• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕೊರೊನಾ ಹೆಚ್ಚಳಕ್ಕೆ ಕಾರಣ

|

ಬೆಂಗಳೂರು, ಆ 31: ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ, ಮೋದಿ ಸರಕಾರವನ್ನು ಲೇವಡಿ ಮಾಡಿದ್ದಾರೆ.

   ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

   ಈ ಬಗ್ಗೆ ದಿನೇಶ್ ಗುಂಡೂರಾವ್ ಮಾಡಿರುವ ಟ್ವೀಟ್ ಹೀಗಿದೆ, "ಗಂಟೆ ಬಾರಿಸಿ.,ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ‌ ಮೋಸಗೊಳಿಸಿದ ಪರಿಣಾಮವಿದು..! ಬಿಜೆಪಿ ಘೋಷಿತ 'ವಿಶ್ವಗುರು'ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ?".

   ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು- ದಿನೇಶ್ ಗುಂಡೂರಾವ್

   "ಕೆಲುವು ದಿನಗಳಲ್ಲಿ ವಿಶ್ವದಲ್ಲೇ ಒಂದನೇ ಸ್ಥಾನಕ್ಕೆ ಭಾರತ ಏರುವುದು ನಿಸ್ಸಂದೇಹ. ಜನಸಂಖ್ಯೆ ಹೆಚ್ಚಿರುವುದರಿಂದ ಇದು ಆಶ್ಚರ್ಯಕರ ಸಂಗತಿ ಅಲ್ಲ. ಆದರೆ, ನೆರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ವೈಫಲ್ಯ ಸ್ಪಷ್ಟವಾಗುತ್ತದೆ".

   "ಪಾಕಿಸ್ತಾನ,ಬಾಂಗ್ಲಾದೇಶ,ನೇಪಾಳ,ಬರ್ಮಾ,ಶ್ರೀಲಂಕಾ,ಅಫಘಾನಿಸ್ತಾ,ಭೂತಾನ್,ಚೀನಾ ದೇಶದವರು ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ"ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. ದಿನೇಶ್ ಟ್ವೀಟಿಗೆ ನೆಟ್ಟಿಗರು ಗರಂ ಆಗಿದ್ದಾರೆ.

   "ಲಾಕ್ ಡೌನ್ ಮಾಡಿ ಎಂದು ಸಲಹೆ ಕೊಟ್ಟವರು ನೀವೇ.... ದೀಪ ಹಚ್ಚಿ ಎಂದಾಗ ದೀಪ ಬೆಳಗಿದವರು ನೀವೇ... ಶಾಸಕರ ಮನೆಗೆ ಬೆಂಕಿ ಹಚ್ಚಲು ಪ್ರೇರೇಪಿಸಿದವರು ನಿಮ್ಮ ಪಕ್ಷದವರೇ... 'ದೀಪ ಹಚ್ಚಿ ಎಂದಾಗ ಟೀಕಿಸಿದಿರಿ' ನಿಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದವರನ್ನು ಮುಚ್ಚಿಹಾಕುವ ಪ್ರಯತ್ನ ಮಾಡ್ತಿರಾ. ಏನ್ ರಾಜಕೀಯ ಸ್ವಾಮಿ ನಿಮ್ಮದು" ಇದು ದಿನೇಶ್ ಗುಂಡೂರಾವ್ ಟ್ವೀಟಿಗೆ ಬಂದ ರಿಪ್ಲೈ.

   "ಸ್ವಾಮೀ,ಜನ ಸಂಖ್ಯೆ ತುಲನೆ ಮಾಡಿ. ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಿಲ್ಲಿಸಿ. ಕಾಂಗ್ರೆಸ್ಸು ನಾಚಿಕೆ ಇಲ್ಲದ ಪಕ್ಷ. ಎಲ್ಲ ದೇಶಗಳೂ ಘಂಟೆ ಬಾರಿಸಿದರು, ದೀಪ ಹಚ್ಚಿದರು, ಚಪ್ಪಾಳೆ ತಟ್ಟಿದರು. ಔಷಧಿಯೇ ಇಲ್ಲದಿದ್ದರೆ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು ಅಲ್ಲವೇ. ಮಾಡದಿದ್ದಲ್ಲಿ ಸಾವಿನ ಸಂಖ್ಯೆ ಅಟ್ಟಕ್ಕೇರುತಿತ್ತು. ಸಾಕು ನಿಲ್ಲಿಸಿ ಪ್ರಲಾಪ!" ಇದು ಇನ್ನೊಂದು ಪ್ರತಿಕ್ರಿಯೆ.

   English summary
   Corona Case Increasing Day By Day: Congress Leader Dinesh Gundu Rao Tweet,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X