ಕನ್ನಡಿಗರ ಜೀವನಾಡಿ ಕಾವೇರಿ ತಾಯಿಗೆ 50ನೇ ಮಹಾಆರತಿ

By: ಲತೀಶ್ ಪೂಜಾರಿ
Subscribe to Oneindia Kannada

ಕುಶಾಲನಗರ, ಮಾರ್ಚ್, 07: ಕೊಡಗಿನ ಕುಶಾಲನಗರದಲ್ಲಿ ಕಾವೇರಿ ಹಬ್ಬದ ಸಂಭ್ರಮ. ಎರಡು ದಿನ ನಡೆದ ಮಾತೆ ಕಾವೇರಿ 50ನೇ ಮಹಾ ಆರತಿ ಸಂಭ್ರಮದ ಅಂಗವಾಗಿ ಕುಶಾಲನಗರದಲ್ಲಿ ಸಡಗರ ಮನೆ ಮಾಡಿತ್ತು.

ಕಾವೇರಿ ನದಿ ಪಾತ್ರದ ಜಂಟಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಇದೇ ಸಂದರ್ಭದಲ್ಲಿ ಹೇಳಿದರು.[ದರ್ಶನವಿತ್ತ ಕಾವೇರಿ,,, ಚಿತ್ರಗಳಲ್ಲಿ ನೋಡಿ]

ಕಾವೇರಿ 50ನೇ ಮಹಾ ಆರತಿ ಸಂಭ್ರಮದ ಅಂಗವಾಗಿ ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಮಾತೆ ಕಾವೇರಿ ಮಹಾ ಆರತಿ ಕ್ಷೇತ್ರದಲ್ಲಿ ಮಾರ್ಚ್ 3 ಮತ್ತು 4ರಂದು ಕಾರ್ಯಕ್ರಮ ಗಣ್ಯರ ಸಮಾಗಮದೊಂದಿಗೆ ಪರಿಸರ ಸಂರಕ್ಷಣೆ ಪಾಠ ಹೇಳಿತು.[ಗಂಗಾ ಮಾತೆಯಂತೆ ಕಾವೇರಿ ತಾಯಿಗೂ ಸ್ವಚ್ಛತಾ ಭಾಗ್ಯ]

ಹೇಮಾವತಿ ವಿ ಹೆಗ್ಗಡೆ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಕೊಡಗು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್, ಪ.ಪಂ. ಅಧ್ಯಕ್ಷ ಡಿ.ಕೆ.ತಿಮ್ಮಪ್ಪ, ಮಾತೆ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆ ಸಮಿತಿ ಸಂಸ್ಥಾಪಕರಾದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ಕಾವೇರಿ ಸ್ವಚ್ಚತಾ ಆಂದೋಲನ ಸಮಿತಿ ಕೊಡಗು ಜಿಲ್ಲಾಧ್ಯಕ್ಷರಾದ ರೀನಾ ಪ್ರಕಾಶ್ ಹಾಜರಿದ್ದರು.

ಎರಡು ದಿನದ ಕಾರ್ಯಕ್ರಮಕ್ಕೆ ಕೂಡಾ ಅಧ್ಯಕ್ಷರಾದ ಎಸ್.ಎನ್.ನರಸಿಂಹಮೂರ್ತಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರಪ್ರಸಾದ್, ಮಾತೆ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಡಿ.ಆರ್.ಸೋಮಶೇಖರ್, ವಾಸು, ಎ.ಜಿ.ಮಹೇಶ್ ವೈಶಾಖ್, ಜಗದೀಶ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಪ್ರವೀಣ್, ಕೃಷ್ಣೇಗೌಡ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಶಿವಾನಂದನ್, ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ, ಎಂ.ಎನ್.ಚಂದ್ರಮೋಹನ್ , ಕುಮಾರ್ ಸಾಕ್ಷಿಯಾದರು.

ಸ್ವಚ್ಛತೆ ಎಲ್ಲರ ಹೊಣೆ

ಸ್ವಚ್ಛತೆ ಎಲ್ಲರ ಹೊಣೆ


ಪ್ರತಿಯೊಬ್ಬರೂ ಕೂಡ ನದಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನದಿ ದಂಡೆಗಳಲ್ಲಿ ವಾಸಿಸುವ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಧಿವೇಶನದಲ್ಲಿ ಕಾವೇರಿ ನದಿ ಸಂರಕ್ಷಣೆ ಕುರಿತು ವಿಷಯ ಪ್ರಸ್ತಾಪಿಸಿ ಅನುದಾನ ಬಿಡುಗಡೆಗೆ ಆಗ್ರಹಿಸುತ್ತೇನೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಪ್ರಾರ್ಥನೆ

ಪ್ರಾರ್ಥನೆ

ಕಾವೇರಿ ನದಿ ಸಂರಕ್ಷಣೆಗೆ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಚಂದ್ರಮೋಹನ್ ಮತ್ತು ತಂಡದವರ ಕಾರ್ಯ ಶ್ಲಾಘನೀಯವಾಗಿದ್ದು ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ಮತ್ತು ಇಲಾಖೆಗಳ ಪರವಾಗಿ ನೀಡಲಾಗುವುದು. ಮಿಹಿಳೆಯರು ಪ್ರಾರ್ಥನೆ ಮಾಡಿದ್ದು ವಿಶೇಷ.

ಮಹಾಯುದ್ಧ ಆದರೆ ನೀರಿಗಾಗಿಯೇ

ಮಹಾಯುದ್ಧ ಆದರೆ ನೀರಿಗಾಗಿಯೇ

ಮತ್ತೊಂದು ಮಹಾಯುದ್ಧ ಸಂಭವಿಸುವುದಾದರೆ ಅದು ಕುಡಿವ ನೀರಿಗಾಗಿ ನಡೆಯಲಿದೆ. ನಗರೀಕರಣ, ಜನಸಂಖ್ಯಾ ಸ್ಪೋಟದಿಂದ ನಿಸರ್ಗದ ಮೇಲಿನ ಒತ್ತಡ ಹೆಚ್ಚಾಗುತ್ತಿದೆ ಎಂದು ವಿರಾಜಪೇಟೆಯ ಹಿರಿಯ ಸಿವಿಲ್ ನ್ಯಾಯಾಧೀಶ ಜಿನರಾಳ್ಕರ್ ಬಾಬಾಸಾಹಿಬ್ ಲಗಮಪ್ಪ ಹೇಳಿದರು.

ಮುಂದೊಂದು ದಿನ ಗಂಡಾಂತರ

ಮುಂದೊಂದು ದಿನ ಗಂಡಾಂತರ

ಜೀವನದ ಆಧಾರವಾಗಿರುವ ಕಾವೇರಿ ನದಿ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದೊಂದು ದಿನ ಮನುಕುಲ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರಿನ ಭಕ್ತಿ ಭಾರತ ಪ್ರತಿಷ್ಠಾನದ ವಿದ್ಯಾಭೂಷಣರು ಆತಂಕ ವ್ಯಕ್ತಪಡಿಸಿದರು.

ಲಕ್ಷವೃಕ್ಷ ಯೋಜನೆಗೆ ಚಾಲನೆ

ಲಕ್ಷವೃಕ್ಷ ಯೋಜನೆಗೆ ಚಾಲನೆ

ಕೊಡಗು ಜಿಲ್ಲೆಯ ನದಿ ತಟದಲ್ಲಿ ಲಕ್ಷವೃಕ್ಷ ನೆಡುವ ಯೋಜನೆಗೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು. ನದಿ ತಟದಲ್ಲಿ ಬಿದಿರು ಗಿಡಗಳನ್ನು ನೆಡುವ ಮೂಲಕ ನಿವೃತ್ತ ಐಎಫ್‍ಎಸ್ ಅಧಿಕಾರಿ ಹಾಗೂ ಬ್ಯಾಂಬು ಸೊಸೈಟಿ ಆಫ್ ಇಂಡಿಯಾದ ಕೆ.ಸುಂದರ ನಾಯಕ್ ಚಾಲನೆ ನೀಡಿದರು.

 ರೈತರಿಗೆ ಉಚಿತವಾಗಿ ಗಿಡ ನೀಡುತ್ತಿದ್ದೇವೆ

ರೈತರಿಗೆ ಉಚಿತವಾಗಿ ಗಿಡ ನೀಡುತ್ತಿದ್ದೇವೆ

ಕೃಷಿ ಇಲಾಖೆಯ ಮೂಲಕ ರೈತಾಪಿ ವರ್ಗಕ್ಕೆ ಗಿಡಗಳ ವಿತರಣೆ ಮಾಡಲು ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಸದುಪಯೋಗವಾಗಬೇಕಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಬೆಳ್ಳಿಯಪ್ಪ ಹೇಳಿದಿರು.

ಅರಣ್ಯಾಧಿಕಾರಿಗೆ ಸನ್ಮಾನ

ಅರಣ್ಯಾಧಿಕಾರಿಗೆ ಸನ್ಮಾನ

ಕೊಡಗು ಜಿಲ್ಲಾಡಳಿತದಿಂದ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದ ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕುಶಾಲನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಟ್ಟುನಿಟ್ಟಿನ ಕಾನೂನು ಬೇಕು

ಕಟ್ಟುನಿಟ್ಟಿನ ಕಾನೂನು ಬೇಕು

ಯೋಜನೆ ಹಾಗೂ ಕಾನೂನು ರೂಪುಗೊಳ್ಳುವ ಮೂಲಕ ನದಿ ಮಲಿನವಾಗುವುದದನ್ನು ಶಾಶ್ವತವಾಗಿ ತಪ್ಪಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kushalnagar: Kodagu district (Coorg) Kushalnagar witnessed two day Cauvery (Kaveri) habba, to take the initiative of river Conservation.
Please Wait while comments are loading...