸ್‌ಗಳ 100% ಲಸಿಕಾಕರಣ ಸಾಧಿಸುವತ್ತ ಗಮನಹರಿಸಿ ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಭಾನುವಾರ 113 ಮತ್ತು ಸೋಮವಾರ 16 ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ದಿನಗಳಲ್ಲಿ ಪಾಸಿಟಿವಿಟಿ ದರವು 8 ರಿಂದ 11% ರ ನಡುವೆ ಇದೆ. ಈ ಬಗ್ಗೆ ಡೆಪ್ಯುಟಿ ಕಮಿಷನರ್ ಗುರುದತ್ತ ಹೆಗ್ಡೆ ಮಾತನಾಡಿ, ನಾವು ಈಗ ಎಲ್ಲಾ ಅರ್ಹ ಜನರಿಗೆ ಬೂಸ್ಟರ್ ಡೋಸ್‌ಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Breaking: ದೇಶದಲ್ಲಿ 12 ಸಾವಿರಕ್ಕೆ ಇಳಿದ ಕೊರೊನಾ ಪ್ರಕರಣಗಳುBreaking: ದೇಶದಲ್ಲಿ 12 ಸಾವಿರಕ್ಕೆ ಇಳಿದ ಕೊರೊನಾ ಪ್ರಕರಣಗಳು

 ಮೆಗಾ ಲಸಿಕೆ ಶಿಬಿರವನ್ನು ಆಯೋಜನೆ

ಮೆಗಾ ಲಸಿಕೆ ಶಿಬಿರವನ್ನು ಆಯೋಜನೆ

ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಸಾರ್ವಜನಿಕರಿಂದ ಹೆಚ್ಚು ಮುಂದಾಗುತ್ತಿಲ್ಲ. ಆದರೆ ಈಗ ನಾವು ಆರು ತಿಂಗಳ ಹಿಂದೆ ಎರಡನೇ ಡೋಸ್ ತೆಗೆದುಕೊಂಡವರಿಗೆ ಬೂಸ್ಟರ್ ಡೋಸ್ ನೀಡಲು ಪರ್ಯಾಯ ದಿನಗಳಲ್ಲಿ ಮೆಗಾ ಲಸಿಕೆ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ವೈರಸ್ ವಿರುದ್ಧ ಹೋರಾಡಲು ವ್ಯಾಕ್ಸಿನೇಷನ್ ಏಕೈಕ ಮಾರ್ಗವಾಗಿದೆ. ಜಿಲ್ಲಾ ಆಸ್ಪತ್ರೆಗಳು, ಕಿಮ್ಸ್, ಪಿಎಚ್‌ಸಿಗಳು, ಎಚ್‌ಡಿಎಂಸಿ ಆಸ್ಪತ್ರೆಗಳು ಮತ್ತು ಇತರ ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ತಂಡಗಳು ವ್ಯಾಕ್ಸಿನೇಷನ್ ಡ್ರೈವ್‌ಗಳಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ಹೇಳಿದರು.

 ಜನ ಕೋವಿಡ್ ಪರೀಕ್ಷೆಗಳಿಗೆ ಹೋಗುತ್ತಿಲ್ಲ

ಜನ ಕೋವಿಡ್ ಪರೀಕ್ಷೆಗಳಿಗೆ ಹೋಗುತ್ತಿಲ್ಲ

ಜನರು ಮಾಸ್ಕ್ ಧರಿಸದೇ ಇರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣ. ಇದಲ್ಲದೆ, ರೋಗಲಕ್ಷಣಗಳ ಹೊರತಾಗಿಯೂ ಅನೇಕ ಜನರು ಆರಂಭಿಕ ಕೋವಿಡ್ ಪರೀಕ್ಷೆಗಳಿಗೆ ಹೋಗುತ್ತಿಲ್ಲ. ಸಕಾಲಿಕ ಚಿಕಿತ್ಸೆ ತೆಗೆದುಕೊಳ್ಳಲು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷೆಗೆ ಒಳಗಾಗಬೇಕು ಎಂದು ಅವರು ಹೇಳಿದ್ದಾರೆ.

 33 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ

33 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ

ಅದೃಷ್ಟವಶಾತ್, ಹೆಚ್ಚಿನ ಪ್ರಕರಣಗಳು ಗಂಭೀರವಾಗಿಲ್ಲ ಮತ್ತು ಕೇವಲ 33 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ ಉಳಿದವರು ತಮ್ಮ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು 3,425 ಹಾಸಿಗೆಗಳನ್ನು ಕಾಯ್ದಿರಿಸಿದ್ದೇವೆ. ಅದರಲ್ಲಿ ನಾವು 1,902 ಆಮ್ಲಜನಕಯುಕ್ತ ಹಾಸಿಗೆಗಳು ಮತ್ತು 356 ಐಸಿಯು ಹಾಸಿಗೆಗಳನ್ನು ಮೀಸಲಿರಿಸಿದ್ದೇವೆ ಎಂದು ಡಿಸಿ ಹೇಳಿದರು.

 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ

ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ

ಸದ್ಯಕ್ಕೆ ದಂಡ ವಿಧಿಸಲು ಸರ್ಕಾರದಿಂದ ಯಾವುದೇ ನಿರ್ದೇಶನವಿಲ್ಲ. ಆದರೆ ಜನರು ಸುರಕ್ಷಿತವಾಗಿರಲು ಸ್ವಯಂಪ್ರೇರಣೆಯಿಂದ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ, ಭವಿಷ್ಯದಲ್ಲಿ ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ದಂಡವನ್ನು ವಿಧಿಸುವಂತಹ ಕಠಿಣ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

English summary
people is now free from Covid-19. But in different parts of the country, Corona is making loud noise again. Experts have warned that if this continues, people will have to face hardship again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X